Kolar Murder: ಹೆಂಡ್ತಿಯ ಅಣ್ಣ, ತಮ್ಮನಿಗೆ ನಡು ರಸ್ತೆಯಲ್ಲೆ ಚಾಕು ಇರಿದ ಬಿಜೆಪಿ ಮುಖಂಡ..!

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಿಜೆಪಿ ಎಸ್ಸಿ ವಿಭಾಗದಲ್ಲಿ ಇತ್ತಿಚೆಗೆ ಸೇರ್ಪಡೆಯಾಗಿದ್ದ ಆರೋಪಿ ಬಾಬು, ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಆದರೆ ಪತ್ನಿ ಸುನಿತಾ ಜೊತೆಗೆ ಗಲಾಟೆ ಮಾಡುವ ಸಂಧರ್ಭದಲ್ಲಿ ಬೆಂಬಲವಾಗಿ ಬಂದ ಅಣ್ಣ,ತಮ್ಮಂದಿರುಗೆ ಬಾಬು ಚಾಕು ಇರಿದಿದ್ದು, ಸ್ಥಳದಲ್ಲೆ ಸುರೇಶ್ ಸಾವನ್ನಪ್ಪಿದ್ದಾರೆ.

ಕ್ರೈಂ

ಕ್ರೈಂ

  • Share this:
ಕೋಲಾರ(ಫೆ.21): ಕೌಟುಂಬಿಕ ಕಲಹ ಹಿನ್ನಲೆ  ಭಾವ ಚಾಕುವಿನಿಂದ  ಇರಿದು ಭಾಮೈದುನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಫೆ.20ರಂದು ರಾತ್ರಿ ನಡೆದಿದೆ. ಇಲ್ಲಿನ ಗೌತಮ್ ನಗರದ ನಿವಾಸಿಯಾದ ಬಿಜಿಪಿ (BJP) ಯುವ ಮುಖಂಡ (Youth Leader) ಬಾಬು, ಪತ್ನಿ ಸುನಿತಾ ಅವರ ಅಣ್ಣ ಸುರೇಶ್ ಗೆ ಚಾಕು ಇರಿದು ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸುರೇಶ್ (36) ಸಾವನ್ನಪ್ಪಿದ್ದಾರೆ. ಮೃತ ಸುರೇಶ್  ತಮ್ಮ ಹರೀಶ್ (33) ಗು ಆರೋಪಿ ಬಾಬು ಚಾಕು ಇರಿದಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಹರೀಶ್ ನನ್ನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹರೀಶ್ ಅವರ ಸ್ತಿತಿ ಗಂಭೀರವಾಗಿದ್ದು, ಐ.ಸಿ.ಯು ನಲ್ಲಿ (ICU) ಚಿಕಿತ್ಸೆ ನೀಡುತ್ತಿರುವ ವೈದ್ಯರು ಮುಂದಿನ 48 ಗಂಟೆ ಕಳೆಯುವವರೆಗು ಆರೋಗ್ಯ ಪರಿಸ್ತಿತಿ ಕುರಿತು ಯಾವುದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪೊಲಿಸ್ ಠಾಣೆ ಎದುರು ಪ್ರತಿಭಟನೆ (Protest) ಮಾಡಿದ ಮೃತನ ತಂದೆ ಆರೋಪಿ ಬಾಬು  ತನ್ನ ಪತ್ನಿಯನ್ನು ಹಣ ತರುವಂತೆ  ಹೇಳಿ ಮೊನ್ನೆಯಷ್ಟೆ ಗಲಾಟೆ ಮಾಡಿ ತವರು ಮನೆಗೆ ಕಳಿಸಿದ್ದ ಎಂದು ಮಾವ ಪ್ರಕಾಶ್ ತಿಳಿಸಿದ್ದಾರೆ. ಆದರೆ ಪತ್ನಿ ಸುನಿತಾ ಹೆಸರಲ್ಲಿ ಕೆಲ ಬ್ಯಾಂಕ್, ಹಾಗು ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದಿದ್ದ ಗಂಡ ಬಾಬು, ಸಾಲ ಕಟ್ಟದೆ ಸತಾಯಿಸಿದ್ದಾನೆ. ಹಾಗಾಗಿ ನೀನು  ಪಡೆದುಕೊಂಡ ಸಾಲವನ್ನ ನನ್ನ ತಂದೆ ಯಾಕೆ ಕಟ್ಟಬೇಕು ಎಂದು ಸಾಲದ ಹಣವನ್ನ (Money) ವಾಪಾಸ್ ಕಟ್ಟುವಂತೆ ಪತ್ನಿ ಸುನಿತಾ ಪತಿ ಬಾಬು ಅವರಿಗೆ ಹೇಳಿದ್ದಾರೆ.

ರಸ್ತೆಯಲ್ಲೇ ಹೆಂಡತಿಗೆ ಥಳಿಸಿದ ಪತಿ:

ಇದರಿಂದ  ಕೆರಳಿದ ಬಾಬು ಮನೆ ಎದುರಿನ ರಸ್ತೆಯಲ್ಲಿ ಪತ್ನಿಗೆ ಮನಸೊ ಇಚ್ಚೆ ಥಳಿಸಿದ್ದಾನೆ. ಒಂದೇ ಬಡಾವಣೆಯ ಹಿಂದೆ-ಮುಂದೆ ಪತಿ, ಪತ್ನಿ ವಾಸವಿದ್ದು ಗಲಾಟೆ ಮಾಹಿತಿ ತಿಳಿದ ಕೂಡಲೇ ಸುನಿತಾ ಸಹೋದರರಾದ ಸುರೇಶ್, ಹರೀಶ್ ಆಗಮಿಸಿ ಗಲಾಟೆ ತಡೆಯಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: Crime News: ಚಾಕು ಇರಿದು 8ನೇ ತರಗತಿ ವಿದ್ಯಾರ್ಥಿನಿ ಕೊಲೆ: ಭಗ್ನ ಪ್ರೇಮಿಯ ಕೃತ್ಯದ ಶಂಕೆ

ಮಾತಿನ ಗಲಾಟೆ ಮಧ್ಯೆ ಚಾಕು ದಾಳಿ

ಈ ವೇಳೆ ಭಾವ , ಬಾಮೈದುನರ ಮೂವರ ಮಧ್ಯೆಯು ಗಲಾಟೆ ಬಾಬು ಚಾಕುವಿನಿಂದ ದಾಳಿ ಮಾಡಿದ್ದಾರೆ ಎಂದು ಬಾಬು ಮಾವ ಪ್ರಕಾಶ್ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಇಬ್ಬರ ಎದೆಗು ಚಾಕು ಇರಿದ ನಂತರ  ಸಣ್ಣ ಪುಟ್ಟ ಗಾಯಗಳಿಂದ ಆರೋಪಿ ಬಾಬು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಬಂಗಾರಪೇಟೆ ಪೊಲೀಸರು ಆಸ್ಪತ್ರೆಯಲ್ಲಿ (Hospital) ಆರೋಪಿಯನ್ನ ಬಂಧಿಸಿದ್ದು,  ಬಂಗಾರಪೇಟೆ ಆಸ್ಪತ್ರೆ ಎದುರು ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ತಡರಾತ್ರಿ ಪ್ರತಿಭಟನೆ

ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಬಂಗಾರಪೇಟೆ ಪೊಲೀಸ್ ಠಾಣೆ ಎದುರು ತಡರಾತ್ರಿ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಪೊಲೀಸರು ಕಾನೂನು ಕ್ರಮ ಜರುಗಿಸೋ ಭವರಸೆ ನೀಡಿ ಎಲ್ಲರನ್ನ ವಾಪಾಸ್ ಕಳಿಸಿದರು. ಈ ಕುರಿತು ಮಾತನಾಡಿರುವ ಮಾವ ಪ್ರಕಾಶ್ ಹಾಗು ಪತ್ನಿ ಸುನಿತಾ, ಗಂಡನಿಂದ ನಮಗೆ ಇನ್ನಿಲ್ಲದ ಕಿರುಕುಳ ಇತ್ತು, ಮನೆಯಿಂದ ಹೊರಕಳಿಸಿದ ನಂತರ ನಮ್ಮ ತಂದೆಯೇ ಮೂವರು ಮಕ್ಕಳನ್ನ ಸಾಕುತ್ತಿದ್ದರು, ಆದರೆ ತಾನು ಪಡೆದ ಸಾಲದ ಹಣ ವಾಪಾಸ್ ನೀಡುವಂತೆ ಹೇಳಿದ್ದಕ್ಕೆ ಗಲಾಟೆ ಆರಂಭಿಸಿ, ಅಣ್ಣನನ್ನೆ ಕೊಲೆ (Murder) ಮಾಡಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೋಪಿಗಳ ಸುಳಿವು ಹಿಡಿದ ಪೊಲೀಸರು

ಅಂತೂ ಸಾಲದ ಅಮಲೇರಿಸಿಕೊಂಡಿದ್ದ ಬಾಬು ಪತ್ನಿಯ ಅಣ್ಣನನ್ನೇ ಕೊಂದುಬಿಟ್ಟಿದ್ದಾನೆ. ಸುನೀತಾ ಅವರು ತಮ್ಮ ಸಹೋದರನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.
Published by:Divya D
First published: