ಸಿಎಂ ಈಗಲೇ ದೀರ್ಘವಾಗಿ ಮಾತನಾಡಲಿ, ಬಳಿಕ 4 ವರ್ಷ 8 ತಿಂಗಳು ಮಾತಾಡೋಕೆ ಆಗಲ್ಲ; ಈಶ್ವರಪ್ಪ ವ್ಯಂಗ್ಯ

ಸಿಎಂ ಇಂದೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರೆ ಒಳಿತು. ಈ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ವಿಧಾಸಭೆ- ಲೋಕಸಭಾ ಚುನಾವಣೆಯಲ್ಲೂ ಇದು ಸಾಬೀತಾಗಿದೆ ಎಂದರು.

Latha CG | news18
Updated:July 18, 2019, 11:15 AM IST
ಸಿಎಂ ಈಗಲೇ ದೀರ್ಘವಾಗಿ ಮಾತನಾಡಲಿ, ಬಳಿಕ 4 ವರ್ಷ 8 ತಿಂಗಳು ಮಾತಾಡೋಕೆ ಆಗಲ್ಲ; ಈಶ್ವರಪ್ಪ ವ್ಯಂಗ್ಯ
ಈಶ್ವರಪ್ಪ- ಕುಮಾರಸ್ವಾಮಿ
  • News18
  • Last Updated: July 18, 2019, 11:15 AM IST
  • Share this:
ಬೆಂಗಳೂರು,(ಜು.18): ವಿಶ್ವಾಸಮತ ಯಾಚನೆ ಚರ್ಚೆಯನ್ನು ಎಷ್ಟೇ ಮುಂದೂಡಿದರೂ ಈ ಸರ್ಕಾರ ಅದರಲ್ಲಿ ಗೆಲುವು ಸಾಧಿಸಲ್ಲ. ನಿಶ್ಚಿತವಾಗಿ ಬಿಜೆಪಿ ಅವಿಶ್ವಾಸಮತದಲ್ಲಿ ಗೆಲುವು ಸಾಧಿಸಲಿದೆ. ಸಿಎಂ ಈಗ ದೀರ್ಘವಾಗಿ ಮಾತನಾಡಲಿ,  ಆದರೆ ಅವರಿನ್ನು 4 ವರ್ಷ 8 ತಿಂಗಳು ಮಾತನಾಡಲಾಗದು ಎಂದು ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

ಸದನಕ್ಕೆ ಹಾಜರಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ನಾಡಿನ ಜನತೆ ನೋಡುತ್ತಿದ್ಧಾರೆ. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಪಕ್ಷಕ್ಕೆ ಬೆಂಬಲ ಇಲ್ಲ. ಮೈತ್ರಿ ಪಕ್ಷ ಬಹುಮತ ಪಡೆಯುವಲ್ಲಿ ವಿಫಲವಾಗಲಿದೆ. ನಾವು ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದೇವೆ  ಎಂದು  ಹೇಳಿದ್ದಾರೆ.

ರಾಜ್ಯದ ಜನ ಮೈತ್ರಿ ಸರ್ಕಾರವನ್ನು ತಿರಸ್ಕಾರ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಒಂದು ಸ್ಥಾನ ಕೊಟ್ಟಿದ್ದಾರೆ. ಹಾಗಾಗಿ ನಮಗೆ ವಿಶ್ವಾಸವಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಾಸ ಮತಕ್ಕಿಂತ ಮೊದಲು ಚರ್ಚೆ ನಡೆಸುವುದರ ಹಿಂದಿದೆ ಮೈತ್ರಿ ಸರ್ಕಾರದ ರಣತಂತ್ರ; ಬಿಜೆಪಿಯ ಜನ್ಮ ಜಾಲಾಡಲು ಸಿಎಂ ಸಂಕಲ್ಪ

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಗೆಲುವು ಸಾಧಿಸಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ವಿಶ್ವಾಸಮತ ಯಾಚನೆ ಚರ್ಚೆ ಆರಂಭಿಸಲಿದ್ದಾರೆ. ಅವರು ಇಂದೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರೆ ಒಳಿತು. ಈ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ವಿಧಾಸಭೆ- ಲೋಕಸಭಾ ಚುನಾವಣೆಯಲ್ಲೂ ಇದು ಸಾಬೀತಾಗಿದೆ ಎಂದರು.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ