ಸಿದ್ದರಾಮಯ್ಯ ಏಕಾಂಗಿ, ದಿನೇಶ್ ಗುಂಡೂರಾವ್​​ ಒಬ್ಬ ಬಫೂನ್​​; ಎಂ.ಪಿ.ರೇಣುಕಾಚಾರ್ಯ ಲೇವಡಿ

ಮಾಜಿ ಸಿಎಂ ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ಧಾರೆ. ಅಭಿಮನ್ಯುವಿನ ಥರ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಯಾರೂ ಹೆಗಲು ಕೊಡುತ್ತಿಲ್ಲ.

Latha CG | news18-kannada
Updated:November 22, 2019, 3:27 PM IST
ಸಿದ್ದರಾಮಯ್ಯ ಏಕಾಂಗಿ, ದಿನೇಶ್ ಗುಂಡೂರಾವ್​​ ಒಬ್ಬ ಬಫೂನ್​​; ಎಂ.ಪಿ.ರೇಣುಕಾಚಾರ್ಯ ಲೇವಡಿ
ಸಿದ್ದರಾಮಯ್ಯ-ದಿನೇಶ್​ ಗುಂಡೂರಾವ್​-ಎಂ.ಪಿರೇಣುಕಾಚಾರ್ಯ
  • Share this:
ಹಾವೇರಿ(ನ.22): ಸಿಎಂ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ರಾಣೆಬೆನ್ನೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿ ಅರುಣ್​​ಕುಮಾರ್​ ಪರ ಮತಯಾಚನೆ ಮಾಡುತ್ತಿದ್ಧಾರೆ. ಪ್ರಚಾರ ಭಾಷಣದ ವೇಳೆ ರೇಣುಕಾಚಾರ್ಯ ಕಾಂಗ್ರೆಸ್​​ ನಾಯಕರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. 

"ದಿನೇಶ್​ ಗುಂಡೂರಾವ್​ ಒಬ್ಬ ಬಫೂನ್​. ವೇಣುಗೋಪಾಲ್ ಬಫೂನ್ ಅಂತಾ ಅವರ ಪಕ್ಷದವರೇ ಹೇಳಿದ್ದು," ಎಂದು ಸಿಎಂ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ ಮಾಡಿದ್ಧಾರೆ. ಮುಂದುವರೆದ ಅವರು, "ಕಾಂಗ್ರೆಸ್​ ಒಡೆದ ಮನೆಯಾಗಿದೆ. ಮೂಲ ಹಾಗೂ ವಲಸಿಗರ ಮಧ್ಯೆ ಜಂಗೀ ಕುಸ್ತಿ ನಡೆಯುತ್ತಿದೆ. ಕಾಂಗ್ರೆಸ್​​ಗೆ ಅಸ್ತಿತ್ವವೇ ಇಲ್ಲ," ಎಂದು ಟೀಕಿಸಿದರು.

ಯುವತಿ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಕ್ರೂರಿ; ಪಕ್ಕದ ಮನೆಯವನಿಂದಲೇ ದುಷ್ಕೃತ್ಯ

"ಕಾಂಗ್ರೆಸ್​​ನವರಿಗೆ ಚುನಾವಣೆ ಬಂದಾಗ ಎಚ್ಚರ ಆಗುತ್ತೆ. ಮಾಜಿ ಸಿಎಂ ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ಧಾರೆ. ಅಭಿಮನ್ಯುವಿನ ಥರ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಯಾರೂ ಹೆಗಲು ಕೊಡುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಗೆದ್ದಿದ್ದಾರೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದಾರೆ. ಸೋತವರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ," ಎಂದು ಲೇವಡಿ ಮಾಡಿದರು.

"ಅನರ್ಹ ಶಾಸಕರ ವಿಚಾರವಾಗಿ. ಅನರ್ಹರನ್ನಾಗಿ ಮಾಡಿಸಿದ್ದು ಯಾರು? ಕ್ರಿಮಿನಲ್ ರಮೇಶ್​​​ ಕುಮಾರ್ ಅವರಿಗೆ ಹೇಳಿ ಅನರ್ಹ ಮಾಡಿಸಿದ್ದು ಯಾರು? ಸಿದ್ದರಾಮಯ್ಯನವರ  ನಡವಳಿಕೆಗೆ ನೊಂದು ಅನರ್ಹರು ರಾಜೀನಾಮೆ ಕೊಟ್ಟಿದ್ದಾರೆ," ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಏಕಾಂಗಿಯಲ್ಲ, ಆರೋಪ ಮಾಡೋದು ಬಿಟ್ಟು ಬಿಜೆಪಿಗೆ ಬೇರೆ ಕೆಲಸವಿಲ್ಲ; ದಿನೇಶ್ ಗುಂಡೂರಾವ್ ತಿರುಗೇಟು

ಇದೇ ವೇಳೆ, "ಬಿಜೆಪಿ ಸರ್ಕಾರ ಮುಂದುವರೆಯುತ್ತದೆ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ