Tweet War: ಕಾಂಗ್ರೆಸ್​ನ ಒಂದು ಟ್ವೀಟ್​ಗೆ ಕೆಂಡಾಮಂಡಲರಾದ ಬಿಜೆಪಿ ನಾಯಕರು

ಕಾಂಗ್ರೆಸ್ ಟ್ವೀಟಿಗೆ ಡಾ. ಸುಧಾಕರ್‌, ಅಶ್ವತ್ಥ್ ನಾರಾಯಣ್, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ.ಸಿ ನಾಗೇಶ್,‌ಕೆ ಗೋಪಾಲಯ್ಯ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವರು ಬಿ.ಎಲ್.ಸಂತೋಷ್ ಅವರನ್ನು ಬಿಟ್ಟುಕೊಟ್ಟಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ಕಾಂಗ್ರೆಸ್ ಘಟಕದಿಂದ (Karnataka Congress) ಮಾಡಿದ ಒಂದು ಟ್ವೀಟ್ (Tweet) ರಾಜ್ಯ ರಾಜಕೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಸಚಿವ ಸಂಪುಟದ ಸಚಿವರು ಕಾಂಗ್ರೆಸ್ (Congress) ವಿರುದ್ಧ ಮುಗಿಬಿದ್ದಿದ್ದು, ಟ್ವೀಟ್ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್ ಸಂತೋಷ್ (BL Santosh) ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್‌ಮಾಸ್ಟರ್‌ನಂತೆ ಕ್ಲಾಸ್ ತೆಗೆದುಕೊಳ್ಳುವುದು ಬಿಜೆಪಿಯ ದುರಂತ. ಸಿಎಂ ಬೊಮ್ಮಾಯಿಯವರೊ, ಬಿ.ಎಲ್ ಸಂತೋಷ್ ಅವರೊ ಸ್ಪಷ್ಟಪಡಿಸಿಕೊಂಡು ಬಿಜೆಪಿ ಆಡಳಿತ ನಡೆಸಲಿ.   ಬೊಮ್ಮಾಯಿಯವರು ಕೇವಲ ಬೊಂಬೆಯೇ ಹೇಳಲಿ ಎಂದು ಚಿಂತನ ಮಂಥನ ಸಭೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಗಿ ಟ್ವೀಟ್ ಮಾಡಿತ್ತು. ಇದೀಗ ಈ ಟ್ವೀಟ್ ಗೆ ಬಿಜೆಪಿ ಸಚಿವರು (BJP Minister) ತಿರುಗೇಟು ನೀಡುತ್ತಿದ್ದಾರೆ. ಯಾರು ಏನು ಹೇಳಿದರು ಎಂಬುದರ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಟ್ವೀಟಿಗೆ ಡಾ. ಸುಧಾಕರ್‌, ಅಶ್ವತ್ಥ್ ನಾರಾಯಣ್, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ.ಸಿ ನಾಗೇಶ್,‌ಕೆ ಗೋಪಾಲಯ್ಯ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವರು ಬಿ.ಎಲ್.ಸಂತೋಷ್ ಅವರನ್ನು ಬಿಟ್ಟುಕೊಟ್ಟಿಲ್ಲ.

ಡಾ.ಸುಧಾಕರ್ ಟ್ವೀಟ್

ಒಂದು ಕುಟುಂಬದ ಪ್ರೈವೇಟ್ ಕಂಪೆನಿಯಾಗಿ ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವ, ತಳಸ್ಪರ್ಶೀ ಸಂಘಟನೆ ಇವೆಲ್ಲವೂ ಮರೀಚಿಕೆಯಾಗಿರುವುದು ಅಚ್ಚರಿಯೇನಲ್ಲ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷವಲ್ಲ, ಸಮಾಜಿಕ ಪರಿವರ್ತನೆಯ ಗುರಿಯುಳ್ಳ ಶಿಸ್ತು, ಬದ್ಧತೆಯ ಸಂಘಟನೆ.

ಇದನ್ನೂ ಓದಿ:  Election 2023: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಏನಿದು ಬಿಸಿ ಬಿಸಿ ಚರ್ಚೆ

ಅಂದಿನ ಯುಪಿಎ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿ ಪ್ರಧಾನಮಂತ್ರಿಗಳಿಗೆ ಅಗೌರವ ತೋರಿದ್ದು ಯಾರು ಎಂದು ಜನ ಇನ್ನೂ ಮರೆತಿಲ್ಲ. NAC ಎಂಬ ಅಸಂವಿಧಾನಿಕ ಸಂಸ್ಥೆ ಕಟ್ಟಿಕೊಂಡು ರಿಮೋಟ್ ರಾಜ್ಯಭಾರ ಮಾಡುವ ಮೂಲಕ ಪ್ರಧಾನಿ ಹುದ್ದೆಯನ್ನು ನಗೆಬಾಟಲು ಮಾಡಿದ್ದು ಯಾರು ಎಂದು ಬಿಡಿಸಿ ಹೇಳಬೇಕೆ?

ನಮ್ಮ ಪಕ್ಷದಲ್ಲಿ ಎಲ್ಲರಿಗೂ ತಮ್ಮದೇ ಆದ ನಿರ್ದಿಷ್ಟ ಜವಾಬ್ದಾರಿ, ಹೊಣೆಗಾರಿಕೆ ಇದೆ. ಇಂತಹ ಶಿಸ್ತುಬದ್ಧ ಸಂಘಟನೆಯಿಂದಲೇ ಬಿಜೆಪಿ ಇಂದು ಕೋಟ್ಯಂತರ ಕಾರ್ಯಕರ್ತರ ಪಡೆ ಕಟ್ಟಿಕೊಂಡು ದೇಶಾದ್ಯಂತ ಜನರ ವಿಶ್ವಾಸ, ಆಶೀರ್ವಾದ ಗಳಿಸಿದೆ. ಯಾವುದೇ ದಿಕ್ಕುದೆಸೆ ಇಲ್ಲದ, ನಾಯಕತ್ವವೇ ಇಲ್ಲದ ಕಾಂಗ್ರೆಸ್ಗೆ ಇದ್ಯಾವುದೂ ಅರ್ಥವಾಗುವುದೂ ಇಲ್ಲ.

ಆಶ್ವಥ್ ನಾರಾಯಣ್ ಟ್ವೀಟ್

ಕಾಂಗ್ರೆಸ್‌ ಪಕ್ಷಕ್ಕೆ ನೆಹರೂ ಕುಟುಂಬವೇ ವಿಶ್ವವಿದ್ಯಾಲಯ, ಸೋನಿಯಾ ಅವರೇ ಚಾನ್ಸಲರ್, ಪಪ್ಪು-ಪ್ರಿಯಾಂಕಾರೇ ಉಪನ್ಯಾಸಕರು! ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ಅವರಂತಹ ಪುಂಡ ವಿದ್ಯಾರ್ಥಿಗಳ ಕಿತ್ತಾಟವನ್ನೇ ತಡೆಯಲಾಗದವರು ಶಿಸ್ತು, ಸಂಯಮಕ್ಕೆ ಹೆಸರಾಗಿರುವ ಬಿಜೆಪಿ  ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.

ಆರಗ ಜ್ಞಾನೇಂದ್ರ ಟ್ವೀಟ್

ಪ್ರಜಾಪ್ರಭುತ್ವದ ಅರಿವೆಯೇ ಇಲ್ಲದೆ ಒಂದು ಕುಟುಂಬದ ಗುಲಾಮಗಿರಿಗೆ ಹೊಂದಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ, ಬಿಜೆಪಿಯ ಸಂಘಟನಾ ನೀತಿಗಳು ಅರ್ಥವಾಗುವುದಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇರುವ ಶಿಸ್ತುಬದ್ಧ ಪಕ್ಷ.

ಇದನ್ನೂ ಓದಿ:  HD Deve Gowda: ಇದೇ ಮೊದಲ ಬಾರಿಗೆ ವ್ಹೀಲ್​ಚೇರ್​ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ

ಬಿ ಸಿ ನಾಗೇಶ್ ಟ್ವೀಟ್

ದಶಕಗಳ ಹಿಂದೆಯೇ ನಕಲಿ ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷವನ್ನು ಬರೆದುಕೊಟ್ಟು, ಆತ್ಮಸಾಕ್ಷಿ ಮರೆತಿರುವ ವ್ಯಕ್ತಿ ನಿಷ್ಠರೇ,  ಜವಾಬ್ದಾರಿಯುತ ರಾಜಕೀಯ ಪಕ್ಷವೊಂದರ ಸಾಂಸ್ಥಿಕ‌ ರಚನೆ, ಕಾರ್ಯ ವೈಖರಿ, ಶಿಸ್ತು, ಸಂಘಟನೆಯ ಆಳ, ಅಗಲವನ್ನು ಅರಿಯದ ಕಾರಣ ನಿಮ್ಮ ಪಕ್ಷ‌ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ನೋಡಿಕೊಳ್ಳಿ.
Published by:Mahmadrafik K
First published: