ಈಶ್ವರಪ್ಪನ ಪಿಎಯಿಂದಲೇ ಯಡಿಯೂರಪ್ಪನ ಡೈರಿ ಪೊಲೀಸರ ಕೈಸೇರಿದೆ, ಆ ಬಗ್ಗೆ ತನಿಖೆಯಾಗಲಿ; ದಿನೇಶ್ ಗುಂಡೂರಾವ್ ಆಗ್ರಹ

ಸೋನಿಯಾ ಗಾಂಧಿ ಅವರ ಸೂಚನೆಯಂತೆ ರಾಜ್ಯದಲ್ಲಿ ಲಿಂಗಾಯತ ಪ್ರಯತ್ಯೇಕ ಧರ್ಮದ ಬೆಂಕಿ ಹಚ್ಚಲಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Sushma Chakre | news18
Updated:April 16, 2019, 3:40 PM IST
ಈಶ್ವರಪ್ಪನ ಪಿಎಯಿಂದಲೇ ಯಡಿಯೂರಪ್ಪನ ಡೈರಿ ಪೊಲೀಸರ ಕೈಸೇರಿದೆ, ಆ ಬಗ್ಗೆ ತನಿಖೆಯಾಗಲಿ; ದಿನೇಶ್ ಗುಂಡೂರಾವ್ ಆಗ್ರಹ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
Sushma Chakre | news18
Updated: April 16, 2019, 3:40 PM IST
ಶ್ರೀನಿವಾಸ್​ ಹಳಕಟ್ಟಿ

ಬೆಂಗಳೂರು (ಏ. 16): ಯಡಿಯೂರಪ್ಪ, ಈಶ್ವರಪ್ಪ ನಡುವಿನ ಜಗಳದಿಂದ ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ಮಾಹಿತಿ ಇರುವ ಡೈರಿ ಹೊರಬಿದ್ದಿದೆ. ಆ ಡೈರಿಯನ್ನು ಈಶ್ವರಪ್ಪನವರ ಪಿಎ ಪೊಲೀಸರಿಗೆ ನೀಡಿದ್ದಾರೆ.  ಆ ಡೈರಿಯಲ್ಲಿರುವ ವಿಷಯಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಆಗ್ರಹಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿರುವ ದಿನೇಶ್​ ಗುಂಡೂರಾವ್, ಈಶ್ವರಪ್ಪ ಮತ್ತು ಯಡಿಯೂರಪ್ಪನವರ ನಡುವಿನ ಜಗಳದಿಂದ ಯಡಿಯೂರಪ್ಪನವರ ಹಗರಣಗಳು ಬಯಲಾಗುವಂತಾಗಿದೆ. ಇದು ಬಹಳ ಗಂಭೀರವಾದ ವಿಚಾರ. ಈ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು. ಪೊಲೀಸರ ವಶದಲ್ಲಿರುವ ಯಡಿಯೂರಪ್ಪನವರ ನಿಜವಾದ ಡೈರಿಯಲ್ಲಿ ಅವರು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಸಂಪೂರ್ಣ ಮಾಹಿತಿಗಳು ಸಿಗುತ್ತವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ನಮಗೂ ಇದೆ ಎಂದು ಹೇಳಿದ್ದಾರೆ.

ಸೋನಿಯಾ ಅಣತಿ ಮೇರೆಗೆ ಪ್ರತ್ಯೇಕ ಲಿಂಗಾಯತ ಕಿಚ್ಚು? ಪತ್ರ ವೈರಲ್; ಎಲ್ಲಾ ಶುದ್ಧ ಸುಳ್ಳು ಎಂದ ಎಂ.ಬಿ. ಪಾಟೀಲ್

ಬಿಜೆಪಿ ವಿರೋಧ ಪಕ್ಷಗಳನ್ನು ತೇಜೋವಧೆ ಮಾಡುತ್ತಿದೆ. ಕೆಲ ಪತ್ರಿಕೆ, ಮಾಧ್ಯಮಗಳನ್ನು ಬಿಜೆಪಿ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಂ.ಬಿ. ಪಾಟೀಲ್ ಅವರ ನಕಲಿ ಪತ್ರವನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಬಿಎಲ್ ಡಿ ಸಂಸ್ಥೆಯ ಲೆಟರ್ ಹೆಡ್ ಅನ್ನು ನಕಲು ಮಾಡಿ ಬಳಸಿಕೊಳ್ಳಲಾಗಿದೆ. ಹೀಗೆ ಬಳಸಿಕೊಂಡು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ತಪ್ಪು ಎಂದು ದಿನೇಶ್​ ಗುಂಡೂರಾವ್ ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಸೂಚನೆಯಂತೆ ರಾಜ್ಯದಲ್ಲಿ ಲಿಂಗಾಯತ ಪ್ರಯತ್ಯೇಕ ಧರ್ಮದ ಬೆಂಕಿ ಹಚ್ಚಲಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪತ್ರವನ್ನು ಕರ್ನಾಟಕ ಬಿಜೆಪಿ ಕೂಡ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿತ್ತು. ಆದರೆ, ಅದು ನಕಲಿ ಲೆಟರ್​ ಹೆಡ್​ ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದರು.
Loading...

ಮಾನ ಮರ್ಯಾದೆ ಇದೆಯಾ? ತಾಕತ್ತಿದ್ದರೆ ರಾಜೀನಾಮೆ ನೀಡಿ ನನ್ನ ಮುಂದೆ ಬನ್ನಿ; ಸ್ಪೀಕರ್ ರಮೇಶ್​ ಕುಮಾರ್​ಗೆ ಮುನಿಯಪ್ಪ ಬಹಿರಂಗ ಸವಾಲು

ಯಡಿಯೂರಪ್ಪನವರಿಗೆ ನೈತಿಕತೆ ಇದ್ದರೆ ವೀರಶೈವ, ಲಿಂಗಾಯತ ಸಮುದಾಯದ ಹಾಗೂ ರಾಜ್ಯದ ಜನತೆಯ ಕ್ಷಮೆ ಕೇಳಲಿ. ಬಿಜೆಪಿ ನಾಯಕರು ನೀಡಿದ ಸುಳ್ಳು ಮಾಹಿತಿಯನ್ನು ಪ್ರಕಟ ಮಾಡಿದ ಪತ್ರಿಕೆ ಕೂಡ ಈ ಬಗ್ಗೆ ಯೋಚನೆ ಮಾಡಬೇಕಿದೆ. ಈ ಕುರಿತು ಕ್ರಿಮಿನಲ್ ಕೇಸ್ ಹಾಗೂ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಎಂ.ಬಿ. ಪಾಟೀಲ ಚಿಂತನೆ ನಡೆಸಿದ್ದಾರೆ. ನಕಲಿ ಕಾರ್ಡ್​ಗಳನ್ನು ರಿಜ್ವಾನ್ ಅರ್ಷದ್ ಸೃಷ್ಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು  ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್​ನಲ್ಲಿ ಬಾಂಬ್​ ಹಾಕೋಕೆ ಮೋದಿ ಹೆಲಿಕ್ಯಾಪ್ಟರ್‌ನಲ್ಲಿ ಹೋಗಿದ್ರಾ?; ಮಾಧ್ಯಮ ಸಂವಾದದಲ್ಲಿ ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ

ಮೋದಿಗೆ ಬೆಂಬಲ ನೀಡಿ ಮತ ಹಾಕದಿದ್ದವರು ತಾಯಿಗಂಡರು ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳುತ್ತಾರೆಂದರೆ ಅವರ ಮನಸ್ಥಿತಿ ಎಷ್ಟು ಹೊಲಸಾಗಿದೆ ಎಂಬುದನ್ನು ಯೋಚಿಸಬೇಕಿದೆ. ಹೊಲಸು ಪದ ಬಳಕೆ ಮಾಡುವುದು ಜನಪ್ರತಿನಿಧಿಯ ಗೌರವಕ್ಕೆ ತಕ್ಕದಾದುದಲ್ಲ. ಸಿ.ಟಿ ರವಿ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕೆಟ್ಟ ಹೇಳಿಕೆ ನೀಡಿರುವ ಸಿ.ಟಿ. ರವಿ ವಿರುದ್ಧವೂ ಮೋದಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ ಎಂದು ದಿನೇಶ್​ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...