• Home
  • »
  • News
  • »
  • state
  • »
  • Karnataka Politics: ಸಿದ್ದರಾಮಯ್ಯ ವಿರುದ್ಧ ‘ಭೂ ಚಕ್ರ’ ಪ್ರಯೋಗಿಸಲು ಬಿಜೆಪಿ ಸಿದ್ಧತೆ

Karnataka Politics: ಸಿದ್ದರಾಮಯ್ಯ ವಿರುದ್ಧ ‘ಭೂ ಚಕ್ರ’ ಪ್ರಯೋಗಿಸಲು ಬಿಜೆಪಿ ಸಿದ್ಧತೆ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರ ಕಾಲದಲ್ಲಿ ಕೇಳಿ ಬಂದ ಹಗರಣಗಳನ್ನು ಮುನ್ನಲೆಗೆ ತರುತ್ತಿದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ (BJP) ಭೂ ಚಕ್ರ ಪ್ರಯೋಗಿಸಲು ಮುಂದಾಗಿದೆ.

  • Share this:

ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುಧ್ಧ ಕಾಂಗ್ರೆಸ್ (Congress) ಪೇಸಿಎಂ ಪೋಸ್ಟರ್ (Paycm Poster) ಅಭಿಯಾನ ಹಮ್ಮಿಕೊಂಡಿದೆ. ಬೆಂಗಳೂರು (Bengaluru) ನಗರದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಪೇಸಿಎಂ ಪೋಸ್ಟರ್​​ಗಳು ಈಗ ರಾಜ್ಯದ ಎಲ್ಲಾ ಭಾಗದಲ್ಲಿಯೂ ಹಚ್ಚಲಾಗುತ್ತದೆ. ಪಿಎಸ್​ಐ ನೇಮಕಾತಿ (PSI Recruitment Scam), ಕೆಪಿಎಸ್​ಸಿ ನೇಮಕಾತಿ (KPSC Recruitment) ಹಗರಣಗಳನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.  ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರ ಕಾಲದಲ್ಲಿ ಕೇಳಿ ಬಂದ ಹಗರಣಗಳನ್ನು ಮುನ್ನಲೆಗೆ ತರುತ್ತಿದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ (BJP) ಭೂ ಚಕ್ರ ಪ್ರಯೋಗಿಸಲು ಮುಂದಾಗಿದೆ.


ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿನ ಸಿದ್ದಾಪುರ ಮತ್ತು ಭೂಪಸಂದ್ರದಲ್ಲಿ ಡಿ ನೋಟಿಫಿಕೇಶನ್ ಸಿದ್ದಾಪುರ-200 ಕೋಟಿ ಅಕ್ರಮ ಮತ್ತು ಭೂಪಸಂದ್ರದಲ್ಲಿ 350 ಕೋಟಿ ಅಕ್ರಮದ ಆರೋಪ ಕೇಳಿ ಬಂದಿತ್ತು.


ಈಗ ಡಿನೋಟಿಫಿಕೇಶನ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳ ಸಮೇತ ಬಿಜೆಪಿ ನಾಯಕ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.


ಅಕ್ಟೋಬರ್ 12ರಂದು ದೂರು ಸಲ್ಲಿಸುವ ಸಾಧ್ಯತೆ


ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೇ ಸಿದ್ದರಾಮಯ್ಯ ವಿರುದ್ಧ ಭೂಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಅಕ್ಟೋಬರ್ 12ರಂದು ಲೋಕಾಯುಕ್ತಕ್ಕೆ ದೂರು ನೀಡಲು ಎನ್.ಆರ್.ರಮೇಶ್ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂಬಂಧ ತಮ್ಮಲ್ಲಿರುವ ದಾಖಲೆಗಳನ್ನು ವಕೀಲರ ಬಳಿ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


BJP Leader NR Ramesh planned to file complaint against siddaramaiah to Lokayukta mrq
ಸಿದ್ದರಾಮಯ್ಯ, ಮಾಜಿ ಸಿಎಂ


ಅ.7ಕ್ಕೆ ಬಿಜೆಪಿ ಕಾರ್ಯಕಾರಣಿ ಸಭೆ


ಬೆಂಗಳೂರುಕಾಂಗ್ರೆಸ್‌ನ ಭಾರತ್ ಜೋಡೋ, ಪೇಸಿಎಂ ಅಭಿಯಾನಕ್ಕೆ ಬಿಜೆಪಿ ನಾಯಕರು ಠಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: Jayadeva Hospital: ಜಯದೇವ ಆಸ್ಪತ್ರೆಯಿಂದ ಜನರಿಗೆ ನೂತನ ಕೊಡುಗೆ


ಇಂದು ಬೆಂಗಳೂರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಸಭೆಯಲ್ಲಿ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.


ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ರಣತಂತ್ರ ರೂಪಿಸಲಿದ್ದಾರೆ. ಜೊತೆಗೆ ನಾಯಕರ ರಾಜ್ಯ ಪ್ರವಾಸ, ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಮಹತ್ವ ಚರ್ಚೆಯಾಗಲಿದೆ.


BJP Leader NR Ramesh planned to file complaint against siddaramaiah to Lokayukta mrq
ಸಿದ್ದರಾಮಯ್ಯ, ಮಾಜಿ ಸಿಎಂ


‘ರಮೇಶ್ ಮೂಗಿಗೆ ತುಪ್ಪ ಸವರುವ ಕೆಲಸ’


ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದ್ದಾರೆ. ಮಂತ್ರಿಗಾಗಿ ಕಾಯ್ದು ಕುಳಿತ  ರಮೇಶ್ ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡ್ತಿದ್ದಾರೆ. ಬಿಜೆಪಿ ನಾಯಕರು (BJP Leaders), ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಚುನಾವಣೆ (Belagavi Elections)ನಡೆಸುವ ಪ್ರಶ್ನೆಯೇ ಇಲ್ಲ ಅಂತಿದ್ದಾರೆ.


ಇದನ್ನೂ ಓದಿ:  Sonia Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ, ಅಮ್ಮನ ಶೂ ಲೇಸ್ ಕಟ್ಟಿದ ರಾಗಾ


ಇನ್ನೂ ಯಡಿಯೂರಪ್ಪನವರನ್ನ ನಮ್ಮ ನಾಯಕ ಅಂತಾ ಒಪ್ಪಿಕೊಂಡಿಲ್ಲ, ಇನ್ನೂ ರಮೇಶ್ ಜಾರಕಿಹೊಳಿ ಯಾವ ಲೆಕ್ಕ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಲೇವಡಿ ಮಾಡಿದ್ರು.


BJP Leader NR Ramesh planned to file complaint against siddaramaiah to Lokayukta mrq
ಸಿದ್ದರಾಮಯ್ಯ, ಮಾಜಿ ಸಿಎಂ


ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ


Bharat Jodo Yatra: ಎರಡು ದಿನದ ಬ್ರೇಕ್ ಬಳಿಕ ಭಾರತ್ ಜೋಡೋ ಯಾತ್ರೆ ಆರಂಭಗೊಂಡಿದೆ. ಇಂದಿನ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದಾರೆ. ಸೋನಿಯಾ ಗಾಂಧಿ ಅವರ ಎಡ ಮತ್ತು ಬಲ ಭಾಗದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡೆಯುತ್ತಿದ್ದಾರೆ. ಪಾದಯಾತ್ರೆ ಆರಂಭದಿಂದಲೂ ಅಮ್ಮನ ಪಕ್ಕದಲ್ಲಿರುವ ರಾಹುಲ್ ಗಾಂಧಿ, ತಾಯಿಯ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದಾರೆ.

Published by:Mahmadrafik K
First published: