• Home
  • »
  • News
  • »
  • state
  • »
  • Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತಕ್ಕೆ ದೂರು; RSS ವಿರುದ್ಧ ಅವಾಚ್ಯ ಪದ ಬಳಸಿ ಕೂಗು

Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತಕ್ಕೆ ದೂರು; RSS ವಿರುದ್ಧ ಅವಾಚ್ಯ ಪದ ಬಳಸಿ ಕೂಗು

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಬಿಡಿಎ ಉದ್ಯಾನವನ (BDP Park), ಸಾರ್ವಜನಿಕ (Public Use) ಬಳಕೆಗೆ ಮೀಸಲಿಟ್ಟ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಬಿಲ್ಡರ್​ಗೆ ಅನುಕೂಲ ಮಾಡಿಕೊಡಲು ಡಿನೋಟಿಫೈ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • Share this:

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಲೋಕಾಯುಕ್ತಕ್ಕೆ (Lokayukta) ದೂರು ಸಲ್ಲಿಸಲಾಗಿದೆ. ಸಿದ್ದರಾಮಯ್ಯ ಅವರ ವಿರುದ್ಧ 200 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗದ ಡಿನೋಟಿಫೈ ಆರೋಪವಿದೆ. ಈ ಹಿನ್ನೆಲೆ ಬಿಜೆಪಿ ನಾಯಕ ಎನ್.ಆರ್.ರಮೇಶ್ (BJP Leader NR Ramesh) ದೂರು ಸಲ್ಲಿಸಲಾಗಿದೆ. ಲಾಲ್​ಬಾಗ್ ಸಿದ್ಧಾಪುರದ 2 ಎಕರೆ 36.5 ಗುಂಟೆ ಬಿಡಿಎ ಜಾಗವನ್ನ ಬಿಲ್ಡರ್​ಗೆ ಡಿನೋಟಿಫೈ ಮಾಡಿದ ಆರೋಪ ಕೇಳಿ ಬಂದಿದೆ. ಬಿಡಿಎ ಉದ್ಯಾನವನ (BDP Park), ಸಾರ್ವಜನಿಕ (Public Use) ಬಳಕೆಗೆ ಮೀಸಲಿಟ್ಟ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಬಿಲ್ಡರ್​ಗೆ ಅನುಕೂಲ ಮಾಡಿಕೊಡಲು ಡಿನೋಟಿಫೈ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂದಿನ ಬಿಡಿಎ ಆಯುಕ್ತ ಶ್ಯಾಂ ಭಟ್ ವಿರುದ್ಧವೂ ದೂರು ದಾಖಲಾಗಿದೆ.


ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ


ಯಡಿಯೂರಪ್ಪ, ರಾಹುಲ್ ಗಾಂಧಿ ಪಾದಕ್ಕೂ ಸಮ ಇಲ್ಲ ಎಂದು ನಾನು ಹೇಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.


ಮೋದಿ ಪಾದದ ಧೂಳಿಗೂ ಸಿದ್ದರಾಮಯ್ಯ ಸಮನಲ್ಲ ಎಂದಿದ್ದ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನೆಹರೂ ಪಾದಕ್ಕೂ ಮೋದಿ ಸಮಾನ ಅಲ್ಲ ಅಂತ ನಾನು ಹೇಳೋಕಾಗುತ್ತಾ? ಅದೇ ರೀತಿ ನೆಹರೂ ಕಾಲಿಗೂ ಯಡಿಯೂರಪ್ಪ ಸಮನಲ್ಲ ಅಂತಾ ಹೇಳಬಹುದಲ್ವಾ? ಆದರೆ ನಾನು ಅವರಿಗೆ ಆ ರೀತಿ ಹೇಳಲ್ಲ. ಅದು ಕೀಳು ಅಭಿರುಚಿ ಎಂದು ಕಿಡಿಕಾರಿದರು.


BJP Leader NR Ramesh Complaint filed against Siddaramaiah in lokayukta mrq
ಮಾಜಿ ಸಿಎಂ ಸಿದ್ದರಾಮಯ್ಯ


ನಾನವನಲ್ಲ.. ನಾನವನಲ್ಲ..!


ಕಾಂಗ್ರೆಸ್-ಬಿಜೆಪಿ ಯಾತ್ರೆಗಳ ಮೇಲೆ ಯಾತ್ರೆ ಮಾಡ್ತಾ ಮತಬುಟ್ಟಿ ತುಂಬಿಸಿಕೊಳ್ಳೋ ಪ್ಲಾನ್ ಮಾಡುತ್ತಿವೆ. ಆದರೆ, ಜೆಡಿಎಸ್​​ನಲ್ಲಿ ಬಂಡಾಯ ಭುಗಿಲೆದ್ದಿದೆ. ಈಗಾಗಲೇ ಜೆಡಿಎಸ್​​ನಿಂದ ಒಂದು ಹೆಜ್ಜೆ ಹೊರಗಿಟ್ಟಿರೋ ಗುಬ್ಬಿ ಶಾಸಕ ಎಸ್.ಆರ್ ವಿಶ್ವನಾಥ್, ಜೆಡಿಎಸ್ ನಾಯಕರೇ ಯಾರಿಂದಲೋ ಅಡ್ಡ ಮತದಾನ ಮಾಡಿಸಿ ನಮ್ಮ ವಿರುದ್ದ ದೂರಿದ್ದಾರೆ ಎಂದು ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ನೀಡಿದ ದೂರಿಗೆ ಎಸ್‌.ಆರ್‌.ಶ್ರೀನಿವಾಸ್‌ ವಿಧಾನಸಭೆ ಕಾರ್ಯದರ್ಶಿ‌ಗೆ ಉತ್ತರಿಸಿದ್ದಾರೆ. ನಾನು ಈವರೆಗೂ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಜೆಡಿಎಸ್‌ ಬೆಂಬಲಿತ ಕುಪೇಂದ್ರರೆಡ್ಡಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Udupi Beach: ಈ ಪ್ರಸಿದ್ಧ ಬೀಚ್​ಗೆ ರಾತ್ರಿ ಬರಬೇಡಿ! ಪ್ರವಾಸಿಗರಿಗೆ ಎಚ್ಚರಿಕೆ


RSS ವಿರುದ್ಧ ಅವಾಚ್ಯ ಶಬ್ದ ಬಳಸಿ ಕೂಗು


ಈದ್ ಮಿಲಾದ್ ಹಬ್ಬರ ಮೆರವಣಿಗೆ ವೇಳೆ ಮತ್ತೊಂದು ಆಕ್ಷೇಪಾರ್ಹ ಘೋಷಣೆ ಕೂಗಲಾಗಿದೆ. ಹೌದು ಮುಸ್ಲಿಂ ಯುವಕರು ಆರ್ ಎಸ್ ಎಸ್ ವಿರುದ್ಧ ಅವಾಚ್ಯ ಶಬ್ದಗಳಿಂದ ಫೋಷಣೆ ಕೂಗಿದ್ದಾರೆ. ಅಕ್ಟೋಬರ್ 9 ರಂದು ಭದ್ರಾವತಿಯ ರಂಗಪ್ಪ ಸರ್ಕಲ್ ಬಳಿ ನಡೆದಿದ್ದ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ RSS ವಿರುದ್ಧ ಘೋಷಣೆ ಕೂಗಲಾಗಿದೆ.


BJP Leader NR Ramesh Complaint filed against Siddaramaiah in lokayukta mrq
ಸಿದ್ದರಾಮಯ್ಯ


ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲ್


ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಒತ್ತಡ ಹೆಚ್ಚಾಗುತ್ತಿದೆ. ನವೆಂಬರ್ 13ರ ಒಳಗೆ ಹಿಂದೂ ಅರ್ಚಕರನ್ನ ನೇಮಿಸನಬೇಕು ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಡೆಡ್​​ಲೈನ್ ಕೊಟ್ಟಿದೆ. ಒಂದ್ವೇಳೆ ಅರ್ಚಕರನ್ನ ನೇಮಿಸದಿದ್ರೆ ನಿಮ್ಮ ಪಕ್ಷವನ್ನು ಹಿಂದೂ ಸಮಾಜ ತಿರಸ್ಕರಿಸುತ್ತದೆ.


ದತ್ತ ಪೀಠದಲ್ಲಿ ನಮ್ಮ ಆಕ್ರೋಶವನ್ನ ನೋಡಬೇಕಾಗುತ್ತೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ:  Youth Missing: ಆಧ್ಯಾತ್ಮದತ್ತ ನನ್ನ ಪಯಣ ಆರಂಭ, ಭಯಪಡಬೇಡಿ; ಸಂದೇಶ ಕಳುಹಿಸಿ ಯುವಕ ನಾಪತ್ತೆ


ಈ ಹಿಂದೆ ದತ್ತಮಾಲೆ ಧರಿಸಿ ಬಿಎಸ್​ವೈ ಬರದಿದ್ರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಅಂತ ಹೇಳಲಾಗಿತ್ತು. ಅದೇ ರೀತಿ ಬಿಎಸ್​ವೈ ಅಧಿಕಾರ ಕಳೆದುಕೊಂಡ್ರು. ಇದೀಗ ಹಿಂದೂ ಅರ್ಚಕರನ್ನ ನೇಮಿಸದಿದ್ರೆ ನೀವೂ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಅಂತ ಸಿಎಂ ಬೊಮ್ಮಾಯಿಗೆ ಎಚ್ಚರಿಸಿದ್ದಾರೆ.

Published by:Mahmadrafik K
First published: