ಫೋನ್​ ಕದ್ದಾಲಿಕೆ ವಿಚಾರ; ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಬಿಜೆಪಿ ನಾಯಕರ ಆಗ್ರಹ

ಅವರು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ‌ ಕೆಳಗೆ ನುಸುಳುತ್ತೇವೆ-ಅರವಿಂದ ಲಿಂಬಾವಳಿ

Latha CG | news18
Updated:August 14, 2019, 3:29 PM IST
ಫೋನ್​ ಕದ್ದಾಲಿಕೆ ವಿಚಾರ; ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಬಿಜೆಪಿ ನಾಯಕರ ಆಗ್ರಹ
ಬಿಎಸ್​ವೈ-ಸದಾನಂದಗೌಡ-ಆರ್.ಅಶೋಕ್​
  • News18
  • Last Updated: August 14, 2019, 3:29 PM IST
  • Share this:
ಫೋನ್​ ಕದ್ದಾಲಿಕೆ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ವಿಷಯವಾಗಿದೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ಧಾಗ ಎಚ್.ಡಿ.ಕುಮಾರಸ್ವಾಮಿ ಶಾಸಕರು ಹಾಗೂ ಅಧಿಕಾರಿಗಳ ಫೋನ್​ ಟ್ಯಾಪಿಂಗ್​ ಮಾಡಿಸಿದ್ಧಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಬಿಜೆಪಿ ನಾಯಕರು ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ಕಿಡಿಕಾರಿದ್ಧಾರೆ. ಈ ಬಗ್ಗೆ ದೂರು ಕೂಡ ದಾಖಲಾಗಿದ್ದು, ಸಿಎಂ ಯಡಿಯೂರಪ್ಪ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಶಾಸಕರು, ಅಧಿಕಾರಿಗಳ ಫೋನ್ ಕದ್ದಾಲಿಕೆ ‌ಕೇಸ್ ವಿಚಾರವಾಗಿ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ಧಾರೆ.

ಅಗತ್ಯ ಕ್ರಮ ಕೈಗೊಳ್ಳುತ್ತೇನೆ: ಸಿಎಂ ಬಿಎಸ್​ವೈ

ನಾನು‌ ಎಲ್ಲವನ್ನೂ ಗಮನಿಸಿದ್ದೇನೆ. ಅಧಿಕಾರಿಗಳ ಜೊತೆಗೆ‌ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಏನು‌ ಕ್ರಮ ಕೈಗೊಳ್ಳಬೇಕೋ‌ ಆ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಿ.ಎಸ್. ​ಯಡಿಯೂರಪ್ಪ ಹೇಳಿದ್ಧಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ಅರವಿಂದ ಲಿಂಬಾವಳಿ

ಫೋನ್ ಕದ್ದಾಲಿಕೆ ಮಾಡ್ತಿರೋದು ಮೊದಲೇ ಗೊತ್ತಿತ್ತು ಎಂದು ನ್ಯೂಸ್18ಗೆ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಅವರು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ‌ ಕೆಳಗೆ ನುಸುಳುತ್ತೇವೆ. ಹಾಗಾಗಿ ನನ್ನ ಫೋನ್​ನಲ್ಲಿ ಏನೂ ಅವರಿಗೆ ಸಿಕ್ಕಿರಲಿಲ್ಲ.
ಆದರೆ ಪೋನ್ ಕದ್ದಾಲಿಕೆ ಮಾಡಿದ್ದು ತಪ್ಪು ಎಂದು ಕಿಡಿಕಾರಿದ್ಧಾರೆ. ನನ್ನ ವೈಯಕ್ತಿಕ ಹಗರಣಕ್ಕೆ ಎಚ್​ಡಿಕೆ  ಏನು ಮಾಡಿದರು ಎಂಬುದು ಗೊತ್ತಿದೆ. ನನ್ನ ವಿಡಿಯೋ ಮಾರ್ಫಿಂಗ್ ವಿಚಾರದಲ್ಲಿ ಯಾರು ಯಾರು ಇದ್ದರು ಎಂಬುದು ನನಗೆ ಗೊತ್ತಿದೆ. ಈ ವಿಷಯವಾಗಿ ತನಿಖೆಯಾಗುತ್ತೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು  ಎಂದು ಲಿಂಬಾವಳಿ ಆಗ್ರಹಿಸಿದರು.

ನನಗೆ ಆರು ತಿಂಗಳ ಹಿಂದೆಯೇ ಗೊತ್ತಿತ್ತು; ಆರ್.ಅಶೋಕ್​​ಫೋನ್ ಕದ್ದಾಲಿಕೆ ‌ಬಗ್ಗೆ ಸಿಎಂಗೆ ದೂರು ನೀಡಿದ್ದೇವೆ ಎಂದು ಮಾಜಿ ಡಿಸಿಎಂ ಆರ್​. ಅಶೋಕ್​ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ನವರಿಗೆ ಈಗಾಗಲೇ ದೂರು ನೀಡಿದ್ದೇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತದೆ. ಪ್ರಕರಣ ತಾರ್ಕಿಕ ಅಂತ್ಯ‌ ಕಾಣಲೇಬೇಕು. ನಾನು ಆರು ತಿಂಗಳ ಹಿಂದೆ ಕೂಡ ಹೇಳಿದ್ದೆ. ಈಗ ಪೊಲೀಸ್ ಇಲಾಖೆಯೇ ವರದಿ ನೀಡಿದೆ. ಸಿಎಂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗುತ್ತೆ ಎಂದು ನ್ಯೂಸ್18ಗೆ ಬಿಜೆಪಿ ನಾಯಕ ಆರ್​.ಅಶೋಕ್ ತಿಳಿಸಿದ್ಧಾರೆ.

ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು; ಕೇಂದ್ರ ಸಚಿವ ಸದಾನಂದಗೌಡ

ಆಡಳಿತ ಮಾಡುವವರು ಯಾರೇ ಆದರೂ, ಇಂತಹ ಕೆಲಸ ಮಾಡಬಾರದು. ಎಲ್ಲರನ್ನು ರಕ್ಷಣೆ ಮಾಡುವಂತವರೇ, ಎಲ್ಲರ ಮೇಲೆ ನಿಗಾ ಹಿಡಿಸೋದು, ಫೋನ್ ಕದ್ದಾಲಿಕೆ ಮಾಡಿಸುವುದು ಸರಿಯಲ್ಲ. ಇದು ಅತ್ಯಂತ ಕ್ರಿಮಿನಲ್​ ಅಫೆನ್ಸ್​. ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಜವಾಬ್ದಾರಿ ಸ್ಥಾನದಲ್ಲಿ ಇರುವಂತರು ಈ ಕೆಲಸ ಮಾಡಬಾರದು. ಇದೊಂದು ‌ಅತ್ಯಂತ ಕೆಟ್ಟ ಕೆಲಸ. ಈಗಾಗಲೇ ಈ ಬಗ್ಗೆ ಒಂದಷ್ಟು ಮಾಹಿತಿ ಕಲೆ ಲಭ್ಯ ಆಗಿದೆ. ಹೀಗಾಗಿ ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು. ಅವರು ಎಷ್ಟೇ ದೊಡ್ಡವರಾದರೂ ಸರಿ ಅವರನ್ನು ಬಿಡಬಾರದು. ಅವರಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು ಎಂದು  ಕೇಂದ್ರ ಸಚಿವ ಸದಾನಂದಗೌಡ ಆಗ್ರಹಿಸಿದ್ದಾರೆ. ಇದೇ ವೇಳೆ ನ್ಯೂಸ್​ 18 ಕನ್ನಡಕ್ಕೆ ಅಭಿನಂದನೆ ಸಲ್ಲಿಸಿದರು.
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ