ಹುಬ್ಬಳ್ಳಿ: ಎಲ್ಲಿದೆ ನಿಮ್ಮ ಆ ಪೌರುಷ? ಮಹಾದಾಯಿ (Mahadayi Project) ಆಗಿಯೇ ಬಿಡ್ತು ಅಂತ ವಿಜಯೋತ್ಸವ ಆಚರಣೆ ಸಹ ಮಾಡಿದ್ರಿ. ಪಟಾಕಿ ಹಚ್ಚಿ ಸಂಭ್ರಮಿಸಿದಿರಿ. ಎಲ್ಲಿ ಹೋಯಿತು ನಿಮ್ಮ ಪೌರುಷ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ (Former Minister HK Patil) ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸುಳ್ಳಿನ ಮೇಲೆ ಬಿಜೆಪಿ (BJP) ಸವಾರಿ ಮಾಡ್ತಿದೆ. ನಿಮಗೆ ಮಹಾದಾಯಿ ಹೆಸರಲ್ಲಿ ಮತ ಕೇಳುವ ನೈತಿಕತೆ ಇಲ್ಲ. ಸುಪ್ರೀಂಕೋರ್ಟ್ ತೀರ್ಪು (Supreme Court Judgement) ಬಂದು ನೂರು ತಾಸುಗಳಾಯಿತು. ಆದ್ರೆ ರಾಜ್ಯ ಸರ್ಕಾರ (Karnataka Government) ಮಾತ್ರ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ತೀರ್ಪಿಗೆ ಸಂಬಂಧಿಸಿದ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಎಲ್ಲಾ ಅನುಮತಿ ಪಡೆದಿರೋದಾಗಿ ಹೇಳಿದ್ರು. ಆದ್ರೆ ಈಗ ಗೋವಾ ವೈಲ್ಡ್ ಲೈಫ್ ಅನುಮತಿ ಬೇಕು ಅಂತ ಕೋರ್ಟ್ ಹೇಳಿದೆ. ಇದೀಗ ಬಿಜೆಪಿಯ ಹಸಿ ಸುಳ್ಳು ಬಹಿರಂಗಗೊಂಡಿದೆ ಎಂದು ಹೆಚ್.ಕೆ.ಪಾಟೀಲ್ ಕಿಡಿಕಾರಿದರು.
ಈಗ ಎಲ್ಲಿದ್ದಾರೆ ಅಮಿತ್ ಶಾ?
ಅಧಿವೇಷನ ಮುಗಿಯುವುದರೊಳಗೆ ಮಹಾದಾಯಿ ಯೋಜನೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಅಮಿತ್ ಶಾ ಸುಳ್ಳುಗಾರ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸುಳ್ಳು ಹೇಳಿದ್ದಾರೆ. ಮಹಾದಾಯಿ ಯೋಜನೆ ಹೆಸರಲ್ಲಿ ಸುಳ್ಳು ಹೇಳಿದ್ದಾರೆ. ಅಮಿತ್ ಶಾ ಮಹಾದಾಯಿ ನಮ್ಮ ಬಿಜೆಪಿಯ ಕೊಡುಗೆ ಅಂತಾರೆ. ಈಗ ಅಮಿತ್ ಶಾ ಎಲ್ಲಿದ್ದಾರೆ ಎಂದು ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಜನರ ಕ್ಷಮೆ ಕೇಳಿ
ನೀವು ಸುಳ್ಳು ಹೇಳಬಹುದು, ಆದರೆ ಇತಿಹಾಸ ಸತ್ಯ ಹೇಳುತ್ತೆ. ಸುಳ್ಳು ಹೇಳಿದ ಅಮಿತ್ ಶಾ ಜನತೆಯ ಕ್ಷಮೆ ಕೇಳಬೇಕು. ಸುಳ್ಳಿನ ಸರದಾರರ ನೈಜ ಚಿತ್ರಣ ಜನರ ಮುಂದಿಡ್ತೇವೆ. ಚುನಾವಣೆಯ ಸಂದರ್ಭದಲ್ಲಿ ಜನತೆಗೆ ಸತ್ಯ ಹೇಳ್ತೇವೆ. ಮಹಾದಾಯಿ ವಿಚಾರದಲ್ಲಿ ಜನತೆಗೆ ಸುಳ್ಳು ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನರ ಕ್ಷಮೆ ಕೇಳಬೇಕು. ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದೀರಿ ಎಂದು ಹೇಳಿದರು.
ವೈಲ್ಡ್ ಲೈಫ್ ಅನುಮತಿಯೇ ಅನಗತ್ಯ
ಸಾವಿರಾರು ಎಕರೆ ಗಣಿಗಾರಿಕೆಗೆ ವೈಲ್ಡ್ ಲೈಫ್ ಅನುಮತಿ ಪಡೆಯಲ್ಲ. ಕೇವಲ ಎರಡು ನೂರು ಎಕರೆ ಭೂಮಿ ವಿಚಾರದಲ್ಲಿ ವೈಲ್ಡ್ ಲೈಫ್ ಅಡ್ಡಿಪಡಿಸಲಾಗುತ್ತಿದೆ. ರೈತರಿಗೆ ಕುಡಿಯುವ ನೀರಿಗಾಗಿ ಪದೇ ಪದೇ ಅಡ್ಡಿ. ಗೋವಾದಿಂದ ಪದೇ ಪದೇ ಕ್ಯಾತೆ ತೆಗೆದಿದೆ. ಇದೀಗ ವೈಲ್ಡ್ ಲೈಫ್ ಅನುಮತಿ ಹೆಸರಲ್ಲಿ ಮತ್ತೊಮ್ಮೆ ಅಡ್ಡಿ ಮಾಡುತ್ತಿದೆ. ವೈಲ್ಡ್ ಲೈಫ್ ಅನುಮತಿಯೇ ಅನಗತ್ಯ. ಜನರ ಬಳಿ ಹೋಗೋಕೆ ಬಿಜೆಪಿ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಯಾವಾಗಲೂ ಮೂರ್ಖರನ್ನಾಗಿ ಮಾಡೋಕೆ ಸಾಧ್ಯವಿಲ್ಲ
ಮಹಾದಾಯಿ ವಿಚಾರದಲ್ಲಿ ಬಿಜೆಪಿ ನೂರಾ ಒಂದು ಸುಳ್ಳು ಹೇಳಿದೆ ಎಂದು ಕಿಡಿಕಾರಿದರು. ಬಿಜೆಪಿ ಸುಳ್ಳುಗಳನ್ನು ಕಾಂಗ್ರೆಸ್ ಬಹಿರಂಗಪಡಿಸುತ್ತಲೇ ಬಂದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿನಾಂಕವಿಲ್ಲದ, ಸಂಖ್ಯೆ ಇಲ್ಲದ ಕಡತ ಟ್ವೀಟ್ ಮಾಡಿದ್ದರು. ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು. ಯಾವಾಗಲೂ ಮೂರ್ಖರನ್ನಾಗಿ ಮಾಡೋಕೆ ಸಾಧ್ಯವಿಲ್ಲ.
ಇದನ್ನೂ ಓದಿ: Pearl Farming: ಕೊರೊನಾದಿಂದ ಕೆಲಸ ಹೋಯ್ತು; 25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯ ವ್ಯಕ್ತಿ
ಬಂಡೋರಾಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿದೆ. ಬಿಜೆಪಿಯ ನಾಯಕರೇ ಅರಣ್ಯ ಸಮಿತಿಯಲ್ಲಿ ಇದ್ದರೂ ಕರ್ನಾಟಕದ ರೈತರಿಗೆ ಅನ್ಯಾಯವಾಗ್ತಿದೆ. ಅರ್ಜಿ ಕೊಟ್ಟ ಕೂಡಲೇ ಅನುಮತಿ ಸಿಗುತ್ತೆ ಅಂತ ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಹೇಳಿದ್ರು. ಹದಿನೈದು ದಿನದೊಳಗೆ ಆರಂಭಿಸೋದಾಗಿ ಪ್ರಚಾರ ಮಾಡಿದ್ರು ಎಂದು ಹೆಚ್.ಕೆ.ಪಾಟೀಲ್ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ