Modi Statue: ಬಿಜೆಪಿ ನಾಯಕನ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಸ್ಥಾಪನೆ! ನಮೋ ಪಕ್ಕ ನಿಂತು ಗೃಹಸಚಿವರ ಪೋಸ್

ಬಿಜೆಪಿ ನಾಯಕ ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಳೆತ್ತರ ಪ್ರತಿಮೆ ಸ್ಥಾಪಿಸಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ರಾಘವೇಂದ್ರ ಶೆಟ್ಟಿ ಅವರ ಮನೆ ಗೃಹಪ್ರವೇಶ ನಡೆದಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಸ್ಥಾಪಿಸಲಾಗಿದೆ.

ಬಿಜೆಪಿ ನಾಯಕನ ಮನೆಯಲ್ಲಿ ಮೋದಿ ಪ್ರತಿಮೆ

ಬಿಜೆಪಿ ನಾಯಕನ ಮನೆಯಲ್ಲಿ ಮೋದಿ ಪ್ರತಿಮೆ

  • Share this:
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಶ್ವದ ಪ್ರಭಾವಿ ನಾಯಕರಲ್ಲಿ (The world’s most influential leader) ಅಗ್ರಸ್ಥಾನದಲ್ಲಿದ್ದಾರೆ. ಅವರಿಗೆ ಬಿಜೆಪಿ ನಾಯಕರು (BJP Leaders), ಕಾರ್ಯಕರ್ತರಷ್ಟೇ ಅಲ್ಲ, ಅದರ ಹೊರತಾಗಿಯೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ (Fans). ಸಾಮಾಜಿಕ ಜಾಲತಾಣಗಳಲ್ಲೂ (Social Media) ಕೋಟ್ಯಾಂತರ ಸಂಖ್ಯೆಯ ಮೋದಿ ಫಾಲೋವರ್ಸ್ (Followers) ಇದ್ದಾರೆ. ಅದೆಷ್ಟೋ ಮಂದಿ ಮೋದಿ ಹಾವಭಾವ, ಉಡುಗೆ ತೊಡುಗೆ, ಸ್ಟೈಲ್‌ಗಳನ್ನು (Style) ಅನುಕರಿಸುತ್ತಾರೆ. ಅದೆಷ್ಟೋ ಮಂದಿ ಮೋದಿಯವರನ್ನು ಆರಾಧಿಸುತ್ತಾರೆ. ಇದೀಗ ಬಿಜೆಪಿ ನಾಯಕರೊಬ್ಬರು ತಮ್ಮ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಳೆತ್ತರದ ಪ್ರತಿಮೆ (Statue) ಸ್ಥಾಪನೆ ಮಾಡಿದ್ದಾರೆ.

ಬಿಜೆಪಿ ನಾಯಕನ ಮನೆಯಲ್ಲಿ ಮೋದಿ ಪ್ರತಿಮೆ

ಬಿಜೆಪಿ ನಾಯಕ ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಳೆತ್ತರ ಪ್ರತಿಮೆ ಸ್ಥಾಪಿಸಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ರಾಘವೇಂದ್ರ ಶೆಟ್ಟಿ ಅವರ ಮನೆ ಗೃಹಪ್ರವೇಶ ನಡೆದಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಸ್ಥಾಪಿಸಲಾಗಿದೆ.

ಪ್ರಧಾನಿ ಪ್ರತಿಮೆ ಪಕ್ಕ ನಿಂತು ಗೃಹಸಚಿವರ ಪೋಸ್

ರಾಘವೇಂದ್ರ ಶೆಟ್ಟಿ ಮನೆ ಗೃಹಪ್ರವೇಶಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಆಗಮಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಪಕ್ಕ ನಿಂತ ಆರಗ ಜ್ಞಾನೇಂದ್ರ, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Modi's Teacher: ಬಾಲ್ಯದ ಶಿಕ್ಷಕರನ್ನು ಭೇಟಿಯಾದ ಮೋದಿ, ಶಿಷ್ಯನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದ ಗುರು!

ಮನೆಗೆ ಪ್ರಧಾನಿ ಮೋದಿ ಹೆಸರು ಇಟ್ಟಿದ್ದ ಅಭಿಮಾನಿ

ಹಿಂದೊಮ್ಮೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಭಿಮಾನಿಯೊಬ್ಬರು ತಮ್ಮ ಮಗಳಿಗಾಗಿ ಕಟ್ಟಿಸಿದ್ದ ಮನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇಟ್ಟು ಅಭಿಮಾನ ಮೆರೆದಿದ್ದರು.

ಮನೆಗೆ ‘ನರೇಂದ್ರ ಮೋದಿ ನಿವಾಸ’ ಅಂತ ಹೆಸರು

ಚನ್ನಗಿರಿಯ ಗೌಡರ ಹಾಲೇಶ್ ಎಂಬ ಮೋದಿ ಅಭಿಮಾನಿಯೊಬ್ಬರು ಆಸ್ಟೇಲಿಯಾದಲ್ಲಿದ್ದ ತಮ್ಮ ಮಗಳು ಭುವನೇಶ್ವರಿ ಎಂಬುವರಿಗೆ ಚನ್ನಗಿರಿಯಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅದಕ್ಕೆ ನರೇಂದ್ರ ಮೋದಿ ನಿವಾಸ ಅಂತ ಹೆಸರಟ್ಟಿದ್ದರು.

ಮನೆ ಮುಂದೆ ನರೇಂದ್ರ ಮೋದಿ ನಾಮಫಲಕ

ಮನೆ‌ ನಿರ್ಮಾಣ ಮಾಡಿದ‌ ಹಾಲೇಶ್, ಮನೆ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಯಾವ ಹೆಸರೂ ಅವರಿಗೆ ಇಷ್ಟವಾಗಲಿಲ್ಲ. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟರೆ ಹೇಗೆ ಅಂತ ಯೋಚಿಸಿ, ಜ್ಯೋತಿಷಿಗಳನ್ನು ಕೇಳಿದ್ದಾರೆ. ಅದಕ್ಕೆ ಅಭ್ಯಂತರವೇನೂ ಇಲ್ಲ ಎಂದಾಗ ನರೇಂದ್ರ‌ ಮೋದಿ ನಿಲಯ ಎಂಬ ಹೆಸರು ಅವರಿಗೆ ಇಷ್ಟ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಿಟ್ಟು ಆ ಮನೆ ಮುಂದೆ ನಾಮಫಲಕ ಕೂಡ ಹಾಕಿಸಿದ್ದಾರೆ.

ನಾನು ಮೋದಿಯವರ ಪಕ್ಕಾ ಅಭಿಮಾನಿ

ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಹೊಸ ಮನೆ ಸಾರ್ವಜನಿಕರ ಆಕರ್ಷಣೆಯ ತಾಣವಾಗಿದೆ. 'ನೂತನ ಮನೆಗೆ ಸಹ್ಯಾದ್ರಿ ಅಥವಾ ಶಿವಾಜಿ ಎಂದು ಹೆಸರಿಡಲು ಇಚ್ಛಿಸಿದ್ದೆವು. ನಾನು ನರೇಂದ್ರ ಮೋದಿಯವರ ಪಕ್ಕಾ ಅಭಿಮಾನಿ. ಹಾಗಾಗಿ ಅವರ ಹೆಸರನ್ನೇ ಮನೆಗೆ ಇಟ್ಟಿದ್ದೇನೆ' ಎಂದು ಹಾಲೇಶ್ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಈ ಅಭಿಮಾನಿಯ ಹೊಸ ಮನೆಯ ಹೆಸರು 'ಶ್ರೀ ನರೇಂದ್ರ ಮೋದಿ ನಿಲಯ'!

ಮೋದಿಯವರ ಕರೆಗೆ ಸ್ಪಂದಿಸಿದ್ದ ಹಾಲೇಶ್

ಈ ಹಿಂದೆ `ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದಾಗ, ನಾನು ತಕ್ಷಣವೇ ಸಬ್ಸಿಡಿಯನ್ನು ನಿರಾಕರಿಸಿದೆ ಮತ್ತು ಕೋವಿಡ್ -19 ಸಮಯದಲ್ಲಿ ಪಿಎಂ ಕೇರ್ಸ್ ನಿಧಿಗೆ ಸಹ ಕೊಡುಗೆ ನೀಡಿದ್ದೇನೆ. ಜನರು ಪ್ರಧಾನಿ ತೋರಿದ ಮಾರ್ಗವನ್ನು ಅನುಸರಿಸಬೇಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತವನ್ನು ಶ್ರೇಷ್ಠಗೊಳಿಸಬೇಕು ಎಂದು ಹಾಲೇಶ್ ಅಭಿಪ್ರಾಯಪಟ್ಟಿದ್ದಾರೆ.
Published by:Annappa Achari
First published: