news18-kannada Updated:October 29, 2020, 7:24 PM IST
ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ಉಮೇಶ್ ಕತ್ತಿ,
ಬೆಳಗಾವಿ(ಅ. 29): ಒಂದೇ ಪಕ್ಷದ ನಾಯಕರಾದರೂ ಮೂರು ಬಣಗಳಾಗಿದ್ದ ಜಿಲ್ಲೆಯ ನಾಯಕರು ಈಗ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಒಗ್ಗೂಡಿದ್ದಾರೆ. ಬಿಜೆಪಿ ವರಿಷ್ಠ, ಆರ್ಎಸ್ಎಸ್ ಪ್ರಮುಖರ ಸಂಧಾನ ಪ್ರತಿಫಲ ಜಿಲ್ಲೆಯ ನಾಯಕರು ಒಗ್ಗೂಡಿದ್ದು, ಜಿಲ್ಲೆಯಲ್ಲಿ ಹೊಸ ರಾಜಕಾರಣದ ಪರ್ವ ಆರಂಭಕ್ಕೆ ಇದು ಮುನ್ನುಡಿ ಬರೆದಿದೆ. ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯದಲ್ಲಿಯೆ ಗಮನ ಸೆಳೆದಿತ್ತು. ಸಹಾಕಾರಿ ಕ್ಷೇತ್ರ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ಮೂರು ಬಣಗಳು ಪೈಪೋಟಿ ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದ್ದವು. ಆದರೆ ಬಿಜೆಪಿ ವರಿಷ್ಠರು, ಆರ್ ಎಸ್ ಎಸ್ ಪ್ರಮುಖರು ಇದಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಂಧಾನ ಪ್ರತಿಫಲವಾಗಿ ಜಿಲ್ಲೆಯಲ್ಲಿ ಮೊದಲ ಸಲ ಜಾರಕಿಹೊಳಿ, ಕತ್ತಿ ಹಾಗೂ ಸವದಿ ಒಂದಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅವಿರೋಧ ಆಯ್ಕೆಗೆ ಮುಂದಾಗಿದ್ದಾರೆ. ಜಿಲ್ಲೆಯ ಡಿಸಿಸಿ ಬ್ಯಾಂಕ್ ಗೆ ಒಟ್ಟು 16 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಈಗಾಗಲೇ 7 ಸ್ಥಾನಗಳಿಗೆ ಒಬ್ಬರೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ. ಇನ್ನೂಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮನವೊಲಿಕೆ ಕಾರ್ಯ ನಿರಂತವಾಗಿ ನಡೆಯುತ್ತಿದೆ. ಅಭ್ಯರ್ಥಿಗಳ ಮನವೊಲಿಕೆ ಸ್ವತಃ ಮೂರು ಜನ ಪ್ರಮುಖ ನಾಯಕರೇ ಮುಂದಾಗಿದ್ದಾರೆ.
ಅಥಣಿ- ಲಕ್ಷ್ಮಣ ಸವದಿ, ಸವದತ್ತಿ- ಆನಂದ ಮಾಮನಿ, ಚಿಕ್ಕೋಡಿ- ಅಣ್ಣಾಸಾಬ್ ಜೊಲ್ಲೆ, ಹುಕ್ಕೇರಿ ರಮೇಶ ಕತ್ತಿ ಸೇರಿ 7 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನೂ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಎಂಇಎಸ್ ಮುಖಂಡ ಅರವಿಂದ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಕ್ಷೇತ್ರ ಕಗ್ಗಂಟಾಗಿದ್ದು, ನಾಯಕರು ಮನವೊಲಿಕೆ ಮುಂದುವರೆದಿದೆ. ಆದರೇ ಯಾವುದೇ ಕಾರಣಕ್ಕೆ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಇಂದು ಡಿಸಿಸಿ ಬ್ಯಾಂಕ್ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಸಾಬ್ ಜೊಲ್ಲೆ, ಈರಣ್ಣ ಕಡಾಡಿ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಹ ಮಹಾಂತೇಶ ದೊಡ್ಡಗೌಡರ್ ನಾಮಪತ್ರ ಸಲ್ಲಿಕೆ ಮಾಡಿದರು.
ಇದನ್ನು ಓದಿ: ದೆಹಲಿ ಮಹಾರಾಣಿ ಖುಷಿ ಪಡಿಸಿದಕ್ಕೆ ಪ್ರಮೋಷನ್; ಡಿಕೆಶಿ ವಿರುದ್ಧ ಕಟೀಲ್ ಪರೋಕ್ಷ ವಾಗ್ದಾಳಿ
ನಂತರ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ರು. ಈ ವೇಳೆಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಜಿಲ್ಲೆ ಹಾಗೂ ಬ್ಯಾಂಕ್ ಹಿತದೃಷ್ಠಿಯಿಂದ ಅವಿರೋಧ ಆಯ್ಕೆಗೆ ಶ್ರಮಿಸುತ್ತಿದ್ದೇವೆ. ಪಕ್ಷದ ವರಿಷ್ಠರು ಹಾಗೂ ಆರ್ ಎಸ್ ಎಸ್ ಪ್ರಮುಖರು ಸೂಚನೆ ನೀಡಿದ್ದರು. ಜಿಲ್ಲೆಯ ನಾಯಕರು ಒಂದೇ ವೇದಿಕೆಯಲ್ಲಿ ಬಂದಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸ ಬದಿಗಿಟ್ಟು ಒಂದಾಗಿದ್ದೇವೆ. ಒಂದೇ ಪಕ್ಷದಲ್ಲಿ ಬೇರೆ ಬೇರೆ ಬಣ ಬೇಡ ಎಂಬುದು ಪಕ್ಷದ ನಿರ್ಧಾರವಾಗಿತ್ತು, ಅವರ ಮಾತಿಗೆ ಗೌರವ ನೀಡಿದ್ದೇವೆ. ಮುಂದಿನ 20 ವರ್ಷ ನಮ್ಮ ಒಂದಾಗಿ ಹೋಗುತ್ತೇವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ. ಈಗಲೇ ಬಹಿರಂಗವಾಗಿ ಯಾವುದನ್ನು ಹೇಳುವುದಿಲ್ಲ ಎಂದರು.
ನಂತರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಡಿಸಿಸಿ ಬ್ಯಾಂಕ್ ನಿಂದಲೇ ನಮ್ಮ ಸಂಬಂಧಗಳು ಹಾಳಾಗಿದ್ದವು. ಇದೀಗ ಡಿಸಿಸಿ ಬ್ಯಾಂಕ್ ನಿಂದಲೇ ಒಂದಾಗಿದ್ದೇವೆ. ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಮಾಡಲು ಪ್ರಯತ್ನ ಮಾಡುತ್ತೇವೆ ಎಂದರು. ಇನ್ನೂ ಉಮೇಶ ಕತ್ತಿ ಮಾತನಾಡಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಆಹ್ವಾನ ನೀಡುತ್ತೇವೆ ಎಂದರು.
Published by:
Seema R
First published:
October 29, 2020, 7:24 PM IST