ಕೊಟ್ಟು ಬಿಡಿ ರಾಜೀನಾಮೆನಾ.. ಎಷ್ಟು ದಿನ ಅಂತಾ ಹೀಗೆ ಮಾತಾಡ್ತೀರಾ..?; ಮಾಜಿ ಡಿಸಿಎಂ ಆರ್​.ಅಶೋಕ್​ ವ್ಯಂಗ್ಯ

ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಗಿದೆ. ಕಾಂಗ್ರೆಸ್​ನವರು ಕಾಗೆ, ಕುಮಾರಸ್ವಾಮಿ ಟೊಂಗೆ ಎಂದು ವ್ಯಂಗ್ಯ ಮಾಡಿದ್ದಾರೆ.

Latha CG | news18
Updated:January 28, 2019, 1:59 PM IST
ಕೊಟ್ಟು ಬಿಡಿ ರಾಜೀನಾಮೆನಾ.. ಎಷ್ಟು ದಿನ ಅಂತಾ ಹೀಗೆ ಮಾತಾಡ್ತೀರಾ..?; ಮಾಜಿ ಡಿಸಿಎಂ ಆರ್​.ಅಶೋಕ್​ ವ್ಯಂಗ್ಯ
ಸಿಎಂ ಕುಮಾರಸ್ವಾಮಿ- ಆರ್​. ಅಶೋಕ್​​
  • News18
  • Last Updated: January 28, 2019, 1:59 PM IST
  • Share this:
ಬೆಂಗಳೂರು,(ಜ.28): ರಾಜೀನಾಮೆ ಕೊಡ್ತೀನಿ ಕೊಡ್ತೀನಿ ಎನ್ನಬೇಡಿ, ಕೊಡುವುದಿದ್ದರೆ ಒಮ್ಮೆಗೇ ಕೊಟ್ಟು ಬಿಡಿ ಎಂದು ಮಾಜಿ ಡಿಸಿಎಂ ಆರ್​.ಅಶೋಕ್​ ಸಿಎಂ ಕುಮಾರಸ್ವಾಮಿಗೆ ಕುಹಕವಾಡಿದ್ದಾರೆ. ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಗಿದೆ. ಕಾಂಗ್ರೆಸ್​ನವರು ಕಾಗೆ, ಕುಮಾರಸ್ವಾಮಿ ಟೊಂಗೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕೊಟ್ಟುಬಿಡಿ ರಾಜೀನಾಮೆನಾ.. ಎಷ್ಟು ದಿನ ಅಂತಾ ಹೀಗೆ ಮಾತಾಡ್ತೀರಾ..? ಸರ್ಕಾರದಲ್ಲಿ ಏನು ಕೆಲಸ ಆಗುತ್ತಿಲ್ಲ. ಸರ್ಕಾರ ಬೀಳಲಿ ಅಂತಾ ಜನರೇ ಕಾಯ್ತಿದ್ದಾರೆ ಎಂದು ಅಪಹಾಸ್ಯ ಮಾಡಿದರು.

ಇದನ್ನೂ ಓದಿ: ನಿಮ್ಮ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ..? ಡಿಸಿಎಂ ಮೇಲೆ ಕುಮಾರಸ್ವಾಮಿ ಸಿಟ್ಟು

ಕ್ಲರ್ಕ್​, ತಂತಿ ಮೇಲೆ ನಡಿಗೆ, ಕಾಂಗ್ರೆಸ್​ನವರ ಕಿರುಕುಳ.. ಹೀಗೆ ಕುಮಾರಸ್ವಾಮಿ ಹೇಳಿಕೆ ಕೊಡ್ತಾನೆ ಇದ್ದಾರೆ. ಇದು ಕಳ್ಳ-ಪೊಲೀಸ್​​ ಆಟ ಆಗಿದೆ. ದೇವೇಗೌಡರು ಒಂದು ಹೇಳಿಕೆ, ಸಿದ್ದರಾಮಯ್ಯ ಒಂದು ಹೇಳಿಕೆ, ಕುಮಾರಸ್ವಾಮಿ ಒಂದು ಹೇಳಿಕೆ ಹೀಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ನಾಯಕರ ಮೇಲೆ ಹರಿಹಾಯ್ದರು.

ಇಷ್ಟೆಲ್ಲಾ ಗೊಂದಲಗಳಿಗೆ ಸಿದ್ದರಾಮಯ್ಯನವರೇ ಕಾರಣ. ಧರ್ಮಸ್ಥಳಕ್ಕೆ ಹೋಗಿ ಕುಂತು ಗೊಂದಲ ಕ್ರಿಯೇಟ್​ ಮಾಡಿದ್ದು ಇದೇ ಸಿದ್ದರಾಮಯ್ಯ. ಲೋಕಸಭಾ ಚುನಾವಣೆಗೂ ಮುನ್ನ ಇವರು ಸರ್ಕಾರ ಇರೋಕೆ ಬಿಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನಮ್ಮ ಶಾಸಕರನ್ನು ನಾವೇ ಕಂಟ್ರೋಲ್​​ ಮಾಡೋದು; ಇನ್ನೇನು ಜೆಡಿಎಸ್​​ ಮಾಡುತ್ತಾ? ಎಚ್​​ಡಿಕೆಗೆ ಸಿದ್ದರಾಮಯ್ಯ ತಿರುಗೇಟು!

First published: January 28, 2019, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading