HOME » NEWS » State » BJP LEADER MP RENUKACHARYA LASHES OUT ON MINISTER CP YOGEESHWAR BLACKMAIL POLITICS CM BS YEDIYURAPPA SCT

MP Renukacharya: ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ!; ಎಂ.ಪಿ ರೇಣುಕಾಚಾರ್ಯ ಆಕ್ರೋಶ

MP Renukacharya: ಯಾರೆಲ್ಲ ನಾಯಕತ್ವ ಬದಲಾವಣೆ ಮಾಡಬೇಕೆಂದು ಹೇಳಿದ್ದರೋ ಅವರು ಸಚಿವರಾಗಿರುವುದು ವಿಪರ್ಯಾಸ. ಶಾಸನಸಭೆಯಲ್ಲಿ ಶಾಸಕರಿಗೆಲ್ಲ ಹುಳಿ ಹಿಂಡಿ, ವಿಷಬೀಜ ಬಿತ್ತುವ ಕೆಲಸ ಮಾಡಿದ್ದವರು ಸಚಿವ ಸ್ಥಾನ ಪಡೆದಿರುವುದು ನನಗೆ ನೋವಾಗಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Sushma Chakre | news18-kannada
Updated:January 14, 2021, 12:07 PM IST
MP Renukacharya: ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ!; ಎಂ.ಪಿ ರೇಣುಕಾಚಾರ್ಯ ಆಕ್ರೋಶ
ಎಂಪಿ ರೇಣುಕಾಚಾರ್ಯ
  • Share this:
ಬೆಂಗಳೂರು (ಜ. 14): ಸಂಪುಟ ವಿಸ್ತರಣೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೆಚ್. ವಿಶ್ವನಾಥ್, ಮುನಿರತ್ನ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ರಾಮದಾಸ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟ್ವೀಟ್​ ಮೂಲಕ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಮಾಧ್ಯಮಗಳ ಎದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಐವರು ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಕಿಡಿ ಕಾರಿದ್ದಾರೆ. ಹಾಗೇ, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ. 

ಯಾರೆಲ್ಲ ನಾಯಕತ್ವ ಬದಲಾವಣೆ ಮಾಡಬೇಕೆಂದು ಹೇಳಿದ್ದರೋ ಅವರು ಸಚಿವರಾಗಿರುವುದು ವಿಪರ್ಯಾಸ. ಶಾಸನಸಭೆಯಲ್ಲಿ ಶಾಸಕರಿಗೆಲ್ಲ ಹುಳಿ ಹಿಂಡಿ, ವಿಷಬೀಜ ಬಿತ್ತುವ ಕೆಲಸ ಮಾಡಿದ್ದವರು ಬ್ಲಾಕ್​ಮೇಲ್ ಮೂಲಕ ಸಚಿವ ಸ್ಥಾನ ಪಡೆದಿದ್ದಾರೆ. ಇದು ಯಾವ ನ್ಯಾಯ? ಇದರಿಂದ ನನಗೆ ನೋವಾಗಿದೆ. ನಾನು ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಒಂದು ಮಾತು ಕೂಡ ಹೇಳುವುದಿಲ್ಲ. ಅವರು ನಮ್ಮ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಯಾರ ವಿರುದ್ಧವೂ ಸಾಕ್ಷಿ ನೀಡುವಷ್ಟು ನಾನು ದೊಡ್ಡವನಲ್ಲ ಎಂದು ಎಂಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಆಪರೇಷನ್ ಕಮಲ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಮುಖ ನೋಡಿ ಯಾರೂ ಬಿಜೆಪಿಗೆ ಬರಲಿಲ್ಲ. ಯಡಿಯೂರಪ್ಪ ಉತ್ತಮವಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ, ಪ್ರಧಾನಿ ಮೋದಿ ಒಳ್ಳೆಯ ನಾಯಕತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ 17 ಶಾಸಕರು ಬಿಜೆಪಿಗೆ ಬಂದರು. ನಿನ್ನೆ ಅಧಿಕಾರ ಸ್ವೀಕರಿಸಿರುವ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕೊಡುಗೆ ನೀಡಿದ್ದಾರೆ. ಆದರೆ, ಸಿ.ಪಿ. ಯೋಗೇಶ್ವರ್ ಯಾವ ಕೊಡುಗೆ ನೀಡಿದ್ದಾರೆಂಬ ಕಾರಣಕ್ಕೆ ಸಚಿವ ಸ್ಥಾನ ಗಿಟ್ಟಿಸಿಕೊಂಡರು? ಎಂದು ಎಂ.ಪಿ. ರೇಣುಕಾಚಾರ್ಯ ಬೆಂಗಳೂರು ಏರ್​ಪೋರ್ಟ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಬಿಜೆಪಿಯ ಅಸಮಾಧಾನಿತರು ಬಹಿರಂಗವಾಗಿ ಮಾತಾಡದೆ ಹೈಕಮಾಂಡ್​ಗೆ ದೂರು ನೀಡಿ; ಸಿಎಂ ಯಡಿಯೂರಪ್ಪ

ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಆಘಾತವಾಗಿರುವುದು ನಿಜ. ಬಿಜೆಪಿಯ ನಾಯಕತ್ವದ ವಿರುದ್ಧ ನನಗೆ ಅಸಮಾಧಾನವಿಲ್ಲ. ಈಗಿನ ಸರ್ಕಾರದಲ್ಲಾಗಿರುವ ತಪ್ಪು ವ್ಯವಸ್ಥೆ ವಿರುದ್ಧ ನನ್ನ ಹೋರಾಟವಿದೆ. ನನಗೆ ಜಾತಿ ರಾಜಕಾರಣ ಮಾಡಿ ಅಭ್ಯಾಸವಿಲ್ಲ. ಆದರೆ, ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಿ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಎಲ್ಲ ಜನಾಂಗದ ಮತದಾರರಿಗೆ ಅನ್ಯಾಯ ಮಾಡಲಾಗಿದೆ. ಕರ್ನಾಟಕ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಬಾರದು. ಸೋತವರಿಗೆ, ಬ್ಲಾಕ್​ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವ ಗ್ಗೆ ಬಿಜೆಪಿ ನಾಯಕರ ಜೊತೆಗೆ ಚರ್ಚಿಸುತ್ತೇನೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.


ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ನನಗೆ ಯಾವ ಅಸಮಾಧಾನವೂ ಇಲ್ಲ. ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆ, ಆ ಕೃತಜ್ಞತೆ ನನಗಿದೆ. ಆದರೆ, ವಿಧಾನ ಪರಿಷತ್​ನ ಇತಿಹಾಸದಲ್ಲಿ ಐವರು ಸದಸ್ಯರಿಗೆ ಸಚಿವ ಸ್ಥಾನ ನೀಡಿದ್ದ ಉದಾಹರಣೆಯೇ ಇಲ್ಲ. ಈ ಸರ್ಕಾರ ಅಧಿಕಾರಕ್ಕೆ ಬರಲು ನನ್ನ ಕೊಡುಗೆಯಿದೆ ಎಂದು ಕೆಲವರು ಹೇಳುತ್ತಾರೆ. ಈ ವೇಳೆ ಯೋಗೇಶ್ವರ್ ಅವರ ಹೆಸರು ಹೇಳೋಕೆ ನಾನು ಬಯಸೋದಿಲ್ಲ. ಆದರೆ, ಅವರ ಕೊಡುಗೆ ಏನೂ ಇಲ್ಲ. ಆತನ ಮುಖ ನೋಡಿ ಯಾರೂ ಬಿಜೆಪಿಗೆ ಬಂದಿಲ್ಲ ಎಂದಿದ್ದಾರೆ.ಆತ ತನ್ನ ಕ್ಷೇತ್ರದಲ್ಲೂ ಚುನಾವಣೆಯಲ್ಲಿ ಸೋತ, ಲೋಕಸಭೆಯಲ್ಲೂ ಸ್ಪರ್ಧೆ ಮಾಡಲಿಲ್ಲ, ರಾಮನಗರ ಉಪಚುನಾವಣೆಯಲ್ಲೂ ಯಾರನ್ನೋ ನಿಲ್ಲಿಸಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ವೈಯಕ್ತಿಕ ವರ್ಚಸ್ಸು ಇದ್ದಿದ್ದರೆ ಚುನಾವಣೆಯಲ್ಲಿ ಗೆದ್ದು ಸಚಿವರಾಗಬೇಕಾಗಿತ್ತು. ಅಲ್ಲದೆ, ಬಹಳ ದೊಡ್ಡ ಹಗರಣ ಮಾಡಿದ್ದಾರೆ. ಆದರೂ ಅಂಥವರಿಗೆ ಸಚಿವ ಸ್ಥಾನ ನೀಡಲಾಗಿದೆ. ಮೋಸ, ಅನ್ಯಾಯ ಮಾಡಿದವರಿಗೆ ಸಚಿವ ಸ್ಥಾನ ನೀಡಿದ ಬಗ್ಗೆ ನಾಯಕರ ಜೊತೆ ನಾನು ಮಾತನಾಡುತ್ತೇನೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
Published by: Sushma Chakre
First published: January 14, 2021, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories