• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election Results: ಬಹುಮತ ಗಳಿಸಿ ಸರ್ಕಾರ ರಚಿಸೋದು ಪಕ್ಕಾ ಎಂದ ಕರಾವಳಿಯ ಬಿಜೆಪಿ ನಾಯಕ

Karnataka Election Results: ಬಹುಮತ ಗಳಿಸಿ ಸರ್ಕಾರ ರಚಿಸೋದು ಪಕ್ಕಾ ಎಂದ ಕರಾವಳಿಯ ಬಿಜೆಪಿ ನಾಯಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

'ಅತಂತ್ರ ಆದರೆ ಎಂದು ಕೇಳಿ ನಮ್ಮ ದಾರಿ ತಪ್ಪಿಸಬೇಡಿ, ಅತಂತ್ರ ಬಂದರೆ ಏನು ಮಾಡಬೇಕು ಎಂದು ಪಕ್ಷದ ದೊಡ್ಡವರು ಯೋಚನೆ ಮಾಡುತ್ತಾರೆ. ನಳಿನ್ ಕುಮಾರ್, ಬೊಮ್ಮಾಯಿ, ನಡ್ಡಾ, ಅಮಿತ್ ಶಾ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ನಾಳಿನ ಫಲಿತಾಂಶದಲ್ಲಿ ಮಾತ್ರ ಯಾವ ಆಪರೇಷನ್ ಅಗತ್ಯ ಬರಲ್ಲ' ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Udupi, India
 • Share this:

ಉಡುಪಿ: ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರುವ ಮುನ್ನವೇ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪೂಜಾರಿ, ನಾಳೆಯ ಎಣಿಕೆಯಲ್ಲಿ ಬಿಜೆಪಿ 125ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲಿದೆ. ಇದು ನಾವು ನಿಖರವಾಗಿ ನಮ್ಮ ಮಾಹಿತಿ ಆಧಾರದ ಮೇಲೆ ಕಂಡುಕೊಂಡಂತಹ ಫಲಿತಾಂಶ ಎಂದು ಹೇಳಿದರು.


58000 ಬೂತುಗಳು ಹೊಂದಿರುವ ರಾಜ್ಯದಲ್ಲಿ 31 ಸಾವಿರ ಬೂತಗಳಲ್ಲಿ ನಾವು ಹೆಚ್ಚಿನ ಅಂತರದ ಮತಗಳನ್ನು ಪಡೆದಿದ್ದೇವೆ. 2018 ರ ಚುನಾವಣೆಗೆ ಹೋಲಿಸಿದರೆ ನಾವು 24,000 ಅಧಿಕ ಮತಗಟ್ಟೆಗಳಲ್ಲಿ ಹೆಚ್ಚು ಮತ ಪಡೆದಿದ್ದೇವೆ ಎಂದ ಕೋಟ ಶ್ರೀನಿವಾಸ ಪೂಜಾರಿ, 2018 ರಲ್ಲಿ ನಾವು 104 ಸ್ಥಾನಗಳನ್ನು ಪಡೆದಿದ್ದೆವು. ಹೀಗಾಗಿ 34000 ಬೂತ್ ಗಳಲ್ಲಿ ಪಡೆದ ಮತಗಳ ಹಿನ್ನೆಲೆಯಲ್ಲಿ ನಾವು ನಿಶ್ಚಯವಾಗಿ ಬಹುಮತ ಸಾಧಿಸಲಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್‌ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!


ನಿಶ್ಚಯವಾಗಿ ಬಹುಮತ ಸಾಧಿಸಲಿದ್ದೇವೆ


2014ರಲ್ಲಿ 284 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ ಎಂದ ಕೋಟ, 2019ರಲ್ಲಿ 303 ಸ್ಥಾನಗಳನ್ನು ಎಂಪಿ ಚುನಾವಣೆಯಲ್ಲಿ ಗಳಿಸುತ್ತೇವೆಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಬಿಜೆಪಿಗೆ ಸಮೀಕ್ಷೆಗೂ ಮೀರಿ ಮತಗಟ್ಟೆಯ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಮತಗಟ್ಟೆ ಏಜೆಂಟ್ ನೀಡಿರುವ ಮಾಹಿತಿ ಆಧಾರದ ಮೇಲೆ ನಾವು ನಿಶ್ಚಯವಾಗಿ ಗೆಲುವು ಸಾಧಿಸಲಿದ್ದೇವೆ. 125 ಸ್ಥಾನಗಳನ್ನು ಗಳಿಸುವ ಮೂಲಕ ಏಕ ಪಕ್ಷವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.


Kota Shreenivas Poojary Reaction about karnataka Assembly elections results
ಕೋಟ ಶ್ರೀನಿವಾಸ ಪೂಜಾರಿ


ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌!


ಇನ್ನು, ಸಮೀಕ್ಷೆಗಳ ಆಧಾರದಲ್ಲಿ ಜೆಡಿಎಸ್‌ನವರು ತಾವು ಕಿಂಗ್ ಮೇಕರ್ ಆಗಬಹುದು ಎಂದು ಯೋಚಿಸಿರಬಹುದು. ಕಾಂಗ್ರೆಸಿಗರು ತಾವು ಅಧಿಕಾರವನ್ನು ನಡೆಸುತ್ತೇವೆ ಎಂದು ಸಂಭ್ರಮಿಸಿರಬಹುದು ಎಂದ ಕೋಟ, ನಾಳೆ ಎಣಿಕೆಯಲ್ಲಿ ನಾವು ಸ್ಪಷ್ಟ ಬಹುಮತ ಬಂದರೆ ಇವಿಎಂ ಹ್ಯಾಕ್ ಆಗಿದೆ ಎನ್ನಬಹುದು. ಆದರೆ ನಿಶ್ಚಯವಾಗಿ ಗೆಲುವು ನಮ್ಮದೇ ಎಂದು ಹೇಳಿದರು.


'ನಮ್ಮ ದಾರಿ ತಪ್ಪಿಸಬೇಡಿ'


ಬಹುಮತ ಬರದಿದ್ದರೆ ಆಪರೇಷನ್ ಕಮಲ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಆಪರೇಷನ್ ಮಾಡುವ ಪ್ರಶ್ನೆಯೇ ಇಲ್ಲ. ಆಪರೇಷನ್ ಕಮಲದ ಅಗತ್ಯವೂ ಇಲ್ಲ. ಅತಂತ್ರ ಆದರೆ ? ಎಂದು ಕೇಳಿ ನಮ್ಮ ದಾರಿ ತಪ್ಪಿಸಬೇಡಿ, ಅತಂತ್ರ ಬಂದರೆ ಏನು ಮಾಡಬೇಕು ಎಂದು ಪಕ್ಷದ ದೊಡ್ಡವರು ಯೋಚನೆ ಮಾಡುತ್ತಾರೆ. ನಳಿನ್ ಕುಮಾರ್, ಬೊಮ್ಮಾಯಿ, ನಡ್ಡಾ, ಅಮಿತ್ ಶಾ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ನಾಳಿನ ಫಲಿತಾಂಶದಲ್ಲಿ ಮಾತ್ರ ಯಾವ ಆಪರೇಷನ್ ಅಗತ್ಯ ಬರಲ್ಲ. ಆರ್ ಅಶೋಕ್ ಪದೇ ಪದೇ ಪ್ರಶ್ನೆ ಕೇಳಿದ್ದರಿಂದ ಆ ರೀತಿ ಉತ್ತರ ಕೊಟ್ಟಿರಬಹುದು. ಸ್ಪಷ್ಟ ಬಹುಮತ ಬರುತ್ತೆ ಎಂದು ಅಶೋಕ್‌ಗೂ ಗೊತ್ತಿದೆ. ಕೆಲವೊಮ್ಮೆ ಪತ್ರಕರ್ತರು ಕೇಳುವ ಪ್ರಶ್ನೆಯಿಂದ ದಾರಿತಪ್ಪಿ ಮಾತನಾಡಬಹುದು. ಆದರೆ ನಮಗೆ ಬಹುಮತ ಬರುತ್ತೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಎಚ್‌ಡಿಕೆ ಜೊತೆ ಮಾತುಕತೆ!

top videos


  ಇನ್ನು ಸರ್ಕಾರ ರಚನೆ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂಜಾಗುರೂಕತಾ ಕ್ರಮವಾಗಿ ಒಬ್ಬರ ಜೊತೆ ಇನ್ನೊಬ್ಬರು ಮಾತನಾಡಿರಬಹುದು. ನಾಳೆ ಒಮ್ಮೆ ಫಲಿತಾಂಶ ಬಂದ ನಂತರ ಯಾವುದೇ ಆತಂಕ ಇರಲ್ಲ. ನಾಳೆ ಲೆಕ್ಕಾಚಾರ ಮುಗಿದ ನಂತರ ಯಾವುದೇ ಚರ್ಚೆ ಇರೋದಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಅನ್ನೋದನ್ನ ಶಾಸಕಾಂಗ ಸಭೆ ತೀರ್ಮಾನ ಮಾಡುತ್ತದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರ ಗೆಲ್ಲುತ್ತೇವೆ. ಉಡುಪಿ, ಕುಂದಾಪುರದಲ್ಲಿ ಬಹುದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಉಳಿದ ಕ್ಷೇತ್ರಗಳಲ್ಲೂ ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ. ಉತ್ತಮ ಮತದಾನವಾದಾಗ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದೆ. ಕಡಿಮೆ ಮತದಾನವಾದಾಗ ಬಿಜೆಪಿ ಗೆಲುವು ಕಂಡಿದ್ದು ಕಡಿಮೆ. ಈ ಬಾರಿ ಬಹು ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ. ಮತದಾನದ ಸಂಖ್ಯೆ ಹೆಚ್ಚಿರುವುದರಿಂದ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ ಎಂದರು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು