ಬಿಜೆಪಿ ನಾಯಕರು ಸೈಲೆಂಟ್..!: ಅಧಿಕಾರ ಕೈ ತಪ್ಪಿದ ಹತಾಷೆಯಲ್ಲಿ 'ಕಮಲ' ಕಲಿಗಳು?
Updated:June 20, 2018, 8:55 AM IST
Updated: June 20, 2018, 8:55 AM IST
ನ್ಯೂಸ್ 18 ಕನ್ನಡ
ಬೆಂಗಳೂರು(ಜೂ.20): ಬಿಜೆಪಿ ನಾಯಕರು ಈಗ ಮೌನ ವಹಿಸಿದ್ದಾರೆ. ಚುನಾವಣೆ ಬಳಿಕ ಅಧಿಕಾರ ತಮ್ಮ ಪಾಲಿಗೇ ಒಲಿಯುತ್ತದೆ ಎಂದು ನಿರೀಕ್ಷೆಯಲ್ಲಿದ್ದ ನಾಯಕರಿಗೆ ಈಗ ಬರಸಿಡಿಲು ಬಡಿದಿದೆ. ಹೀಗಾಗಿ ಎಲ್ಲಾ ಬಿಜೆಪಿ ನಾಯಕರು ಮಣನ ತಾಳಿದ್ದು, ಕೊನೆ ಪಕ್ಷ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದವರೂ ಕೂಡ ದೂರವುಳಿದಿದ್ಧಾರೆ.
ರಾಜಕಾರಣಿಗಳಿಗೆ ಅಧಿಕಾರ ಇಲ್ಲದೆ ಹೋದರೆ ಹೇಗಾಗುತ್ತದೆ ಎನ್ನುವುದಕ್ಕೆ ಬಿಜೆಪಿ ನಾಯಕರೇ ಪ್ರತ್ಯಕ್ಷ ಸಾಕ್ಷಿ. ಚುನಾವಣೆಗೋಸ್ಕರ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿ ತಿರುಗಾಡಿದ್ದ ಬಿಜೆಪಿ ನಾಯಕರು ಈಗ ಸೈಲೆಂಟ್ ಆಗಿ ಸೈಡ್ಗೆ ಹೋಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರಂತೂ ರೈತ ಚೈತನ್ಯ ಯಾತ್ರೆ, ಪರಿವರ್ತನಾ ಯಾತ್ರೆ, ದಲಿತರ ಮನೆಗೆ ನಮ್ಮ ನಡಿಗೆ ಮುಂತಾದ ಹೆಸರಿನಲ್ಲಿ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಮಾಡಿದ್ರು. ಆದರೆ ಈಗ ಸುದ್ದಿಯೇ ಇಲ್ಲ.
ನಾಲ್ಕು ದಿನಕ್ಕೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ವಿಧಾನಸಭೆಯಲ್ಲಿ ಎಲ್ಲರೂ ಮೆಚ್ಚುವಂತೆ ಅಬ್ಬರಿಸಿದ್ದ ಯಡಿಯೂರಪ್ಪ, ಮಾರನೇ ದಿನದಿಂದ ಸೈಲೆಂಟ್ ಆದ್ರು. ಪರಿಷತ್ ಚುನಾವಣೆ, ಆರ್ ಆರ್ ನಗರ, ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿ ಸೋಲುಕಂಡಿತು. ಇದರಿಂದ ಯಡಿಯೂರಪ್ಪ ಮತ್ತಷ್ಟು ಕಂಗೆಟ್ಟರು. ಅಷ್ಟೇ ಅಲ್ಲ ಶೆಟ್ಟರ್, ಈಶ್ವರಪ್ಪ, ಅನಂತ್ಕುಮಾರ್, ಸದಾನಂದಗೌಡ, ಶೋಭಾ ಮುಂತಾದ ನಾಯಕರು ಈಗ ಎಲ್ಲಿದ್ದಾರೆ ಎಂದು ಹುಡುಕುವುದೇ ಕಷ್ಟವಾಗಿದೆ.ಬಿಜೆಪಿ ನಾಯಕರು ಸೈಲೆಂಟ್..!
ಇದಕ್ಕೆ ಬಿಜೆಪಿ ನಾಯಕರು ನೀಡುವ ಸಮಜಾಯಿಷಿಯೇ ಬೇರೆ. ಮೈತ್ರಿ ಸರ್ಕಾರದ ಹನಿಮೂನ್ ಅವಧಿಯನ್ನು ಬಿಜೆಪಿ ಗಮನಿಸುತ್ತಿದೆ ಎನ್ನುತ್ತಿದ್ದಾರೆ.
ಸಾಲ ಮನ್ನಾ ಬಗ್ಗೆ ಬಜೆಟ್ನಲ್ಲಿ ಘೋಷಣೆ ಆಗದಿದ್ದರೆ, ಮುಂದಿನ ಹೋರಾಟ ನಿರ್ಧರಿಸ್ತೀವಿ ಅಂತಾರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್.
ಒಟ್ಟಿನಲ್ಲಿ ಬಿಜೆಪಿ ನಾಯಕರು ಅಧಿಕಾರ ಇಲ್ಲದಿರುವುದರಿಂದ ಕಂಗೆಟ್ಟವರಂತಾಗಿದ್ದಂತೂ ಸತ್ಯ. ಅತ್ತ ಹೋರಾಟ ನಡೆಸಿದ್ರೂ ಇನ್ನೂ ಒಂದು ವರ್ಷ ಈ ಮೈತ್ರಿ ಸರ್ಕಾರವನ್ನು ಅಲುಗಾಡಿಸಲಾಗದು. ಸಂಸತ್ ಚುನಾವಣೆ ವರೆಗೆ ಮೈತ್ರಿ ಸರ್ಕಾರದಲ್ಲಿ ಆಪ್ಯತೆ ಇದ್ದೇ ಇರುತ್ತೆ ಎಂದು ತಮ್ಮ ಪಾಡಿಗೆ ತಾವು ಇದ್ದು ಬಿಟ್ಟಿದ್ದಾರೆ.

- ಅಧಿಕಾರ ಕೈ ತಪ್ಪಿದ ಹತಾಷೆಯಲ್ಲಿ ಬಿಜೆಪಿ ನಾಯಕರು
- ಬೆಂಗಳೂರಿನ 2 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಾಗಲಿಲ್ಲ
- ವಿಧಾನ ಪರಿಷತ್ನ ಒಂದು ಸ್ಥಾನ ಕೂಡ ಕೈತಪ್ಪಿತು
- ಅಬ್ಬರಿಸಿದ್ದ ನಾಯಕರು ಈಗ ಫುಲ್ ಸೈಲೆಂಟ್!
- ಸರ್ಕಾರ ವಿರುದ್ಧ ಹೋರಾಟಕ್ಕೂ ಈಗ ಉತ್ಸಾಹ ಇಲ್ಲ
- ಮುಖ್ಯಮಂತ್ರಿ ಆಗುವ ಯಡಿಯೂರಪ್ಪ ಆಸೆಗೆ ತಣ್ಣೀರು
- ರಾಜ್ಯದಲ್ಲಿ ವರ್ಕೌಟ್ ಆಗಲಿಲ್ಲ ಷಾ, ಮೋದಿ ಚಮತ್ಕಾರ
- ಬಿಜೆಪಿ ಘಟಾನುಘಟಿ ನಾಯಕರೆಲ್ಲಾ ಈಗ ಗಪ್ಚುಪ್
Loading...