Sumalatha Decision: ಸುಮಲತಾ ಅಂಬರೀಶ್​ಗೆ ಬಿಜೆಪಿ ಆಹ್ವಾನ; ಪಕ್ಷ ಸೇರ್ಪಡೆ ಬಗ್ಗೆ ಸಂಸದೆ ನಿರ್ಧಾರವೇನು ಗೊತ್ತಾ?

ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ರೆ ಅದು ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ.

ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್

  • Share this:
ಮಂಡ್ಯ (ಏ.28) : ಬಿಜೆಪಿ ನಾಯಕರು (BJP Leaders) ರೆಡ್​ ಕಾರ್ಪೆಟ್​ ಹಾಕಿ ಸಂಸದೆ ಸುಮಲತಾ (MP Sumalatha) ಅವರಿಗೆ ಸ್ವಾಗತ ಕೋರಿದ್ದಾರೆ. ಆದ್ರೆ ಸಂಸದೆ ಸುಮಲತಾ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು (Decision)  ಮಾಧ್ಯಮದ  ಮುಂದೆ ಹಂಚಿಕೊಂಡಿಲ್ಲ ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರೋ ಸಂಸದೆ ಸುಮಲತಾ ಅವ್ರು, ಹಲವು ಬಾರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಬಿಜೆಪಿ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ, ಮಂಡ್ಯ (Mandya) ಜನರನ್ನು ಕೇಳ್ಬೇಕು ಅಂತಿದ್ರು. ಸಚಿವ ಅಶ್ವತ್ಥ್​ ನಾರಾಯಣ (Ashwath Narayan) ಸಹ ಸುಮಲತಾಗೆ ಬಿಜೆಪಿ ಸೇರ್ಪಡೆ ಆಹ್ವಾನ ನೀಡಿದ್ದು, ಸದ್ಯಕ್ಕೆ ನನಗೆ ಯಾವ ಪಕ್ಷ ಸೇರುವ ಅವಶ್ಯಕತೆ ಇಲ್ಲ ಎಂದು ಸುಮಲತಾ ಹೇಳಿದ್ದಾರೆ.  

ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ

ಮದ್ದೂರಿನಲ್ಲಿ ಮಾತಾಡಿದ ಸಂಸದೆ ಸುಮಲತಾ ಅಂಬರೀಶ್, ಕಳೆದ ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ, ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ‌ ಕಾರಣದಿಂದ ಮುಖಂಡರನ್ನು ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಮುಖಂಡರು ಹಿಂದೆ ಫಂಡ್ ಬಗ್ಗೆ ಕೇಳಿದ್ರು. ಈ ಬಗ್ಗೆ ಪ್ರಸ್ತಾಪ ಮಾಡಲು ಅವರನ್ನು ಸಭೆ ಕರೆದಿದ್ದೇನೆ.ಈ ಸಭೆ ಬಿಜೆಪಿ ಸೇರುವ ಬಗ್ಗೆ ಅಲ್ಲ. ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ, ಜನರ ಬಳಿ ಅಭಿಪ್ರಾಯ ಸಂಗ್ರಹ ಮಾಡುತ್ತಿರುವುದಾಗಿ ತಿಳಿಸಿದ್ದ ಸಂಸದೆ ಸುಮಲತಾ, ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಪ್ರಮುಖ ಮುಖಂಡರನ್ನ ಒಬ್ಬೊಬ್ಬರನ್ನಾಗಿ ಕರೆದು ಮಾತುಕತೆ ನಡೆಸಿದ್ದಾರೆ.

ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೆ

ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ರೆ ಅದು ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಯಾವ ಪಕ್ಷ ಸೇರಿವ ಅವಶ್ಯಕತೆ ಇಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಇನ್ನು ಜನರು ಏನು ಅಭಿಪ್ರಾಯ ಹೇಳಿದ್ದಾರೆ ಅನ್ನೋದನ್ನು ಹೇಳಲ್ಲ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳಲ್ಲ, ಎಲ್ಲರೂ ಸ್ವತಂತ್ರರು ಯಾವ ಪಕ್ಷಕ್ಕಾದ್ರು ಸೇರಬಹುದು ಎಂದು ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ: Hubballi Riots: ಗಲಭೆ ಪ್ರಕರಣದ ಮುಖ್ಯ ಆರೋಪಿ ನ್ಯಾಯಾಂಗ ವಶಕ್ಕೆ; ಕಟೀಲ್ ವಿರುದ್ಧ ದೂರು

ಚುನಾವಣೆಯಲ್ಲಿ ಅಭಿಷೇಕ್ ಸ್ಪರ್ಧೆ ಮಾಡ್ತಾರಾ?

ಮುಂದಿನ ವಿಧಾನಸಭೆ ಎಲೆಕ್ಷನ್​ನಲ್ಲಿ ಸಂಸದೆ ಸುಮಲತಾ ಅಂಬರೀಶ್​ ಪುತ್ರ ಅಭಿಷೇಕ್​ ಅವರು ಸ್ಪರ್ಧೆ ಮಾಡ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ರಾಜಕೀಯಕ್ಕೆ ಅಭಿಷೇಕ್​ ಎಂಟ್ರಿ ಕೊಡ್ತಾರಾ ಎಂದು ಸುಮಲತಾರನ್ನು ಕೇಳಿದ್ರೆ ಅವರು ಹೇಳೋದೇ ಬೇರೆ. ನಾವು ಸಿನಿಮಾ ಕ್ಷೇತ್ರಕ್ಕೆ ಬಾ ಎಂದು ಕರೆದಿಲ್ಲ, ಈಗ ರಾಜಕೀಯದ ವಿಚಾರದ ಬಗ್ಗೆಯೂ ನಾವು ಏನೂ ಹೇಳಲ್ಲ ಅದು ಅವನ ವೈಯಕ್ತಿಕ ವಿಚಾರ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ನಮ್ಮ ಭಾಷೆಗೆ ಧಕ್ಕೆಯಾದ್ರೆ ಸುಮ್ಮನಿರಲ್ಲ

ಅಜಯ್ ದೇವಗನ್, ಸುದೀಪ್ ನಡುವಿನ ಹಿಂದಿ ಭಾಷೆ ಕುರಿತ ಟ್ವೀಟ್​ ವಾರ್​ ವಿಚಾರಕ್ಕೆ ಸಂಬಂಧಿಸಿದ ಸುಮಲತಾ ಅವರು, ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ. ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ, ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ.

ಇದನ್ನೂ ಓದಿ: Bengaluru: ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಸ್ಫೋಟ: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ.ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ. ನಮ್ಮ ಭಾಷೆ ನಮ್ಮದೆ ಆದಂತ ಗೌರವ ಇದೆ. ನಾವು ಎಲ್ಲಾ ಭಾಷೆಯನ್ನ ಗೌರವಿಸುತ್ತೇವೆ. ಆದ್ರೆ ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಸುಮಲತಾ ಹೇಳಿದ್ದಾರೆ.
Published by:Pavana HS
First published: