ಎಚ್​ಡಿಕೆಗೆ ಸೋತು ಅಭ್ಯಾಸವಿಲ್ಲ, ಅವರಿಗೇನಿದ್ದರೂ ಬೇರೆಯವರೊಂದಿಗೆ ಸೇರಿ ಸರ್ಕಾರ ಮಾಡಿ ಗೊತ್ತಿದೆ- ಕೆಎಸ್​ ಈಶ್ವರಪ್ಪ

 ನಾವು ಬಿಜೆಪಿಯವರು, 104 ಶಾಸಕರುಗಳು ಹುಲಿಮರಿಗಳ ತರ ಇದ್ದೇವೆ. ಒಬ್ಬನನ್ನು ಮುಟ್ಟಲು ಬಂದರೆ ಕಚ್ಚುತ್ತೇವೆ. ಹೀಗಾಗಿ ಆಪರೇಷನ್ ಹಸ್ತದ ಮಾತೇ ಇಲ್ಲ-ಈಶ್ವರಪ್ಪ

Latha CG | news18
Updated:May 20, 2019, 2:10 PM IST
ಎಚ್​ಡಿಕೆಗೆ ಸೋತು ಅಭ್ಯಾಸವಿಲ್ಲ, ಅವರಿಗೇನಿದ್ದರೂ ಬೇರೆಯವರೊಂದಿಗೆ ಸೇರಿ ಸರ್ಕಾರ ಮಾಡಿ ಗೊತ್ತಿದೆ- ಕೆಎಸ್​ ಈಶ್ವರಪ್ಪ
ಕೆಎಸ್ ಈಶ್ವರಪ್ಪ
  • News18
  • Last Updated: May 20, 2019, 2:10 PM IST
  • Share this:
ಶಿವಮೊಗ್ಗ (ಮೇ 20): ಚುನಾವಣೋತ್ತರ ಸಮೀಕ್ಷೆ ಬಗ್ಗೆ ವಿಪಕ್ಷ ನಾಯಕರು ಕಿಡಿಕಾರುತ್ತಿದ್ದರೆ, ಬಿಜೆಪಿ ನಾಯಕರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಬಹುತೇಕ ಎಕ್ಸಿಟ್​ ಪೋಲ್​ಗಳು ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದೆ. ಈ ಬಗ್ಗೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. "ದೇಶ ರಕ್ಷಣೆ ಮಾಡುವಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ಇದೆ. ಇದು ಚುನಾವಣೋತ್ತರ ಸಮೀಕ್ಷೆ ಮೂಲಕ ತಿಳಿದು ಬಂದಿದೆ," ಎಂದಿದ್ದಾರೆ.

ಶಿವಮೊಗ್ಗದಲ್ಲಿ ಚುನಾವಣೋತ್ತರ ಸಮೀಕ್ಷೆ ಕುರಿತಂತೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಈಶ್ವರಪ್ಪ, "ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಇಡೀ ದೇಶ ಒಂದಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬಿಜೆಪಿಯನ್ನು ಬೆಂಬಲಿಸುತ್ತಿದೆ. ನಾವು ಬಿಜೆಪಿಯವರು, 104 ಶಾಸಕರುಗಳು ಹುಲಿಮರಿಗಳ ತರ ಇದ್ದೇವೆ. ಒಬ್ಬನನ್ನು ಮುಟ್ಟಲು ಬಂದರೆ ಕಚ್ಚುತ್ತೇವೆ. ಹೀಗಾಗಿ ಆಪರೇಷನ್ ಹಸ್ತದ ಮಾತೇ ಇಲ್ಲ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. "ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದೆ.  ಜೆಡಿಎಸ್ 8 ಕಡೆ ಸ್ಪರ್ಧೆ ಮಾಡುವ ಬದಲು 7 ಕಡೆ ಸ್ಪರ್ಧೆ ಮಾಡಿದೆ. ಮೈತ್ರಿ ಹೆಸರಿನಲ್ಲಿ ಸೀಟು ಹಂಚಿಕೆ ಮಾಡುವಾಗಲೇ ಕಿತ್ತಾಡಿಕೊಂಡಿದ್ದಾರೆ. ಜೆಡಿಎಸ್​​​ನವರು ಕಾಂಗ್ರೆಸ್​ ಬೆಂಬಲಿಸಿಲ್ಲ, ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಸಾ.ರಾ. ಮಹೇಶ್ ಮತ್ತು ಜಿ.ಟಿ. ದೇವೇಗೌಡ ಸಮನ್ವಯತೆ ಇಲ್ಲ ಎಂದು ತೋರಿಸಿದ್ದಾರೆ. ಇಂತಹ ವ್ಯತಿರಿಕ್ತ ಹೇಳಿಕೆಗಳು ಈಗಲೂ ಮುಂದುವರೆದಿದೆ," ಎಂದು ಟೀಕಿಸಿದರು ಅವರು.

"ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧವೇ ಕಾಂಗ್ರೆಸ್ ತಿರುಗಿಬಿದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಲ್ಲಿಯವರೆಗೆ ಇರುತ್ತದೆ ಎಂದು ಗೊತ್ತಿಲ್ಲ. ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ ಕಾದು ನೋಡಿ. ನಾವು 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಸಮೀಕ್ಷೆಯಲ್ಲಿ ನಿರೀಕ್ಷೆಗೆ ಮೀರಿ ಸ್ಥಾನ ನೀಡಲಾಗಿದೆ," ಎಂದು ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.

ಮಹಾಮೈತ್ರಿ ಯಶಸ್ವಿಯಾಗಿಲ್ಲ ಎನ್ನುವ ಬಗ್ಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೊರಟ್ಟಿ ವಿಧಾನಸಭೆ ವಿಸರ್ಜನೆ ಬಗ್ಗೆ ಮಾತನಾಡುತ್ತಾರೆ. ಮಹಾಮೈತ್ರಿ ದೇಶದಲ್ಲಿ ಛಿದ್ರ ಛಿದ್ರವಾಗಿವೆ. ಫಲಿತಾಂಶದ ನಂತರ ಮತ್ತಷ್ಟು ಛಿದ್ರಗೊಳ್ಳಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೋಲಿನ ಭಯನೋ, ಅಥವಾ ಸರ್ಕಾರ ಬೀಳುವ ಭಯನೋ ಗೊತ್ತಿಲ್ಲ. ಅವರಿಗೆ ಸೋತು ಅಭ್ಯಾಸವಿಲ್ಲ. ಅವರಿಗೆ ಬೇರೆಯವರೊಂದಿಗೆ ಸೇರಿ ಅಧಿಕಾರ ಮಾಡಿ ಗೊತ್ತಿದೆ, " ಎಂದು ವ್ಯಂಗ್ಯವಾಡಿದರು.
First published:May 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading