ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ; ಅಮಿತ್ ಶಾ ಭಾಷಣವನ್ನು ಹೀಗಳೆದ ಡಿಕೆಶಿ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ವಿಶ್ವಾಸ ನೀಡಿದ್ದರು. ಆದರೆ, ಈವರೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಬದಲಾಗಿ ಸಿಎಎ ಪರ ಭಾಷಣ ಮಾಡಲು ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.​

news18-kannada
Updated:January 20, 2020, 1:44 PM IST
ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ; ಅಮಿತ್ ಶಾ ಭಾಷಣವನ್ನು ಹೀಗಳೆದ ಡಿಕೆಶಿ
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು (ಜನವರಿ 20); ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಭಾಷಣ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ನಡೆಯನ್ನು ಕಟುವಾಗಿ ಟೀಕಿಸಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್​, "ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ. ಈಗ ಸಿಎಎ ಪರ ಭಾಷಣ ಮಾಡಲು ಬಂದಿದ್ದಾರೆ" ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ವಿಶ್ವಾಸ ನೀಡಿದ್ದರು. ಆದರೆ, ಈವರೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಬದಲಾಗಿ ಸಿಎಎ ಪರ ಭಾಷಣ ಮಾಡಲು ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.​

ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಮಾತನಾಡಿರುವ ಅವರು, "ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನನ್ನ ಬಳಿ ಏನನ್ನೂ ಕೇಳಬೇಡಿ. ಯಾರ್ಯಾರು ಏನೇನು ಹೇಳಿಕೆ ಕೊಡ್ತಿದಾರೆ, ಮಾಧ್ಯಮದಲ್ಲಿ ಏನೇನು ಬರ್ತಿದೆ, ಇದೆಲ್ಲವನ್ನೂ ನಾನು ಗಮನಿಸುತ್ತಿದ್ದೇನೆ.  ನಾನು ಯಾವ ಗುಂಪಿಗೂ ಸೇರೋದಿಲ್ಲ. ನಂದು ಕಾಂಗ್ರೆಸ್​ ಬಣ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆ ಮಾಧ್ಯಮದಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಯಾರ್ಯಾರು‌ ಇದರ ಬಗ್ಗೆ ಮಾತಾಡ್ತಿದ್ದಾರೋ ಅವರನ್ನೇ ಕೇಳಿ. ನನಗೆ ಈ ಕುರಿತು ಏನೂ ಗೊತ್ತಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಭದ್ರತಾ ವೈಫಲ್ಯ, ವಿಮಾನ ನಿಲ್ದಾಣ ಕೆಲಕಾಲ ಬಂದ್
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading