ಮೋದಿ- ಅಮಿತ್ ಶಾಗೆ ಬಳೆ ತೊಡಿಸುವ ವಿಚಾರ; ಯಾರು ಯಾರಿಗೆ ಬಳೆ ತೊಡಿಸುತ್ತಾರೆ ನೋಡಿ ಎಂದ ಮಾಲೀಕಯ್ಯ

news18-kannada
Updated:January 23, 2020, 7:05 PM IST
ಮೋದಿ- ಅಮಿತ್ ಶಾಗೆ ಬಳೆ ತೊಡಿಸುವ ವಿಚಾರ; ಯಾರು ಯಾರಿಗೆ ಬಳೆ ತೊಡಿಸುತ್ತಾರೆ ನೋಡಿ ಎಂದ ಮಾಲೀಕಯ್ಯ
ಪೌರತ್ವ ಮಸೂದೆ ವಿರೋಧಿ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಬಳೆ ತೊಡಿಸೋದಾಗಿ ಹೇಳಿದ ಜೆಡಿಎಸ್ ಮುಖಂಡ ನಾಸೀರ್ ಹುಸೇನ್.
  • Share this:
ಕಲಬುರ್ಗಿ: ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಬಳೆ ತೊಡಿಸೋದಾಗಿ ಹೇಳಿ, ಬಳೆ ಪ್ರದರ್ಶನ ಮಾಡಿದ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ವರ್ತನೆಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಕಿಡಿಕಾರಿದ್ದಾರೆ. ಕಲುಬರ್ಗಿಯಲ್ಲಿ ಮಾತನಾಡಿದ ಅವರು, ಮಂಗಳವಾರ ನಡೆದ ಪೌರತ್ವ ವಿರೋಧಿ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಮೋದಿ ಮತ್ತು ಶಾ ಗೆ ಬಳೆ ಕಳುಹಿಸಿಕೊಡುವುದಾಗಿ ನಾಸೀರ್ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಸೀರ್ ಹುಸೇನ್ ಸಂಸ್ಕೃತಿ ಇರದ ವ್ಯಕ್ತಿ. ವಿಧಾನಸಭೆ ಚುನಾವಣೆಗೆ ಹಲವು ಬಾರಿ ನಿಂತಿದ್ದ ನಾಸೀರ್ ಹುಸೇನ್ ಉಸ್ದಾದ್, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ. ಅದಕ್ಕಾಗಿಯೇ ರಾಷ್ಟ್ರ ನಾಯಕರ ಬಗ್ಗೆ ಅಗೌರವದಿಂದ ಮಾತನಾಡಿದ್ದಾನೆ. ಯಾರು ಯಾರಿಗೆ ಬಳೆ ತೊಡಿಸುತ್ತಾರೋ ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆತನ ಬಗ್ಗೆ ಮಾತನಾಡಿ ದೊಡ್ಡ ಲೀಡರ್ ಮಾಡಲು ಹೋಗೋದಿಲ್ಲ ಎಂದರು.

ಕಲಬುರ್ಗಿಯ ಪೀರ್ ಬಂಗಾಲ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ ಮಾಡಿದ್ದ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ನಾಸೀರ್ ಹುಸೇನ್, ಮೋದಿ ಮತ್ತು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹುಬ್ಬಳ್ಳಿ ಸಮಾವೇಶದಲ್ಲಿ ಪೌರತ್ವ ಮಸೂದೆ ಬಗ್ಗೆ ಮುಸ್ಲಿಮರು ಹೆದರಬೇಕಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಅಮಿತ್ ಶಾ ಅವರೇ ನಾವು ಮಸೂದೆಗೆ ಹೆದರಲ್ಲ, ನಿಮಗೂ ಹೆದರಲ್ಲ ಎಂದು ಕಿಡಿಕಾರಿದರು. ನಾವು ಈ ದೇಶದ ನಿವಾಸಿಗಳಿದ್ದೇವೆ. ನಾವು ಯಾರು ಯಾವುದಕ್ಕೂ ಅಂಜೋದಿಲ್ಲ. ಆದರೆ ನೀನೊಬ್ಬ ದೊಡ್ಡ ಅಂಜುಬುರಕ ಇದ್ದೀ. ಅದಕ್ಕಾಗಿ ನಿನಗಾಗಿ ಬಳೆ ಕಳುಹಿಸಿಕೊಡುತ್ತೇವೆ. ಮೋದಿ ಮತ್ತು ಅಮಿತ್ ಶಾಗೆ ಬಳೆ ಕಳುಹಿಸಿಕೊಡ್ತೇವೆ. ಇಬ್ಬರೂ ತೊಟ್ಟುಕೊಂಡು ಆಡಳಿತ ಮಾಡಲಿ ಎಂದು ಬಹಿರಂಗ ಸಮಾವೇಶದಲ್ಲಿ ನಾಸೀರ್ ಹುಸೇನ್ ಬಳೆಗಳನ್ನು ಪ್ರದರ್ಶಿಸಿದ್ದರು. ಪೌರತ್ವ ಮಸೂದೆ ವಿರುದ್ಧ ಅಸಹಕಾರ ಚಳವಳಿ ನಡೆಸೋದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ