ಮರಾಠ, ವೀರಶೈವ-ಲಿಂಗಾಯತ ನಿಗಮದ ಕಿಚ್ಚು; ಈಡಿಗ ನಿಗಮ ಸ್ಥಾಪನೆಗೆ ಮಾಲೀಕಯ್ಯ ಗುತ್ತೇದಾರ ಒತ್ತಾಯ

ಮರಾಠ, ವೀರಶೈವ-ಲಿಂಗಾಯತ ನಿಗಮ ರಚನೆ ಬೆನ್ನ ಹಿಂದೆಯೇ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಕೇಳಿ ಬಂದಿದೆ. ಇದೀಗ ಆರ್ಯ – ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಒತ್ತಾಯಿಸಲಾಗಿದೆ.

ಮಾಲಿಕಯ್ಯ ಗುತ್ತೇದಾರ್.

ಮಾಲಿಕಯ್ಯ ಗುತ್ತೇದಾರ್.

  • Share this:
ಕಲಬುರ್ಗಿ (ನ. 25): ಮರಾಠ ಅಭಿವೃದ್ಧಿ ನಿಗಮದ ಕಿಚ್ಚು ರಾಜ್ಯದಲ್ಲಿ ಆರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದು ಕಡೆ ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಮತ್ತೊಂದು ಕಡೆ ವೀರಶೈವ- ಲಿಂಗಾಯತರ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಅವರು ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶಿಸಿದ್ದಾರೆ. ಇದರ ಬೆನ್ನ ಹಿಂದೆಯೇ ಒಕ್ಕಲಿಗರ ಅಭಿವೃದ್ಧಿ ನಿಗಮದ ಕೂಗೆದ್ದಿದೆ. ಒಕ್ಕಲಿಗರ ಕೂಗು ಜೋರಾಗಿರುವ ವೇಳೆಯಲ್ಲಿಯೇ ಈಡಿಗರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಎಂದು ಮತ್ತೊಂದು ಕೂಗೆದ್ದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿವೆ.

ಮರಾಠ, ವೀರಶೈವ-ಲಿಂಗಾಯತ ನಿಗಮ ರಚನೆ ಬೆನ್ನ ಹಿಂದೆಯೇ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಕೇಳಿ ಬಂದಿದೆ. ಇದೀಗ ಆರ್ಯ – ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಒತ್ತಾಯಿಸಲಾಗಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Weather: ನಿವಾರ್ ಚಂಡಮಾರುತದ ಎಫೆಕ್ಟ್​; ಇನ್ನೆರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆ

ಮರಾಠ ಮತ್ತು ವೀರಶೈವ ಲಿಂಗಾಯತ ಪ್ರಾಧಿಕಾರ ರಚಿಸಿರೋದಕ್ಕೆ ಸ್ವಾಗತ. ಲಿಂಗಾಯತ ಹಾಗೂ ಮರಾಠ ಸಮುದಾಯಗಳಲ್ಲಿಯೂ ಸಾಕಷ್ಟು ಬಡವರಿದ್ದಾರೆ. ಇದರ ಬೆನ್ನ ಹಿಂದೆಯೇ ಒಕ್ಕಲಿಗ ಸಮುದಾಯವೂ ಅಭಿವೃದ್ದಿ ನಿಗಮ ಕೇಳುತ್ತಿದೆ. ಅದೇ ರೀತಿಯಾಗಿ ಈಡಿಗ ಸಮುದಾಯವೂ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ 80 ಲಕ್ಷದಷ್ಟು ಈಡಿಗ ಜನಸಂಖ್ಯೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈಡಿಗ ಸಮುದಾಯದಲ್ಲಿಯೂ ಬಡವರಿದ್ದಾರೆ. ಈಡಿಗ ಸಮಾಜದ ಅಭಿವೃದ್ಧಿಗೆ ಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿದೆ. ದಯವಿಟ್ಟು ನಮ್ಮ ಸಮಾಜವನ್ನೂ ಪರಿಗಣಿಸಿ. ನಮ್ಮ ಸಮಾಜ ಯಾವತ್ತಿಗೂ ನಿಮ್ಮ ಜೊತೆಗಿದೆ. ಸಾಕಷ್ಟು ಒತ್ತಡ ಬಂದರೂ ನಾವು ನಿಮ್ಮ ನಾಯಕತ್ವಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದೇವೆ ಎಂದಿದ್ದಾರೆ.

ಕೂಡಲೇ ಆರ್ಯ - ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕಾರ್ಯರೂಪಕ್ಕೆ ತನ್ನಿ. ನಿಗಮಕ್ಕೆ 400 ಕೋಟಿ ರೂ.ಗಳಷ್ಟು ಅನುದಾನ ನೀಡಿ, ಆರ್ಥಿಕ ಸಹಾಯ ಮಾಡಬೇಕು. ಈಡಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪಗೆ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ. ಈ ಬೆಳವಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.
Published by:Sushma Chakre
First published: