ಸಿ.ಪಿ.ಯೋಗೇಶ್ವರ್​​​ಗೆ ಸಚಿವ ಸ್ಥಾನ ನಿಶ್ಚಿತ; ಸಂತಸ ವ್ಯಕ್ತಪಡಿಸಿದ ರಮೇಶ್​ ಜಾರಕಿಹೊಳಿ

ಇನ್ನು ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂಬ ಸಾ.ರಾ. ಮಹೇಶ್ ಹೇಳಿಕೆ ವಿಚಾರವಾಗಿ ಖಾರವಾಗಿಯೇ ಪ್ರತಿಕ್ರಿಯಿಸಿರುವ ರಮೇಶ್, ಸಾ.ರಾ. ಮಹೇಶ್​ ಮನುಷ್ಯನಾಗಿ ಈ ರೀತಿ ಹೇಳಬಾರದು. ನಮ್ಮ ವೈರಿಗೆ ಕೆಟ್ಟದ್ದಾದರೆ, ಸಹಾನುಭೂತಿ ವ್ಯಕ್ತ ಪಡಿಸುತ್ತೇವೆ. ಸಾರಾ ಮಹೇಶ್ ಈ ಮಟ್ಟಿಗೆ ಮಾತನಾಡುತ್ತಾರೆ ಅಂದ್ರೆ ಅವರು ರಾಜಕಾರಣಕ್ಕೆ ಲಾಯಕ್​​ ಇಲ್ಲ ಎಂದು ಖಾರವಾಗೆ ಮಾತನಾಡಿದರು. 

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಚಿಕ್ಕೋಡಿ(ಡಿ.01): ಸಾಹುಕಾರ್ ಅಂತಲೇ ಫೇಮಸ್ ಆಗಿರುವ ರಮೇಶ್ ಜಾರಕಿಹೊಳಿ ಎಲ್ಲರಿಗೂ ಗೊತ್ತೇ ಇದ್ದಾರೆ. ದೋಸ್ತಿ ಸರ್ಕಾರವನ್ನೇ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಿಕರ್ತ. ರಾಜಕೀಯದಲ್ಲಿ ಒಮ್ಮೆ ಹಟ ತೊಟ್ಟರೆ ಸಾಕು ತಾನು ಅಂದುಕೊಂಡಿದ್ದನ್ನು ಸಾಧಿಸದೆ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ ಇವರು. ಡಿಕೆ ಶಿವಕುಮಾರ್ ಬೆಳಗಾವಿ ಜಿಲ್ಲೆಗೆ ಬಂದು ರಾಜಕೀಯ ಪ್ರಬುದ್ಧತೆ ಸಾಧಿಸಲು ಪ್ರಯತ್ನ ಮಾಡಿದಾಗಿನಿಂದಲೂ ಡಿಕೆಶಿ ವಿರುದ್ದ ನಿಂತಿರುವ ರಮೇಶ ಜಾರಕಿಹೊಳಿ ಈಗ ಡಿಕೆ ಕೋಟೆಗೆ ಕೈ ಹಾಕಲು ಪ್ಲಾನ್ ಮಾಡಿ ಬಹುತೇಕ ಯಶಸ್ಸು ಕಂಡಿದ್ದಾರೆ. ಡಿಕೆ ಶಿವಕುಮಾರ್ ಕಟ್ಟಿಹಾಕಲು ಸಿ.ಪಿ. ಯೋಗೇಶ್ವರ್​​ಗೆ ಮಂತ್ರಿಪಟ್ಟ ಕೊಡಿಸಲು ನಡೆಸಿದ ಪ್ಲಾನ್ ಸಕ್ಸಸ್​​ ಆಗಿದೆ. ಹೇಗಾದರೂ ಮಾಡಿ ಸಿ.ಪಿ.ಯೋಗೇಶ್ವರ್​​​ಗೆ ಮಂತ್ರಿ ಸ್ಥಾನ ಕೊಡಿಸಿದರೆ, ಡಿಕೆ ಕೋಟೆಯನ್ನು ಭೇದಿಸಬಹುದು ಎಂದು ಪ್ಲಾನ್​​ ಮಾಡಿದ್ದ ರಮೇಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿ,  ಹೈಕಮಾಂಡ್​​ ಮಟ್ಟದಲ್ಲೇ ಯೋಗೇಶ್ವರ್​​​ ಪರ ಬ್ಯಾಟಿಂಗ್ ಮಾಡಿದ್ದರು ಎನ್ನಲಾಗಿದೆ. ಆ ಲಾಬಿ ಈಗ ಸಕ್ಸಸ್ ಆಗಿದ್ದು ಸದ್ಯ ಯೋಗೇಶ್ವರ್​​ಗೆ ಮಂತ್ರಿ ಮಾಡುವುದಾಗಿ ಸ್ವತಃ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇದನ್ನ ಸಚಿವ ರಮೇಶ್ ಜಾರಕಿಹೊಳಿ ಸ್ವಾಗತ ಮಾಡಿದ್ದಾರೆ.

ಸಿ.ಪಿ. ಯೋಗೇಶ್ವರ್​​ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ನಾವೆಲ್ಲರೂ ಮೊದಲಿನಿಂದಲೂ ಮಿತ್ರರು. ಡಿಕೆ ಶಿವಕುಮಾರ್, ಯೋಗೇಶ್ವರ್​​​ ಹಾಗೂ ನಾನು ಒಂದೆ ಕಡೆ ಇದ್ದೆವು. ಈಗ ಬೇರೆ ಸಂದರ್ಭ. ನಾವು ಆ ಕುರಿತು ಮಾತನಾಡಲ್ಲ. ಇದು ಯಡಿಯೂರಪ್ಪ ಅವರ ಪರಮಾಧಿಕಾರ. ಯಡಿಯೂರಪ್ಪ ಅವರ ತೀರ್ಮಾನಕ್ಕೆ ನಾವು ಬದ್ದ. ಯಾವ ದೆಹಲಿಯಲ್ಲಿ ಲಾಬಿ ಏನೂ ಮಾಡಿಲ್ಲ ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ; ಸಿದ್ದರಾಮಯ್ಯ

ಇನ್ನು ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂಬ ಸಾ.ರಾ. ಮಹೇಶ್ ಹೇಳಿಕೆ ವಿಚಾರವಾಗಿ ಖಾರವಾಗಿಯೇ ಪ್ರತಿಕ್ರಿಯಿಸಿರುವ ರಮೇಶ್, ಸಾ.ರಾ. ಮಹೇಶ್​ ಮನುಷ್ಯನಾಗಿ ಈ ರೀತಿ ಹೇಳಬಾರದು. ನಮ್ಮ ವೈರಿಗೆ ಕೆಟ್ಟದ್ದಾದರೆ, ಸಹಾನುಭೂತಿ ವ್ಯಕ್ತ ಪಡಿಸುತ್ತೇವೆ. ಸಾರಾ ಮಹೇಶ್ ಈ ಮಟ್ಟಿಗೆ ಮಾತನಾಡುತ್ತಾರೆ ಅಂದ್ರೆ ಅವರು ರಾಜಕಾರಣಕ್ಕೆ ಲಾಯಕ್​​ ಇಲ್ಲ ಎಂದು ಖಾರವಾಗೆ ಮಾತನಾಡಿದರು.

ಏನೇ ಆಗಲಿ ಎಷ್ಟೇ ಕಷ್ಟ ಬಂದರೂ ನಾವು ಹೆಚ್.ವಿಶ್ವನಾಥ್ ಪರವಾಗಿಯೇ ಇರುತ್ತೇವೆ. ನಾವು ಮೂಲ ಆದೇಶವನ್ನೇ ಚಾಲೆಂಜ್ ಮಾಡಲಿದ್ದೇವೆ. ಸುಪ್ರೀಂ ಕೋರ್ಟ್​​ನಲ್ಲೇ ಹೈಕೋರ್ಟ್ ಆದೇಶ ಚಾಲೆಂಜ್ ಮಾಡುತ್ತೇವೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲೇ ಹೋಗಬೇಕಿತ್ತು. ಆದ್ರೆ ಟೈಮ್ ಸಿಕ್ಕಿರಲಿಲ್ಲ, ಹೆಚ್.ವಿಶ್ವನಾಥ್ ಅವರಿಗೆ ಒಳ್ಳೆಯದು ಆಗಲಿದೆ. ಏನೇ ಇರಲಿ ವಿಶ್ವನಾಥ್ ಪರವಾಗಿ ನಾವು ಇದ್ದೇವೆ. ಕಾನೂನು ಹೋರಾಟದಲ್ಲಿ ನಮಗೂ ಕಣ್ಣೀರು ಬಂದಿದೆ. ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಸಿ.ಪಿ.ಯೋಗೇಶ್ವರ್​ಗೆ ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆ ಪರ ವಿರೋಧದ ಮಾತುಗಳು ಕೇಳಿ ಬರುತ್ತಿದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣಿಕರ್ತರಾದ ರಮೇಶ್ ಜಾರಕಿಹೋಳಿ ಮಾತ್ರ ಸಂತಸ ಸೂಚಿಸಿದ್ದಾರೆ. ಸಿ.ಪಿ.ಯೋಗೇಶ್ವರ ಮೂಲಕ ಡಿಕೆ ಶಿವಕುಮಾರ್​ ಅವರನ್ನು ಯಾವ ರೀತಿ ಕಟ್ಟಿ ಹಾಕಲು ರಮೇಶ್ ಸಾಹುಕಾರ್ ಪ್ಲಾನ್ ಮಾಡಿದ್ದಾರೆ ಎನ್ನುವುದೇ ಕುತೂಹಲ.
Published by:Latha CG
First published: