ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡಿಸುವುದೇ ಅನುಮಾನ; ಬಿಜೆಪಿ ನಾಯಕ ಆರ್​. ಅಶೋಕ್ ಟೀಕೆ

20ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದಂತೆ ಓಡಾಡುತ್ತಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸುವುದೇ ಅನುಮಾನ ಎಂದು ಆರ್. ಅಶೋಕ್​ ಹೇಳಿದ್ದಾರೆ.

sushma chakre | news18
Updated:February 2, 2019, 3:10 PM IST
ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡಿಸುವುದೇ ಅನುಮಾನ; ಬಿಜೆಪಿ ನಾಯಕ ಆರ್​. ಅಶೋಕ್ ಟೀಕೆ
ಬಿಜೆಪಿ ಮುಖಂಡ ಆರ್.ಅಶೋಕ್
sushma chakre | news18
Updated: February 2, 2019, 3:10 PM IST
ಶ್ರೀನಿವಾಸ್​ ಹಳಕಟ್ಟಿ

ಬೆಂಗಳೂರು (ಫೆ. 2): ಕೇಂದ್ರ ಸರ್ಕಾರ ಬಜೆಟ್​ ಮೂಲಕ ಜನರಿಗೆ ಲಾಲಿಪಾಪ್​ ನೀಡಿದೆ ಎಂದು ಕಾಂಗ್ರೆಸ್​ನವರು ಟೀಕಿಸುತ್ತಿದ್ದಾರೆ. ನಾವು ಲಾಲಿಪಾಪ್​ ಆದರೂ ಕೊಟ್ಟಿದ್ದೇವೆ. 60 ವರ್ಷ ದೇಶವನ್ನಾಳಿದವರು ಕಡಲೆಪಾಪ್​ ಕೂಡ ನೀಡಿಲ್ಲವಲ್ಲ ಎಂದು ಬಿಜೆಪಿ ನಾಯಕ ಆರ್​. ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರ ರಾಜ್ಯ ಬಜೆಟ್ ಮಂಡಿಸುವುದೇ ಅನುಮಾನ. ಈಗಾಗಲೇ 20ರಿಂದ 25 ಅತೃಪ್ತ ಶಾಸಕರು ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಜಗಳಕ್ಕೆ ಬಿಜೆಪಿ ಕಾರಣ ಅನ್ನೋದು ಸರಿಯಲ್ಲ. ನಾವೇನು ಸನ್ಯಾಸಿಗಳಲ್ಲ. ನಾವು ರಾಜಕೀಯ ಮಾಡೋದಕ್ಕೆ ಇರೋದು. ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಲಿ. ಆ ಸಂದರ್ಭವನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಆರ್​. ಅಶೋಕ್ ಹೇಳಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರದ ಸಿಎಂ ಯಾರು ಅಂತಾ ಅವರಿಗೇ ಗೊತ್ತಿಲ್ಲ; ಬಿ.ಜೆ.ಪುಟ್ಟಸ್ವಾಮಿ ವ್ಯಂಗ್ಯ

20ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದಂತೆ ಓಡಾಡುತ್ತಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸುವುದೇ ಅನುಮಾನ. ಒಂದು ವೇಳೆ 20 ಶಾಸಕರು ರಾಜೀನಾಮೆ ಕೊಟ್ಟರೂ ಸುಮ್ಮನೆ ಇರಲು ನಾವೇನು ಸನ್ಯಾಸಿಗಳಲ್ಲ. ಆ ಸಂದರ್ಭವನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆ. ಆದರೆ ನಾವಾಗಿಯೇ ಮೈತ್ರಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡೋದಿಲ್ಲ ಎಂದು ಆರ್​. ಅಶೋಕ್​ ಸ್ಪಷ್ಟಪಡಿಸಿದ್ದಾರೆ.

ನಾವು ಕೊಟ್ಟಿದ್ದು ಲಾಲಿಪಾಪ್, ಇವರು ಕೊಟ್ಟಿದ್ದು ಕಾಟನ್ ಕ್ಯಾಂಡಿಯಾ? ಬಜೆಟ್ ವಿರುದ್ಧ ಹೆಚ್​ಡಿಕೆ ಕಿಡಿ

ಇದೇವೇಳೆ, ಕೇಂದ್ರದ ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್​. ಅಶೋಕ್, ಮೋದಿ ಬಜೆಟ್ ದೇಶಕ್ಕೆ ಸಿಹಿ, ವಿರೋಧಿಗಳಿಗೆ ಕಹಿಯಾಗಿದೆ. ದೇಶದ ಜನರಿಗೆ ಲಾಲಿಪಪ್ ಆದರೂ ಕೊಟ್ಟಿದ್ದೇವೆ. 60 ವರ್ಷ ದೇಶ ಆಳಿದವರು ಕಡ್ಲೆಪಾಪ್​ ಕೂಡ ಕೊಡಲಿಲ್ಲ. ಹಾಸನದ ರೈತರ ಸಾಲಮನ್ನಾ ಮಾಡುವ ಬಜೆಟ್ ಇದಲ್ಲ. ರೈತ ಬದುಕಿರುವವರೆಗೂ ಪ್ರತಿವರ್ಷ 6 ಸಾವಿರ ಸಿಗುತ್ತದೆ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಒಂದು ಬಾರಿಗೆ ಮಾತ್ರ. ಆದರೆ, ಮೋದಿಯವರ ಯೋಜನೆ ಜೀವನಪರ್ಯಂತ ಇರುತ್ತದೆ ಎಂದಿದ್ದಾರೆ.
Loading...

ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧಿಸುವ ವಿಚಾರವಾಗಿ ಬಿಜೆಪಿ ಬೆಂಬಲ ನೀಡುವ ಬಗ್ಗೆ ಸಮಯ ಬಂದಾಗ ಪಕ್ಷ ನಿರ್ಧರಿಸುತ್ತದೆ. ಈ ವಿಚಾರದಲ್ಲಿ ಮಿತ್ರ ಪಕ್ಷಗಳ ನಡುವೆ ಗೊಂದಲವಿದೆ ಎಂದು ಅಶೋಕ್​ ಹೇಳಿದ್ದಾರೆ.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ