ಸಿಡಿ ಪ್ರಕರಣದ ಹಿಂದೆ ಬಿಜೆಪಿಯವರೇ ಇದ್ದಾರೆ; ಮಾಜಿ ಸಚಿವೆ ಮೋಟಮ್ಮ ಆರೋಪ

ಕಾಂಗ್ರೆಸ್ ನಾಯಕರಿಂದ ಸಂತ್ರಸ್ತ ಯುವತಿ ರಕ್ಷಣೆ ಕೇಳಿದ್ದಾಳೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಶೃಂಗೇರಿ ಸೇರಿದಂತೆ ಹಲವು ಕಡೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕಿಯರು.

ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕಿಯರು.

 • Share this:
  ಬೆಂಗಳೂರು: ನತದೃಷ್ಟ ಹೆಣ್ಣು ಮಗಳನ್ನ ದುರ್ಬಲಕೆ ಮಾಡಿಕೊಂಡಿದ್ದಾರೆ. 27 ದಿನಗಳ ಹಿಂದೆ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದಲೂ ಇದರ ಬಗ್ಗೆ ಸುದ್ದಿ ಆಗುತ್ತಿದೆ. ಆದರೆ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಬೇಕಾದ ಸರ್ಕಾರ ಒಂದು ಹೇಳಿಕೆ ಸಹ ಕೊಡ್ತಿಲ್ಲ. ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದಾರೆ. ಮಾತೇತ್ತಿದರೆ ರಾಮರಾಜ್ಯ ಎಂದು ಹೇಳ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಅವರು ಆರೋಪಿಸಿದರು.

  ಸಿಡಿ ಪ್ರಕರಣದ ವಿಚಾರವಾಗಿ ಮಾಜಿ ಸಚಿವರಾದ ಮೋಟಮ್ಮ, ಜಯಮಾಲ ಮತ್ತು ಉಮಾಶ್ರೀ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮೋಟಮ್ಮ ಮಾತನಾಡಿ, ರಮೇಶ್ ಜಾರಕಿಹೊಳಿ ಆ್ಯಂಡ್ ಟೀಮ್ ನಿಂದ ಯಡಿಯೂರಪ್ಪ ಸಿಎಂ ಆದ್ರು. ಅವರಿಗೆ ಕೊಟ್ಟ ಭರವಸೆಯನ್ನು ಸಿಎಂ ಈಡೇರಿಸಲಿಲ್ಲ. ಪದೇ ಪದೇ ಕೇಂದ್ರ ನಾಯಕರನ್ನ ಭೇಟಿ ಮಾಡಿದರು. ಜಾರಕಿಹೊಳಿ ಮತ್ತು ಟೀಮ್ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡಿದೆ. ಹೀಗಾಗಿ ಸಿಡಿ ಹೊರತಂದಿದ್ದಾರೆ. ಬಿಜೆಪಿ ಅವರೇ ಸಿಡಿ ಹಿಂದೆ ಇದ್ದಾರೆ ಎಂದು ಆರೋಪ ಮಾಡಿದರು.

  ಇಂತಹ ವಿಚಾರಗಳು ಶಾಸನ ಸಭೆಯಲ್ಲಿ ಚರ್ಚೆ ಮಾಡಬೇಕಾ. ಹೆಣ್ಣು ಮಕ್ಕಳ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ. ಏಕಪತ್ನಿ ವ್ರತಸ್ಥರೇ ಎಂದು ಸಚಿವರು ಪ್ರಶ್ನೆ ಮಾಡ್ತಾರೆ. ಇವರಿಗೆ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಗೌರವ ಇದೆ ಅನ್ನೋದನ್ನ ತೋರಿಸುತ್ತೆ.  ನಮಗೆ ಈ ಪ್ರಕರಣ ಬಾರಿ ಬೇಸರ ತರಿಸಿದೆ. ನಮ್ಮ ಅಧ್ಯಕ್ಷರ ಕೈವಾಡ ಇದರಲ್ಲಿ ಇಲ್ಲ. ನಮ್ಮ ಅಧ್ಯಕ್ಷರು ಈ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದರೆ ಆರೇ ತಿಂಗಳಲ್ಲಿ ಮಾಡ್ತಿದ್ರು.  ಇದಕ್ಕೆ ಒಂದೂವರೆ ವರ್ಷ ಬೇಕಿರಲಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಚನೆ ಆಗಿದ್ದ ಮಹಿಳೆಯರ ದೌರ್ಜನ್ಯ ಸಮಿತಿ ಮತ್ತೆ ರಚನೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತೆ ಎಂದು ಆಗ್ರಹಿಸಿದರು.

  ಇದನ್ನು ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ; ನೂರಕ್ಕೂ ಹೆಚ್ಚು ಮಂದಿ ವಶಕ್ಕೆ

  ಕಾಂಗ್ರೆಸ್ ನಾಯಕರಿಂದ ಸಂತ್ರಸ್ತ ಯುವತಿ ರಕ್ಷಣೆ ಕೇಳಿದ್ದಾಳೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಶೃಂಗೇರಿ ಸೇರಿದಂತೆ ಹಲವು ಕಡೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
  Published by:HR Ramesh
  First published: