ಬಚ್ಚೇಗೌಡರಿಂದ ಹೊಸಕೋಟೆ ಕೈತಪ್ಪುವ ಸಾಧ್ಯತೆ ಇದೆ; ನನಗೂ ಸಚಿವ ಸ್ಥಾನ ಕೊಡಿ; ಸಿಎಂಗೆ ಎಂಟಿಬಿ ಮನವಿ

ಬಿ.ಎನ್​.ಬಚ್ಚೇಗೌಡ ಸಂಸದರಾಗಿ ಆರು ತಿಂಗಳಾಗಿದೆ. ಆದರೆ ಕ್ಷೇತ್ರಕ್ಕೆ ಇದುವರೆಗೂ ಒಂದು ರೂಪಾಯಿ ತಂದಿಲ್ಲ. ಅವರ ಪುತ್ರ ನಾನು ತಂದ ಹಣದಲ್ಲಿ ಗುದ್ದಲಿ ಪೂಜೆ ಮಾಡ್ತಿದ್ದಾರೆ. ಇದು ಯಾವ ನ್ಯಾಯ, ಅಪ್ಪ ಮಗನ ಆಟ ತಡೆಯಲು ಆಗಲ್ವಾ? ಎಂದು ಸಿಎಂ ಮುಂದೆ ನೇರವಾಗಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಎಂಟಿಬಿ ನಾಗರಾಜ್​​

ಎಂಟಿಬಿ ನಾಗರಾಜ್​​

  • Share this:
ಬೆಂಗಳೂರು(ಡಿ.26): ಹೊಸಕೋಟೆಯ ಪಕ್ಷೇತರ ಶಾಸಕ ಶರತ್​ ಬಚ್ಚೇಗೌಡ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​​ ಸಿಎಂ ಬಿ.ಎಸ್​. ಯಡಿಯೂರಪ್ಪನವರಿಗೆ ದೂರು ನೀಡಿದ್ದಾರೆ. 

ಇಂದು ಸಿಎಂ ಬಿಎಸ್​ವೈಗೆ ಮನೆಗೆ ಆಗಮಿಸಿದ ಎಂಟಿಬಿ, ಕ್ಷೇತ್ರಕ್ಕೆ ನಾನು ತಂದ ಅನುದಾನದಲ್ಲಿ ಶರತ್​ ಬಚ್ಚೇಗೌಡ ಗುದ್ದಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಆರೋಪ ಮಾಡಿದರು. ಈ ಹಿಂದೆ ನಾನು ಶಾಸಕನಾಗಿದ್ದಾಗ ಹೊಸಕೋಟೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದೆ. ಈಗ ಆ ಹಣದಲ್ಲಿ ಶರತ್​ ಬಚ್ಚೇಗೌಡ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶರತ್ ಬಚ್ಚೇಗೌಡ ಗೆದ್ದು ಇನ್ನೂ ಹದಿನೈದು ದಿನಗಳಾಗಿಲ್ಲ. ಆಗಲೇ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಳಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಇದು ಯಾವ ನ್ಯಾಯ? ಎಂದು ಸಿಎಂ ಮುಂದೆ ಎಂಟಿಬಿ ನಾಗರಾಜ್​​ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ನಾಯಕರು ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಾರೆ; ಯು.ಟಿ. ಖಾದರ್ ಆರೋಪ

ಬಚ್ಚೇಗೌಡರಿಂದ ಹೊಸಕೋಟೆ ಕ್ಷೇತ್ರದಲ್ಲಿ ನನ್ನ ಹಿಡಿತ ಕೈ ತಪ್ಪುತ್ತಿದೆ. ಅದಕ್ಕೆ ಏನಾದರೂ ಮಾಡಿ. ಶೀಘ್ರದಲ್ಲೇ ಸಂಪುಟದಲ್ಲಿ ಸ್ಥಾನ ಕೊಡಿ. ಸಚಿವ ಸ್ಥಾನ ಸಿಕ್ಕಿದರೆ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಬಹುದು. ಹೀಗಾಗಿ ಶೀಘ್ರದಲ್ಲೇ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಸಿಎಂ ಬಿಎಸ್​ವೈಗೆ ಎಂಟಿಬಿ ಮನವಿ ಮಾಡಿದ್ದಾರೆ.

ಸಂಸದ ಬಚ್ಚೇಗೌಡ ವಿರುದ್ಧವೂ ಎಂಟಿಬಿ ನಾಗರಾಜ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿ.ಎನ್​.ಬಚ್ಚೇಗೌಡ ಸಂಸದರಾಗಿ ಆರು ತಿಂಗಳಾಗಿದೆ. ಆದರೆ ಕ್ಷೇತ್ರಕ್ಕೆ ಇದುವರೆಗೂ ಒಂದು ರೂಪಾಯಿ ತಂದಿಲ್ಲ. ಅವರ ಪುತ್ರ ನಾನು ತಂದ ಹಣದಲ್ಲಿ ಗುದ್ದಲಿ ಪೂಜೆ ಮಾಡ್ತಿದ್ದಾರೆ. ಇದು ಯಾವ ನ್ಯಾಯ, ಅಪ್ಪ ಮಗನ ಆಟ ತಡೆಯಲು ಆಗಲ್ವಾ? ಎಂದು ಸಿಎಂ ಮುಂದೆ ನೇರವಾಗಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಸಂಸದ ಬಿ.ಎನ್​.ಬಚ್ಚೇಗೌಡರ ವಿರುದ್ದ ಕ್ರಮ ಕೈಗೊಳ್ಳದ ಸಿಎಂ ಯಡಿಯೂರಪ್ಪ ಬಗ್ಗೆಯೂ ಎಂಟಿಬಿ ನಾಗರಾಜ್​ ಪರೋಕ್ಷವಾಗಿ ಅಸಮಾಧಾನ ಹೊರಹಾಕಿ, ತೆರಳಿದರು ಎನ್ನಲಾಗಿದೆ.

ಬಿಜೆಪಿ ನಾಯಕರು ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಾರೆ; ಯು.ಟಿ. ಖಾದರ್ ಆರೋಪ

 

 
Published by:Latha CG
First published: