ಕೆಪಿಸಿಸಿ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್​ ಸೇರಿದ ಬಿಜೆಪಿ ನಾಯಕ ರಾಜು ಕಾಗೆ

ಇಂದು ನಡೆದ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್​ ಸೇರಿದರು. ಕಾಂಗ್ರೆಸ್ ಶಾಲು ಹಾಕಿ, ಪಕ್ಷದ ಧ್ವಜ ನೀಡಿ ರಾಜು ಕಾಗೆಯನ್ನು  ದಿನೇಶ್​ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಮತ್ತು ನಾಯಕರು ಬರಮಾಡಿಕೊಂಡರು.

Seema.R | news18-kannada
Updated:November 14, 2019, 4:57 PM IST
ಕೆಪಿಸಿಸಿ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್​ ಸೇರಿದ ಬಿಜೆಪಿ ನಾಯಕ ರಾಜು ಕಾಗೆ
ಇಂದು ನಡೆದ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್​ ಸೇರಿದರು. ಕಾಂಗ್ರೆಸ್ ಶಾಲು ಹಾಕಿ, ಪಕ್ಷದ ಧ್ವಜ ನೀಡಿ ರಾಜು ಕಾಗೆಯನ್ನು  ದಿನೇಶ್​ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಮತ್ತು ನಾಯಕರು ಬರಮಾಡಿಕೊಂಡರು.
  • Share this:
ಬೆಂಗಳೂರು (ಅ.14): ಅನರ್ಹ ಶಾಸಕರು ಬಿಜೆಪಿ ಸೇರ್ಪಡನೆಯಾಗುತ್ತಿದ್ದಂತೆ ಕಮಲ ಪಾಳೆಯದಲ್ಲಿ ಟಿಕೆಟ್​ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟಿಸಿದೆ. ಅನರ್ಹರಿಗೆ ಪಕ್ಷ ಟಿಕೆಟ್​ಘೋಷಿಸಿದ್ದಂತೆ ಪಕ್ಷ ತೊರೆಯಲು ಮುಂದಾಗಿದ್ದು, ಬಿಜೆಪಿ ನಾಯಕ ರಾಜು ಕಾಗೆ ಇಂದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರಿದ್ದಾರೆ.

ಕಾಂಗ್ರೆಸ್​ ಸೇರುವ ಕುರಿತು ಈಗಾಗಲೇ ಕಾಗೆ ಪಕ್ಷದ ಅಧ್ಯಕ್ಷರಾದ ದಿನೇಶ್​ ಗುಂಡೂರಾವ್​, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರೊಂದಿಗೆ ಚರ್ಚೆ ನಡೆಸಿದ್ದರು. ಅಥಣಿ ಅಥವಾ ಕಾಗವಾಡದಿಂದ ಟಿಕೆಟ್​ ಸಿಗುವ ಭರವಸೆ ನೀಡಿದ ಬಳಿಕ ಅವರು ಪಕ್ಷ ತೊರೆಯಲಿ ಸನ್ನದ್ಧರಾಗಿದ್ದಾರೆ.

ಇಂದು ನಡೆದ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್​ ಸೇರಿದರು. ಕಾಂಗ್ರೆಸ್ ಶಾಲು ಹಾಕಿ, ಪಕ್ಷದ ಧ್ವಜ ನೀಡಿ ರಾಜು ಕಾಗೆಯನ್ನು  ದಿನೇಶ್​ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಮತ್ತು ನಾಯಕರು ಬರಮಾಡಿಕೊಂಡರು.

ಸೇರ್ಪಡನೆಗೊಂಡ ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ಬರಮಾಡಿಕೊಂಡ ನಾಯಕರಿಗೆ ಧನ್ಯವಾದ ತಿಳಿಸಿದರು. ಒಬ್ಬ ಕಾಂಗ್ರೆಸ್ಸಿಗನಾಗಿ ನಾನು  ಕೆಲಸ ಮಾಡಲಿದ್ದು, ಪಕ್ಷ ಕೊಟ್ಟ ಕೆಲಸವನ್ನ ನಿಭಾಯಿಸುತ್ತೇನೆ ಎಂಬ ಭರವಸೆ ನೀಡಿದರು.

ಕಾಂಗ್ರೆಸ್​​ಗೆ ಕಾಗೆ ಸೇರ್ಪಡನೆಯಾಗುತ್ತಿದ್ದಂತೆ ಪಕ್ಷ ಕಾಗೆಗೆ ಕಾಗವಾಡ ಉಪಚುನಾವಣಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಕಾಗೆ ಸ್ಪರ್ಧೆಯಿಂದಾಗಿ ಬೆಳಗಾವಿಯಲ್ಲಿ ಪಕ್ಷ ಇನ್ನಷ್ಟು ಬಲವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಿಳಿಸಿದರು.

ಇದನ್ನು ಓದಿ: ರೋಷನ್​ ಬೇಗ್​, ಎಂಟಿಬಿ ಹೊರತುಪಡಿಸಿ ಉಳಿದ 15ಅನರ್ಹರು ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಸಭೆಯಲ್ಲಿ ಕೆಪಿಸಿಸಿ‌ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಬಿಕೆ ಹರಿ ಪ್ರಸಾದ್, ಮುನಿಯಪ್ಪ ,ಮೊಯಿಲಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸೇರಿ ಇತರೆ ನಾಯಕರು ಭಾಗಿಯಾಗಿಯಾಗಲಿದ್ದಾರೆ.
First published: November 14, 2019, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading