• Home
  • »
  • News
  • »
  • state
  • »
  • Bengaluru: ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಹಲ್ಲೆ; 15 ಮಂದಿ ವಿರುದ್ಧ ದೂರು

Bengaluru: ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಹಲ್ಲೆ; 15 ಮಂದಿ ವಿರುದ್ಧ ದೂರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಊಟ ಮುಗಿದಿದೆ ಎಂದ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು (ನ.30): ಬಿಜೆಪಿ ಮುಖಂಡ ಕೆ.ಸಿ ರಾಮಚಂದ್ರ (BJP Leader Ramachandra) ಅವರ ಪುತ್ರ ಧನುಷ್ (Dhanush) ಸೇರಿದಂತೆ 15 ಮಂದಿಯ ಬೆಂಗಳೂರಿನ ರೆಸ್ಟೋರೆಂಟ್​ನಲ್ಲಿ (Restaurant) ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ (Attack) ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ರೆಸ್ಟೋರೆಂಟ್​ ಮುಚ್ಚುವ ವೇಳೆ ಹೋಗಿ ಫುಡ್​ ಆರ್ಡರ್ (Food Order)​  ಮಾಡಿದ್ದಾರೆ. ಊಟ ಖಾಲಿಯಾಗಿದೆ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ಗುಂಪು ರೆಸ್ಟೋರೆಂಟ್ ಸಿಬ್ಬಂದಿ (Staff) ಮೇಲೆಯೇ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. 


ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ


ಊಟ ಮುಗಿದಿದೆ ಎಂದ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




ರಾತ್ರಿ 11.30ರಲ್ಲಿ ರೆಸ್ಟೋರೆಂಟ್​ನಲ್ಲಿ ಗಲಾಟೆ


ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ರೆಸ್ಟೋರೆಂಟ್​ವೊಂದರಲ್ಲಿ ನ.20ರಂದು ಘಟನೆ ನಡೆದಿದೆ. ರಾತ್ರಿ 11.30ರ ಸುಮಾರಿಗೆ 15 ರಿಂದ 20 ಜನರ ಗುಂಪು ರೆಸ್ಟೋರೆಂಟ್​ಗೆ ಬಂದು ಊಟಕ್ಕೆ ಆರ್ಡರ್​ ಮಾಡಿದೆ. ಆದರೆ, ರೆಸ್ಟೋರೆಂಟ್ ಮುಚ್ಚುವ ಸಮಯವಾಗಿದ್ದು, ಊಟ ಕೊಡಲು ಸಾಧ್ಯವಿಲ್ಲ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೆ ಯವಕರ ಗುಂಪು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಕುಡಿದ ನಶೆಯಲ್ಲಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.


ಹಲ್ಲೆ ವಿಡಿಯೋ ವೈರಲ್


ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಯವಕರ ಗುಂಪು ಹಲ್ಲೆ ಮಾಡಿರುವ ದೃಶ್ಯಗಳನ್ನು ಸ್ಥಳಲ್ಲಿದ್ದ ಗ್ರಾಹಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಹ ವೈರಲ್ ಆಗಿದೆ. ಅಲ್ಲದೇ, ಈ ಘಟನೆ ದಿನವೇ ರೆಸ್ಟೋರೆಂಟ್​ನವರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಯಾವುದೇ ಆರೋಪಿಗಳನ್ನು ಪೊಲೀಸರು  ಬಂಧಿಸಿಲ್ಲ.


ಇದನ್ನೂ ಓದಿ; Bengaluru: ರಸ್ತೆ ಪಕ್ಕದಲ್ಲೇ ಮಲಗಿದ್ದ ಬಾಲಕಿ ಮೇಲೆ ಹರಿದ ಟೆಂಪೋ; 7 ವರ್ಷದ ಬಾಲಕಿ ಸಾವು


ಎಲ್ಲಾ ಆರೋಪಿಗಳನ್ನು ಬಂಧಿಸೋದಾಗಿ ಪೊಲೀಸರ ಭರವಸೆ


ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ರೆಸ್ಟೋರೆಂಟ್ ಸಿಬ್ಬಂದಿ ಮೇಲೆ‌ ಹಲ್ಲೆ ಪ್ರಕರಣ ಸಂಬಂಧ ಪ್ರಕರಣ‌ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಅಲ್ಲದೇ, ಆರೋಪಿಗಳ ಈಗಾಗಲೇ ಗುರುತು ಪತ್ತೆಯಾಗಿದೆ. ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.


ಕೆಲ ತಿಂಗಳ ಹಿಂದೆ ಮೊಹಮ್ಮದ್​ ನಲಪಾಡ್​ ಮೇಲೆ ಕೇಳಿ ಬಂದ ಆರೋಪ


ಮೈಸೂರು  ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಮಾಲೀಕತ್ವದ ಹೋಟೆಲ್ ನಲ್ಲಿ (Hotel) ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಮೈಸೂರಿನ (Mysore) ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ನಲ್ಲಿ ಕೃತಿಕಾ ಗೌಡ (Krutika Gowda) ಎಂಬ ಯುವತಿ 20 ಲಕ್ಷ ಕೊಟ್ಟ ಲೀಸ್ ನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದರು. ಇದಕ್ಕೆ ಕಸ್ತೂರಿ ರೆಸ್ಟೋರೆಂಟ್ ಎಂಬ ಹೆಸರಿಡಲಾಗಿತ್ತು. ಹೋಟೆಲ್​ ಉಸ್ತುವಾರಿ ಸಯ್ಯದ್ ರಿಯಾಜ್​ (Syed Riaz) ಎಂಬಾತ ಹೋಟೆಲ್​ ಖಾಲಿ ಮಾಡುವಂತೆ ಜಗಳ ತೆಗೆದಿದ್ದಾನೆ.


ಕೃತಿಕಾಗಳನ್ನು ಎಳೆದಾಡಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಹೋಟೆಲ್​ ಗಲಾಟೆ ವಿಚಾರ ನನಗೆ ಗೊತ್ತಿಲ್ಲ. ಈಗಾಲೇ ವಿಷಯ ಗೊತ್ತಾಗಿದ್ದು, ಇಬ್ಬರ ಬಳಿಯೂ ಮಾತಾಡಿ ಸಮಸ್ಯೆ ಬಗೆಹರಿಸುವೇ. ಇದಕ್ಕೆ ಬೇರೆ ಆಯಾಮ ಕೊಡ್ಬೇಡಿ ಎಂದು ನಲಪಾಡ್​ ಹೇಳಿದ್ದರು.

Published by:ಪಾವನ ಎಚ್ ಎಸ್
First published: