ಕಾಗವಾಡ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಿ, ಇಲ್ಲಾ ಕಾಂಗ್ರೆಸ್​ಗೆ ಹೋಗ್ತೀನಿ; ಬಿಜೆಪಿ ನಾಯಕ ರಾಜು ಕಾಗೆ

ಒಬ್ಬ ಜಿ.ಪಂ ಸದಸ್ಯರಿಗೆ ನೀಡುವ ಸ್ಥಾನಮಾನ ಬೇಕಿಲ್ಲ. ಮಗು ಅಳುತ್ತೆ ಅಂತ ಚಾಕೊಲೇಟ್​ ಕೊಟ್ಟು, ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ತಿರಸ್ಕರಿಸಿದರೆ, ಕಾಂಗ್ರೆಸ್​ಗೆ ಹೋಗುತ್ತೇನೆ-ರಾಜು ಕಾಗೆ

Latha CG | news18-kannada
Updated:October 12, 2019, 10:45 AM IST
ಕಾಗವಾಡ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಿ, ಇಲ್ಲಾ ಕಾಂಗ್ರೆಸ್​ಗೆ ಹೋಗ್ತೀನಿ; ಬಿಜೆಪಿ ನಾಯಕ ರಾಜು ಕಾಗೆ
ರಾಜು ಕಾಗೆ
  • Share this:
ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ್​​ಗೆ ಬಿಜೆಪಿ ಟಿಕೆಟ್ ನೀಡುವ ಹಿನ್ನೆಲೆ, ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಅವರನ್ನು ಸಮಾಧಾನ ಮಾಡಲು ಕಾಡಾ ನಿಗಮ ಮಂಡಳಿ ಸ್ಥಾನ ನೀಡಲಾಗಿತ್ತು. ಆದರೆ ಈಗ ರಾಜು ಕಾಗೆ  ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ನಾಯಕರು ಆಪ್ತರನ್ನು ತಿರಸ್ಕಾರ ಮಾಡಿದ್ದಾರೆ. ಕಾಡಾ ನಿಗಮ ಮಂಡಳಿ ಸ್ಥಾನ ನನ್ನ ಯೋಗ್ಯತೆಗೆ ತಕ್ಕ ಸ್ಥಾನ ಅಲ್ಲ. ನಾನು ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ ವ್ಯಕ್ತಿ. ಒಬ್ಬ ಜಿಲ್ಲಾ ಪಂಚಾಯತ್​ ಸದಸ್ಯನಿಗೆ ನೀಡುವ ಸ್ಥಾನವನ್ನು ನನಗೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ; ಹೊಸಕೋಟೆಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

ಅನರ್ಹ ಶಾಸಕ ಶ್ರೀಮಂತ ಪಾಟೀಲ್​ ಟಿಕೆಟ್​ ನೀಡಲು ನನಗೆ ನಿಗಮ ಮಂಡಳಿ ಸ್ಥಾನ ನೀಡಲಾಗಿದೆ. ನನಗೆ ಟಿಕೆಟ್ ಕೊಡಿ, ಇಲ್ಲವಾದರೆ ಕಾಂಗ್ರೆಸ್​ಗೆ ಹೋಗುತ್ತೇನೆ. ಈಗಾಗಲೇ ಕಾಂಗ್ರೆಸ್​ನವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದೇನೆ. ಪಕ್ಷದಲ್ಲಿ ಸರಿಯಾದ ಸ್ಥಾನಮಾನ ನೀಡದೆ ಹೋದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಶಾಸಕ ರಾಜು ಎಚ್ಚರಿಕೆ ನೀಡಿದ್ದಾರೆ.

ಒಬ್ಬ ಜಿ.ಪಂ ಸದಸ್ಯರಿಗೆ ನೀಡುವ ಸ್ಥಾನಮಾನ ಬೇಕಿಲ್ಲ. ಮಗು ಅಳುತ್ತೆ ಅಂತ ಚಾಕೊಲೇಟ್​ ಕೊಟ್ಟು, ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ತಿರಸ್ಕರಿಸಿದರೆ, ಕಾಂಗ್ರೆಸ್​ಗೆ ಹೋಗುತ್ತೇನೆ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್​.ಕೆ ಪಾಟೀಲ್ ಜೊತೆ ಈಗಾಗಲೇ ಮಾತನಾಡಿದ್ದೇನೆ. ಕಾಂಗ್ರೆಸ್​ನಿಂದ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ ಎಂದರು.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading