ಕಾಂಗ್ರೆಸ್​ ಪಕ್ಷವನ್ನು ಕಸಕ್ಕೆ ಹೋಲಿಸಿ, ರೇವಣ್ಣ ವೈರಸ್​ ಎಂದು ಜರಿದ ಬಿಜೆಪಿ ಮುಖಂಡ ಪಾಟೀಲ ನಡಹಳ್ಳಿ

ನಮ್ಮಿಂದ ಯಾರೂ ಕೂಡ ಕಾಂಗ್ರೆಸ್​​ ಪಕ್ಷ ಬಿಟ್ಟು ಹೋಗುತ್ತಿಲ್ಲ. ಈ ಕಸದ ದುರ್ವಾಸನೆ ಹೋಗಲಾಡಿಸಲು ಕಮಲ ಸುವಾಸನೆ ಬೀರಿದೆ ಎಂದು ಸಹ ವ್ಯಂಗ್ಯವಾಡಿದ್ದಾರೆ.

Latha CG | news18
Updated:July 14, 2019, 1:57 PM IST
ಕಾಂಗ್ರೆಸ್​ ಪಕ್ಷವನ್ನು ಕಸಕ್ಕೆ ಹೋಲಿಸಿ, ರೇವಣ್ಣ ವೈರಸ್​ ಎಂದು ಜರಿದ ಬಿಜೆಪಿ ಮುಖಂಡ ಪಾಟೀಲ ನಡಹಳ್ಳಿ
ಹೆಚ್​.ಡಿ.ರೇವಣ್ಣ-ಎ.ಎಸ್​.ಪಾಟೀಲ ನಡಹಳ್ಳಿ
  • News18
  • Last Updated: July 14, 2019, 1:57 PM IST
  • Share this:
ಬೆಂಗಳೂರು,(ಜು.14): ಕಾಂಗ್ರೆಸ್ ರಾಷ್ಟ್ರಕ್ಕಂಟಿದ ಕೆಟ್ಟ ಕಸ, ಇನ್ನೂ ಸಚಿವ ಹೆಚ್​.ಡಿ. ರೇವಣ್ಣ ವೈರಸ್​ ಇದ್ದಂತೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ಎಸ್​. ಪಾಟೀಲ ನಡಹಳ್ಳಿ ಜರಿದಿದ್ದಾರೆ.

ಸಮ್ಮಿಶ್ರ ಸರ್ಕಾರದ ಇಂದಿನ ಸ್ಥಿತಿಗೆ ಸಚಿವ ಹೆಚ್.ಡಿ. ರೇವಣ್ಣ ನೇರ ಕಾರಣ ಎಂಬ ಮಾತುಗಳು ಕಳೆದ ಹಲವು ದಿನಗಳಿಂದ ಬಿಜೆಪಿ ನಾಯಕರಿಂದ ಕೇಳಿಬರುತ್ತಲೇ ಇದೆ. ರೇವಣ್ಣನವರಿಂದಲೇ ಮೈತ್ರಿ ಸರ್ಕಾರ ಅಧೋಗತಿಗೆ ಹೋಗಿದೆ. ಅವರ ವಾಮಾಚಾರದಿಂದಲೇ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ಜೀವನ ಅಂತ್ಯಗೊಳ್ಳಲಿದೆ ಎಂದು ಸಹ ಕೆಲ ಬಿಜೆಪಿ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಜರಿಯುವುದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಮುಖಂಡ ಎ.ಎಸ್​.ಪಾಟೀಲ ನಡಹಳ್ಳಿ ರಾಜ್ಯ ಕಾಂಗ್ರೆಸ್​ನ್ನು ಕಸಕ್ಕೆ ಹೋಲಿಸಿ, ಸಚಿವ ರೇವಣ್ಣನವರನ್ನು ವೈರಸ್​ ಎಂದು ಜರಿದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್​​ ಕೆಟ್ಟ ಕಸ, ರೇವಣ್ಣ ವೈರಸ್​' ಎಂದು ತೀವ್ರ ವಾಗ್ದಾಳಿ ನಡೆಸಿದರು. 'ರಾಜ್ಯದ ಈ ಸ್ಥಿತಿಗೆ ವೈರಸ್​​ ರೇವಣ್ಣ ಕಾರಣ. ಕಾಂಗ್ರೆಸ್​ ಎನ್ನುವ ಕಸ ಹೇಗೆ ಬೆಳೆದಿದೆ ಅಂದರೆ, ಅಲ್ಲಿ ಬೇರೆ ಯಾವುದೇ ಬೇರೆ ಸಸಿಗಳು ಬೆಳೆಯಲು ಸಾಧ್ಯವಿಲ್ಲ ಎಂಬಂತಾಗಿದೆ. ಈ ಸರ್ಕಾರದಿಂದ ರಾಜ್ಯದ ಜನ ಬೇಸತ್ತಿದ್ಧಾರೆ. ಎಲ್ಲಾ ಕಾಂಗ್ರೆಸ್​ ಶಾಸಕರು ಅಲ್ಲಿಂದ ಹೊರಬನ್ನಿ. ಬಿ.ಎಸ್​.ಯಡಿಯೂರಪ್ಪನವರ ಸರ್ಕಾರಕ್ಕೆ ಸಾಥ್​ ನೀಡಿ' ಎಂದು ಕರೆ ನೀಡಿದ್ದಾರೆ.

ಪಂಜಾಬ್​ ಕಾಂಗ್ರೆಸ್​​ನಲ್ಲಿ ಬಂಡಾಯ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್ ಸಿಂಗ್ ಸಿಧು

'ನಮ್ಮಿಂದ ಯಾರೂ ಕೂಡ ಕಾಂಗ್ರೆಸ್​​ ಪಕ್ಷ ಬಿಟ್ಟು ಹೋಗುತ್ತಿಲ್ಲ. ಈ ಕಸದ ದುರ್ವಾಸನೆ ಹೋಗಲಾಡಿಸಲು ಕಮಲ ಸುವಾಸನೆ ಬೀರಿದೆ' ಎಂದು ಸಹ ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸ್ಪೀಕರ್​ ಕೆ.ಆರ್. ರಮೇಶ್ ಕುಮಾರ್ ವಿರುದ್ಧವೂ ಟೀಕಾಸ್ತ್ರ ಪ್ರಯೋಗಿಸಿದ ಅವರು, 'ಸ್ಫೀಕರ್ ರಮೇಶ್ ಕುಮಾರ್ ಸಾಹೇಬ್ರೇ,  ಸತ್ತಿರುವ ಸರ್ಕಾರ ಎಂಬ ಡೆಡ್​ಬಾಡಿಯ  ವೆಂಟಿಲೇಟರ್ ತೆಗೆಯಿರಿ. ನಿಮ್ಮನ್ನು ನಾವು ಲಾಯರ್ ಅಂತ ಸ್ಪೀಕರ್ ಮಾಡಿಲ್ಲ.  ಅಲ್ಲಿರುವ 50 ಕ್ಕೂ ಹೆಚ್ಚು ಜನ ನಮಗೆ ಸಪೋರ್ಟ್ ಮಾಡುತ್ತಾರೆ. ಗೋವಾ ಮಾದರಿಯಂತೆ ಸರ್ಕಾರ ರಚನೆಯಾಗುತ್ತದೆ' ಎಂದು ಭವಿಷ್ಯ ನುಡಿದರು.
First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ