ಬಿಎಸ್​​ವೈ ಎದುರೇ ಕೈಕೈ ಮಿಲಾಯಿಸಿದ ಬಿಜೆಪಿ ಕಾರ್ಯಕರ್ತರು; ಟಿಕೆಟ್​​​ಗಾಗಿ ಯತ್ನಾಳ ಮತ್ತು ಅಪ್ಪು ಬೆಂಬಲಿಗರ ಹೊಡೆದಾಟ!

ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಯುವಕರಿಗೆ ಲೋಕಸಭೆ ಟಿಕೆಟ್​​​ ನೀಡಿ ಎಂದು ಯತ್ನಾಳ್​​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಾಲಿ ಸಂಸದ ರಮೇಶ್​​ ಜಿಗಜಿಣಗಿ ವಿರುದ್ಧ ಘೋಷಣೆ ಹಾಕುವ ಮೂಲಕ ಟಿಕೆಟ್​​ ನೀಡಬೇಡಿ ಎಂದು ಕಿಡಿಕಾರಿದ್ಧಾರೆ.

Ganesh Nachikethu | news18
Updated:February 23, 2019, 4:09 PM IST
ಬಿಎಸ್​​ವೈ ಎದುರೇ ಕೈಕೈ ಮಿಲಾಯಿಸಿದ ಬಿಜೆಪಿ ಕಾರ್ಯಕರ್ತರು; ಟಿಕೆಟ್​​​ಗಾಗಿ ಯತ್ನಾಳ ಮತ್ತು ಅಪ್ಪು ಬೆಂಬಲಿಗರ ಹೊಡೆದಾಟ!
ಬಿಜೆಪಿ ಕಾರ್ಯಕರ್ತರ ಗಲಾಟೆ(ಪ್ರಾಯೋಗಿಕ ಚಿತ್ರ)
Ganesh Nachikethu | news18
Updated: February 23, 2019, 4:09 PM IST
ವಿಜಯಪುರ(ಫೆ.23): ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​​ ಯಡಿಯೂರಪ್ಪನವರ ಎದುರೇ ಶಾಸಕ ಬಸವನಗೌಡ ಯತ್ನಾಳ್ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು ರಮೇಶ್​​ ಜಿಗಜಿಣಗಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಯುವಕರಿಗೆ ಲೋಕಸಭೆ ಟಿಕೆಟ್​​​ ನೀಡಿ ಎಂದು ಯತ್ನಾಳ್​​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಾಲಿ ಸಂಸದ ರಮೇಶ್​​ ಜಿಗಜಿಣಗಿ ವಿರುದ್ಧ ಘೋಷಣೆ ಹಾಕುವ ಮೂಲಕ ಟಿಕೆಟ್​​ ನೀಡಬೇಡಿ ಎಂದು ಕಿಡಿಕಾರಿದ್ಧಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್​​ ನೀಡಬೇಕು. ಹಾಲಿ ಸಂಸದ ರಮೇಶ್​​​ ಜಿಗಜಿಣಗಿ ಅವರಿಗೆ ಟಿಕೆಟ್​​ ನೀಡಬಾರದು. ಯುವಕರಿಗೆ ಮೊದಲ ಆದ್ಯತೆ ನೀಡಿ ಎಂದು ಶಾಸಕ ಬಸವರಾಜ್​​ ಯತ್ನಾಳ್​​ ಬೆಂಬಲಿಗರು ಕಿಡಿಕಾರಿದ್ದಾರೆ. ಇನ್ನು ಬಿ.ಎಸ್ ಯಡಿಯೂರಪ್ಪ ಎದುರೇ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಯತ್ನಾಳ ಬೆಂಬಲಿಗರು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಿಎಸ್​​ವೈಗೆ ಕಸಿವಿಸಿ ತಂದಿದ್ದು, ಸಭೆಗೆ ಅಡ್ಡಿಪಡಿಸುವುದು ಸರಿಯಾದ ನಡೆಯಲ್ಲ ಎಂದು ಜರೆದಿದ್ಧಾರೆ. ಜತೆಗೆ ‘ಭೋಲೋ ಭಾರತ್​​ ಮಾತಾ ಕೀ ಜೈ’ ಎಂದು ಘೋಷಣ ಹಾಕಿಸಿ ಸುಮ್ಮನಿರಿಸಿದ್ದಾರೆ.

ಇದನ್ನೂ ಓದಿ: Fire at Air show: ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ, 100 ಕ್ಕೂ ಹೆಚ್ಚು ಕಾರುಗಳು ಭಸ್ಮ; ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತ

ಇನ್ನು ಯತ್ನಾಳ ಬೆಂಬಲಿಗರು ಜಿಗಜಿಣಗಿ ಬೆಂಬಲಿಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯತ್ನಾಳ ಮತ್ತು ಅಪ್ಪು ಬೆಂಗಲಿಗರು ಜಿಗಜಿಣಗಿ ಬೆಂಬಲಿಗನ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಬಾಯಿಂದ ರಕ್ತ ಸೋರುತ್ತಿದೆ. ಶರಣು ಎಂಬುವರ ಬಾಯಿಂದ ರಕ್ತ ಸೋರುತ್ತಿದ್ದು, ಪಾಟೀಲ ಎನ್ನುವವರ ಮೇಲೆಯೂ ದಾಳಿ ನಡೆಸಿದ್ದಾರೆ ಎಂದು ಯತ್ನಾಳ್​​ ಬೆಂಬಲಿಗರ ಮೇಲೆ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ನಾನು ಅಭ್ಯರ್ಥಿಯಾಗುವಂತೆ ಗ್ರೀನ್ ಸಿಗ್ನಲ್ ನೀಡಿದ್ದು ನಿಜ, ದೇವೇಗೌಡರು ಬಂದರೇ ಸ್ವಾಗತ; ಪ್ರುಜ್ವಲ್​ ರೇವಣ್ಣ

ಇನ್ನು ಅಪ್ಪು ಮತ್ತು ಯತ್ನಾಳ್​​​ ಹಾಗೂ ರಮೇಶ್​​​ ಜಿಗಜಿಣಗಿ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗದೇ ಬಿಎಸ್​​ವೈ ಸುಸ್ತಾಗಿದ್ದಾರೆ. ಎಷ್ಟೇ ಹೇಳಿದರು ತಮ್ಮ ಕೇಳದೇ ಕೈಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
---------------
Loading...

First published:February 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...