ಮುಸ್ಲಿಂ ಮಹಿಳೆಯರು ಮೋದಿ ಭಾಯ್​​ ಎಂದು ವೋಟ್​ ಮಾಡಿದ್ದಾರೆ: ಕೆ.ಎಸ್​​ ಈಶ್ವರಪ್ಪ

ಇನ್ನು ಒಕ್ಕಲಿಗರು ಎಂದು ಸೊಲ್ಲೆತ್ತಬೇಡಿ. ಒಂದು ವೇಳೆ ಅದೇ ಸುದ್ದಿ ಮಾತಾಡಿದ್ರೆ ನಿಖಿಲ್ ಎಲ್ಲಿದಿಯಪ್ಪಾ ಅಷ್ಟೇ ಅಲ್ಲ, ದೇವೇಗೌಡರು ಎಲ್ಲಿದಿರಪ್ಪಾ? ಎನ್ನುವಂತಹ ಪರಿಸ್ಥಿತಿ ಮತ್ತೊಮ್ಮೆ ಬರುತ್ತದೆ- ಕೆ.ಎಸ್​ ಈಶ್ವರಪ್ಪ

Ganesh Nachikethu | news18
Updated:June 8, 2019, 8:29 PM IST
ಮುಸ್ಲಿಂ ಮಹಿಳೆಯರು ಮೋದಿ ಭಾಯ್​​ ಎಂದು ವೋಟ್​ ಮಾಡಿದ್ದಾರೆ: ಕೆ.ಎಸ್​​ ಈಶ್ವರಪ್ಪ
ಕೆ.ಎಸ್​.ಈಶ್ವರಪ್ಪ
  • News18
  • Last Updated: June 8, 2019, 8:29 PM IST
  • Share this:
ಬಾಗಲಕೋಟೆ(ಜೂನ್​​.08): ಬಿಜೆಪಿ ಹಿರಿಯ ಮುಖಂಡ ಕೆ.ಎಸ್​ ಈಶ್ವರಪ್ಪ ಎಂದಿನಂತೆಯೇ ಕಾಂಗ್ರೆಸ್ ಮತ್ತು​ ಜೆಡಿಎಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತಾಡಿದ ಇವರು, ಲೋಕಸಭೆ ಚುನಾವಣೆಯಲ್ಲಿ ದೇವೆಗೌಡರು ಏನಂದ್ರು? ಒಕ್ಕಲಿಗರು ಜೆಡಿಎಸ್​ಗೆ ಮತ ಹಾಕುತ್ತಾರೆ ಎಂದಿದ್ದರು. ಈಗ ನಿಖಿಲ್​​ ಎಲ್ಲಿದ್ದೀಯಪ್ಪಾ ಬದಲಿಗೆ ದೇವೇಗೌಡರೇ ಎಲ್ಲಿದಿರಪ್ಪಾ? ಎನ್ನುವಂತಹ ಪರಿಸ್ಥಿತಿ ಬಂದಿದೆ ಎಂದು ಕುಟುಕಿದ್ದಾರೆ.

ಇನ್ನು ಒಕ್ಕಲಿಗರು ಎಂದು ಸೊಲ್ಲೆತ್ತಬೇಡಿ. ಒಂದು ವೇಳೆ ಅದೇ ಸುದ್ದಿ ಮಾತಾಡಿದ್ರೆ ನಿಖಿಲ್ ಎಲ್ಲಿದಿಯಪ್ಪಾ ಅಷ್ಟೇ ಅಲ್ಲ, ದೇವೇಗೌಡರು ಎಲ್ಲಿದಿರಪ್ಪಾ? ಎನ್ನುವಂತಹ ಪರಿಸ್ಥಿತಿ ಮತ್ತೊಮ್ಮೆ ಬರುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಜಾತಿ ವಿಷಬೀಜ ಬಿತ್ತಿದ್ರು. ರಾಜ್ಯದ ಕುರುಬರೆಲ್ಲ ನಮ್ಮ ಜೊತೆ ಇದ್ದಾರೆ ಅಂದರು.‌ ಇಂತವರಿಗೆ ಮೈಸೂರು, ಚಾಮುಂಡೇಶ್ವರಿ, ಅಷ್ಟೇ ಅಲ್ಲ ಬಾದಾಮಿಯಲ್ಲೂ ಬುದ್ದಿ ಕಲಿಸಿದ್ದಾರೆ ಎಂದು ಕೆ.ಎಸ್​​ ಈಶ್ವರಪ್ಪ ಕಿಡಿಕಾರಿದರು.

ಮೋದಿ ಪ್ರಧಾನಿ ಆದ ಬಳಿಕ ಕಾಂಗ್ರೆಸ್ ಶಾಸಕರಿಗೆ ಈ ರೀತಿ ಅನಿಸ್ತಿದೆ. ಸಿದ್ದರಾಮಯ್ಯ ದುರಹಂಕಾರಿ, ದಿನೇಶ್​​ ಗುಂಡೂರಾವ್ ಅಸಮರ್ಥ ನಾಯಕ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಅಭ್ಯರ್ಥಿ ಕಿತ್ತೂರು ರಾಣಿ ಚೆನ್ನಮ್ಮನ ರಕ್ತ ನಮ್ಮದು ಎಂದು ಪ್ರಚಾರ ಮಾಡಿದ್ರು, ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ನಾವೇ ಅದೇ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನದಿಂದ ದಿಗ್ವಿಜಯ ಸಾಧಿಸಿದೆವು ಎಂದರು.

ಇದನ್ನೂ ಓದಿ: ಕರ್ನಾಟಕ ಸಿಂಗಂ ಹುಟ್ಟುಹಬ್ಬಕ್ಕೆ ರವಿ ಚನ್ನಣ್ಣನವರ್ ಶುಭಾಶಯ ಪತ್ರ: ಅಣ್ಣಾಮಲೈ ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ದಕ್ಷ ಅಧಿಕಾರಿ

ಇನ್ನು ಕಮ್ಯುನಿಸ್ಟ್​, ಕ್ರಿಶ್ಚಿಯನ್ ರಾಷ್ಟ್ರಗಳು ನರೇಂದ್ರ ಮೋದಿಯವರಿಗೆ ಭಾಯ್ ಅನ್ನುತ್ತಾರೆ. ಮುಸ್ಲಿಮರು ಇವತ್ತು ಭಾರತ್ ಮಾತಾಕಿ ಜೈ ಮತ್ತು ವಂದೇ ಮಾತರಂ ಎನ್ನುತ್ತಿದ್ದಾರೆ. ಈ ಮಧ್ಯೆ ಇನ್ನು ಕೆಲವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಅದೇ ವೇಳೆ ಮುಸ್ಲಿಂ ಮಹಿಳೆಯರೇ ನರೇಂದ್ರ ಮೋದಿ ಭಾಯ್ ಎಂದು ವೋಟ್ ಕೊಟ್ಟಿದ್ದಾರೆ ಎಂದು ತಮ್ಮ ಗೆಲುವನ್ನು ಕೊಂಡಾಡಿದರು.
----------
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ