17 ಶಾಸಕರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿರೋದು; ಇಲ್ಲಿ ಸೋಲು-ಗೆಲುವಿನ ಪ್ರಶ್ನೆಯೇ ಇಲ್ಲ; ಎಂಟಿಬಿ ನಾಗರಾಜ್​

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕು ಎಂಬುದು ಯಡಿಯೂರಪ್ಪನವರಿಗೆ ಚೆನ್ನಾಗಿ ತಿಳಿದಿದೆ. ಯಡಿಯೂರಪ್ಪನವರು ನಮ್ಮ ನಾಯಕರು.  ಅವರನ್ನು ನಂಬಿ ನಾವು ರಾಜೀನಾಮೆ ನೀಡಿ ಬಂದಿದ್ದೇವೆ. ಅವರು ಏನು ಮಾಡುತ್ತಾರೋ ಮಾಡಲಿ. ನಾವು ಅದನ್ನು ಕಾದು ನೋಡುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್​​​

ಎಂಟಿಬಿ ನಾಗರಾಜ್​​​

  • Share this:
ಹೊಸಕೋಟೆ(ಜ.31): ಸಿಎಂ ಬಿಎಸ್​​ವೈ ಸಚಿವ ಸಂಪುಟದಲ್ಲಿ ಸೋತವರಿಗೆ ಮಂತ್ರಿಸ್ಥಾನ ಸಿಗುವುದಿಲ್ಲ ಎಂದು ಹೇಳಿದವರ ವಿರುದ್ಧ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​ ಕಿಡಿಕಾರಿದ್ದಾರೆ. " 17 ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜೀನಾಮೆಗೂ ಮೊದಲು ಸಿಎಂ ಬಿಎಸ್​ ಯಡಿಯೂರಪ್ಪ ಜೊತೆ ಹಲವು ಬಾರಿ ಚರ್ಚೆ ನಡೆದಿದೆ. ಅಲ್ಲಿ ನಡೆದಿರುವ ಚರ್ಚೆ ಮಾತುಕತೆ ಎಲ್ಲರಿಗೂ ತಿಳಿದಿದೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಬರುವುದಿಲ್ಲ," ಎಂದು ತಿರುಗೇಟು ನೀಡಿದ್ದಾರೆ.

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," 17 ಶಾಸಕರಿಂದ ಬಿಜೆಪಿ ಸರ್ಕಾರ ಸ್ಥಾಪನೆಯಾಗಿದೆ. 17 ಮಂದಿಗೂ ಪ್ರಾಮುಖ್ಯತೆ ಕೊಡಬೇಕು. 17 ಮಂದಿಯೂ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರು. ಅದು ಅವರ(ಯಡಿಯೂರಪ್ಪ) ಮನಸ್ಸಿನಲ್ಲಿ ಇದೆ. ಆದರೆ ಇತ್ತೀಚೆಗೆ ಕೆಲವೊಂದು ಗೊಂದಲ ಸೃಷ್ಟಿಯಾಗಿದೆ.  ಶೀಘ್ರದಲ್ಲಿಯೇ ಗೊಂದಲ ನಿವಾರಣೆಯಾಗುತ್ತದೆ," ಎಂದು ಹೇಳಿದರು.

ದೇಶದ ಯಾವ ಭಾಗವನ್ನೂ ಕಡೆಗಣಿಸಬಾರದು, ಗಾಂಧಿ-ನೆಹರು ಕನಸು ನನಸಾಗಲಿ; ರಾಮನಾಥ್ ಕೋವಿಂದ್

ಈಗಾಗಲೇ 11 ಮಂದಿ ಶಾಸಕರನ್ನು ಮಂತ್ರಿ ಮಾಡಲು ಸಿಎಂ ಬಿಎಸ್​ವೈ ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಇವತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ ಎಂದು ಎಂಟಿಬಿ ಭರವಸೆ ವ್ಯಕ್ತಪಡಿಸಿದರು.

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕು ಎಂಬುದು ಯಡಿಯೂರಪ್ಪನವರಿಗೆ ಚೆನ್ನಾಗಿ ತಿಳಿದಿದೆ. ಯಡಿಯೂರಪ್ಪನವರು ನಮ್ಮ ನಾಯಕರು.  ಅವರನ್ನು ನಂಬಿ ನಾವು ರಾಜೀನಾಮೆ ನೀಡಿ ಬಂದಿದ್ದೇವೆ. ಅವರು ಏನು ಮಾಡುತ್ತಾರೋ ಮಾಡಲಿ. ನಾವು ಅದನ್ನು ಕಾದು ನೋಡುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ನಮ್ಮನ್ನು ಸಚಿವರನ್ನಾಗಿ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕೊಟ್ಟ ಮಾತು ತಪ್ಪಿಲ್ಲ. ಕೊಟ್ಟ ಮಾತು ತಪ್ಪುವುದಿಲ್ಲ. ಅಂತಹ ವ್ಯಕ್ತಿತ್ವ ಅವರಲ್ಲಿದೆ. ಇಲ್ಲಿಯವರೆಗೆ ಕೊಟ್ಟ ಮಾತಿನಂತೆ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳು, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಸ್ಪಂದಿಸಿದ್ದಾರೆ. ನಾವು ಹೇಳಿದ ಕೆಲಸಗಳನ್ನೆಲ್ಲಾ ಮಾಡಿದ್ದಾರೆ. ಹಾಗಾಗಿ ಕೊಟ್ಟ ಮಾತಿನಂತೆ ಮಂತ್ರಿಗಿರಿ ನೀಡುವ ವಿಶ್ವಾಸವಿದೆ. ಮುಂದೆ ಏನೇನು ಆಗುತ್ತೆ ಕಾದು ನೋಡೋಣ. ಸಚಿವ ಸಂಪುಟ ವಿಸ್ತರಣೆ ಬಳಿಕ ನನ್ನ ಅಭಿಪ್ರಾಯ ತಿಳಿಸುತ್ತೇನೆ.  ಅಲ್ಲಿಯವರೆಗೆ ಕಾದು ನೋಡೋಣ ಎಂದರು.

Budget 2020: ಬಜೆಟ್ ಮುನ್ನಾ ದಿನ ಷೇರುಪೇಟೆ ಮಿಂಚು; ಸೆನ್ಸೆಕ್ಸ್ 200 ಅಂಕ ಹೆಚ್ಚಳ

 
First published: