ರಾಜೀನಾಮೆ ಪರ್ವ ಆರಂಭಿಸಿದ್ದೇ ನಾವು, ಹೀಗಾಗಿ ಸೋತರೂ ಸಚಿವ ಸ್ಥಾನ ನೀಡಬೇಕು; ಎಂಟಿಬಿ ನಾಗರಾಜ್

11 ಮಂದಿ ಅರ್ಹ ಶಾಸಕರು, ಮೂಲ ಬಿಜೆಪಿಗರನ್ನು 3 ಮಂದಿಯನ್ನು ಮಂತ್ರಿ ಮಾಡುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ ಪಿ ಯೋಗಿಶ್ವರ್​​​​​ ಅವರನ್ನು ಮಂತ್ರಿ ಮಾಡುತ್ತಾರೆ ಎಂಬ ಮಾತಿದೆ- ಎಂಟಿಬಿ

ಎಂಟಿಬಿ ನಾಗರಾಜ್​​

ಎಂಟಿಬಿ ನಾಗರಾಜ್​​

  • Share this:
    ಹೊಸಕೋಟೆ(ಫೆ.01): ರಾಜೀನಾಮೆ ಪರ್ವ ಆರಂಭ ಮಾಡಿದ್ದೇ ರಮೇಶ್ ಜಾರಕಿಹೊಳಿ ಮತ್ತು ನಾವು. ಹೀಗಾಗಿ ರಾಜೀನಾಮೆ ನೀಡಿದ 17 ಮಂದಿಗೂ ಪ್ರಾಮುಖ್ಯತೆ ಕೊಟ್ಟು ಅಧಿಕಾರ ನೀಡಬೇಕು. 17 ಮಂದಿ ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದು ಮತ್ತು ಯಡಿಯೂರಪ್ಪ ಸಿಎಂ ಆಗಿದ್ದು. ಮಂತ್ರಿಸ್ಥಾನ ನೀಡಲು ಸೋಲು ಗೆಲುವು ಮಾನದಂಡವಲ್ಲ.  ಗೆದ್ದವರಿಗೆ ನೀಡಿದಷ್ಟೆ ಪ್ರಾಮುಖ್ಯತೆ ಸೋತವರಿಗೂ ನೀಡಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್​ ಒತ್ತಾಯಿಸಿದ್ದಾರೆ.

    ಸೋತವರಿಗೆ ಮಂತ್ರಿಸ್ಥಾನ ನೀಡುವ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿ ತಿಳಿದುಕೊಂಡಿದ್ದೇನೆ. ಕೇಂದ್ರ ನಾಯಕರ ಜೊತೆ ಏನು ಚರ್ಚೆಯಾಗಿದೆ? ಯಾರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ? ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸಿಎಂ ಭೇಟಿಗೆ ಇಂದು ಅವಕಾಶ ಕೇಳಿದ್ದೇನೆ. ಸಿಎಂ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

    Union Budget 2020: ಸಾರ್ವಜನಿಕ ಬ್ಯಾಂಕ್​ಗಳಿಗೆ 3.50 ಲಕ್ಷ ಕೋಟಿ ಅನುದಾನ; ಎಲ್​ಐಸಿ ಷೇರು ಮಾರಾಟಕ್ಕೆ ನಿರ್ಧಾರ

    11 ಮಂದಿ ಅರ್ಹ ಶಾಸಕರು, ಮೂಲ ಬಿಜೆಪಿಗರನ್ನು 3 ಮಂದಿಯನ್ನು ಮಂತ್ರಿ ಮಾಡುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ ಪಿ ಯೋಗಿಶ್ವರ್​​​​​ ಅವರನ್ನು ಮಂತ್ರಿ ಮಾಡುತ್ತಾರೆ ಎಂಬ ಮಾತಿದೆ. ಅಷ್ಟು ಬಿಟ್ಟು ಬೇರೆ ಏನೂ ನಿಖರ ಮಾಹಿತಿ ಇಲ್ಲ. ಡೆಲ್ಲಿಯಿಂದ ಬಂದ ಬಳಿಕ ಸಿಎಂ ಜೊತೆ ಯಾವುದೇ ಭೇಟಿ ಮಾತುಕತೆ ನಡೆಸಿಲ್ಲ. ನಿನ್ನೆ ತಾನೇ ಸಿಎಂ ದೆಹಲಿಯಿಂದ ಬಂದಿದ್ದಾರೆ. ಸ್ವಲ್ಪ ಆರಾಮವಾಗಿ ಇರಲಿ ಆಮೇಲೆ ನೋಡೋಣ ಎಂದರು.

    ಸಚಿವ ಸಂಪುಟ ವಿಸ್ತರಣೆ ಆಗು-ಹೋಗುಗಳ ಬಳಿಕ ಮುಂದಿನ ನಡೆ ಕೈಗೊಳ್ಳುತ್ತೇನೆ.  ಯಡಿಯೂರಪ್ಪ ನಮ್ಮ ನಾಯಕರು ನಮಗೆ ಸ್ಥಾನಮಾನ ನೀಡುವುದು ಅವರಿಗೆ ಗೊತ್ತಿದೆ. ರಾಜಕಾರಣದಲ್ಲಿ ಏಳು-ಬೀಳುಗಳು ಸಾಮಾನ್ಯ ಇದೇನು ಹೊಸದೇನಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ಯಾರ ಯಾರ ಪಾತ್ರ ಇದೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸಚಿವ ಸಂಪುಟ ವಿಚಾರವಾಗಿ ಉಳಿದ ಅರ್ಹ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಪೋನ್ ಜೊತೆ ಮಾತ್ರ ಮಾತುಕತೆ ನಡೆಸಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಮಾತನಾಡುತ್ತೇನೆ ಎಂದರು.

    ಯಡಿಯೂರಪ್ಪ ನನಗೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಮಾಡಿದಂತೆ; ಶಾಸಕ ಮಹೇಶ್ ಕುಮಟಳ್ಳಿ

     

    ಬಚ್ಚೇಗೌಡ ವಿರುದ್ಧ ಕಿಡಿಕಾರಿದ ಎಂಟಿಬಿ

     

    ಬಚ್ಚೇಗೌಡ ತನ್ನ ಮಗನನ್ನು ಕಣಕ್ಕಿಳಿಸದಿದ್ದರೆ ನಾನು ಸೋಲುತ್ತಿರಲಿಲ್ಲ. ಬಚ್ಚೇಗೌಡ ನನ್ನ ಜೊತೆ ನಿಂತಿದ್ದರೆ 50 ಸಾವಿರ ಮತಗಳಲ್ಲಿ ಗೆಲ್ಲುತ್ತಿದೆ. ಅದಕ್ಕೆ ಬಚ್ಚೇಗೌಡರ ಮೇಲೆ ಕ್ರಮಕ್ಕೆ ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಮಂತ್ರಿಮಂಡಲ ವಿಸ್ತರಣೆ ಬಳಿಕ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ. ಇದೆ. ಬಚ್ಚೇಗೌಡ ಮಂತ್ರಿಯಾಗಿ, ಸಂಸದರಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ನಾನು ಬಿಜೆಪಿ ಸೇರ್ಪಡೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದ ಬಚ್ಚೇಗೌಡ, ಬಳಿಕ ಉಲ್ಟಾ ಹೊಡೆದರು. ಮೊಬೈಲ್ ಸ್ವಿಚ್ ಆಫ್ ಮಾಡಿ ಪ್ರಚಾರಕ್ಕೂ ಬರಲಿಲ್ಲ. ಇದೆಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೂ ತಿಳಿದಿದೆ ಎಂದು ಹೇಳಿದರು.
    First published: