ಮಾಜಿ ಸಿಎಂ ಕುಮಾರಸ್ವಾಮಿಗೆ ಆತಿಥ್ಯ ನೀಡಿದ ಬಿಜೆಪಿ ಮುಖಂಡನಿಗೆ ಪಕ್ಷದಿಂದ ಉಚ್ಛಾಟನೆ ಶಾಕ್..!

ಉಚ್ಛಾಟನೆ ಆದೇಶವನ್ನು ಬಾಗಲಕೋಟೆ ನಗರ ಮಂಡಲ ಅಧ್ಯಕ್ಷ ಬಸವರಾಜ ಅವರಾದಿ ಹೊರಡಿಸಿದ್ದು , ಆದೇಶದಲ್ಲಿ ಸಂತೋಷ್ ಹೊಕ್ರಾಣಿ 6ವರ್ಷ ಕಾಲ ಉಚ್ಛಾಟಿಸಲಾಗಿದೆ.

ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ

ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ

  • Share this:
ಬಾಗಲಕೋಟೆ(ಫೆ.5): ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜನವರಿ 31ರಂದು  ಬಾಗಲಕೋಟೆಯಲ್ಲಿ ನಡೆದ ಜೆಡಿಎಸ್ ಸಂಘಟನಾ ಸಮಾವೇಶದ ಬಳಿಕ  ಬಾಗಲಕೋಟೆಯ ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ ಮನೆಗೆ ಭೇಟಿ ನೀಡಿ ಭೋಜನ  ಮಾಡುವುದರ ಮೂಲಕ ಜೆಡಿಎಸ್ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಭೋಜನ ಆತಿಥ್ಯ ನೀಡಿದ್ದ  ಸಂತೋಷ್ ಹೊಕ್ರಾಣಿ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷ ಉಚ್ಛಾಟಿಸಿ ಆದೇಶ ಹೊರಡಿಸಿದ್ದು ಉಚ್ಛಾಟಿತ  ಸಂತೋಷ್ ಹೊಕ್ರಾಣಿ  ಪರೋಕ್ಷವಾಗಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ವೀರಣ್ಣ ಚರಂತಿಮಠರೊಂದಿಗೆ ಸಂತೋಷ್ ಮುನಿಸು! ಸಂತೋಷ್ ಗೆ ಉಚ್ಛಾಟನೆ ಶಾಕ್!!

ಬಿಜೆಪಿ ಯುವ ಮುಖಂಡ ಸಂತೋಷ್ ಹೊಕ್ರಾಣಿ ಕಳೆದ 18ವರ್ಷಗಳಿಂದ  ಬಾಗಲಕೋಟೆ ಮತಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಚುನಾವಣೆ ಗೆಲುವಿನ ಬಳಿಕ ಶಾಸಕ ವೀರಣ್ಣ ಚರಂತಿಮಠ ಹಾಗೂ ಸಂತೋಷ್ ಹೊಕ್ರಾಣಿ ಮಧ್ಯೆ ಮುನಿಸು ಉಂಟಾಗಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ಕೊಡುತ್ತಿಲ್ಲ. ಜೊತೆಗೆ ಬಿಟಿಡಿಎ ಅಧ್ಯಕ್ಷ ಸ್ಥಾನವೂ ವೀರಣ್ಣ ಚರಂತಿಮಠ ಪಡೆದುಕೊಂಡ ಹಿನ್ನೆಲೆಯಲ್ಲಿ ಬಹುತೇಕ ಎರಡನೇ ದರ್ಜೆ ನಾಯಕರಲ್ಲಿ ಒಳಗೊಳಗೆ ಮುನಿಸು ಶುರುವಾಗಿದೆ ಎನ್ನಲಾಗಿದೆ.ಸಂತೋಷ್ ಹೊಕ್ರಾಣಿ ಬಹಿರಂಗವಾಗಿ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಜೊತೆಗೆ ಅಂತರ ಕಾಯ್ದುಕೊಂಡು ದೂರವೇ ಉಳಿದಿದ್ದಾರೆ.  ಈಚೆಗೆ  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಂತೋಷ ಹೊಕ್ರಾಣಿ ಮನೆಗೆ ಭೇಟಿ ನೀಡಿ,ಭೋಜನ ಸವಿದಿದ್ದಾರೆ.ಈ ವೇಳೆ ಸಂತೋಷ್ ಹೊಕ್ರಾಣಿ ಜೆಡಿಎಸ್ ಪಕ್ಷ ಸೇರ್ಪಡೆಗೆ ಆಹ್ವಾನಿಸಿದ್ದಾರೆ.ಆದರೆ ಸಂತೋಷ್ ಹೊಕ್ರಾಣಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇದೊಂದು ಸೌಹಾರ್ದ ಭೇಟಿಯಾಗಿತ್ತು  ಎನ್ನಲಾಗಿದೆ.ಕೋಲಾರದಲ್ಲಿ ಮಾವಿಗೆ ರೋಗಬಾಧೆ ಕಾಟ; ಬೆಳೆ ಉಳಿಸಲು ಕೀಟನಾಶಕ ಸಿಂಪಡಿಸುತ್ತಿರುವ ಬೆಳೆಗಾರರು

ಮುಂದಿನ ಚುನಾವಣೆಯಲ್ಲಿ ಕಣದಲ್ಲಿರುವುದಾಗಿ ಸಂತೋಷ್ ಹೊಕ್ರಾಣಿ ಪ್ರತಿಕ್ರಿಯಿಸಿದ್ದರು. ಇದೀಗ  ಸಂತೋಷ್ ಹೊಕ್ರಾಣಿ ಬಿಜೆಪಿ ಪಕ್ಷದಿಂದ ಉಚ್ಛಾಟಿಸುವ ಮೂಲಕ ವೀರಣ್ಣ ಚರಂತಿಮಠ ಶಾಕ್ ನೀಡಿದ್ದಾರೆ ಎನ್ನಲಾಗಿದೆ. ಉಚ್ಛಾಟನೆ ಆದೇಶವನ್ನು ಬಾಗಲಕೋಟೆ ನಗರ ಮಂಡಲ ಅಧ್ಯಕ್ಷ ಬಸವರಾಜ ಅವರಾದಿ ಹೊರಡಿಸಿದ್ದು , ಆದೇಶದಲ್ಲಿ ಸಂತೋಷ್ ಹೊಕ್ರಾಣಿ 6ವರ್ಷ ಕಾಲ ಉಚ್ಛಾಟಿಸಲಾಗಿದೆ.

ಕಳೆದ  ನಾಲ್ಕೈದು ವರ್ಷಗಳಿಂದ ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಸಕ್ರಿಯರಾಗಿಲ್ಲ.ಯಾವುದೇ ಪದಾಧಿಕಾರಿ ಜವಾಬ್ದಾರಿ ಇರುವುದಿಲ್ಲ. ಪಕ್ಷದ ಹಿರಿಯರು ವ್ಯವಸ್ಥೆ ವಿರುದ್ಧ ಗುಂಪು ಕಟ್ಟಿಕೊಂಡು ಬಾಗಲಕೋಟೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಹಿಂಬಾಲಕರಿಂದ ಪೋಸ್ಟ್ ಮಾಡಿಸುತ್ತಿದ್ದು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಾಗುವಂತೆ ಮಾಡುತ್ತಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 31ರಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಂತೋಷ ಹೊಕ್ರಾಣಿ ಮನೆಗೆ ಭೇಟಿ ನೀಡಿರುತ್ತಾರೆ. ಈ ವೇಳೆ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿರುತ್ತಾರೆ. ಪಕ್ಷದಲ್ಲಿ ಮುಂದುವರೆದರೆ ಕಾರ್ಯಕರ್ತರನ್ನು ದಾರಿ ತಪ್ಪಿಸಿ ಗೊಂದಲ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸಂತೋಷ ಹೊಕ್ರಾಣಿ 6ವರ್ಷ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಆದೇಶದಲ್ಲಿದೆ.

ಉಚ್ಛಾಟನೆ ಆದೇಶಕ್ಕೆ ಸಂತೋಷ್ ಆಕ್ರೋಶ!!

ಉಚ್ಛಾಟನೆ ಆದೇಶದಿಂದ ಸಂತೋಷ ಹೊಕ್ರಾಣಿ ಆಕ್ರೋಶ ವ್ಯಕ್ತಪಡಿಸಿದ್ದು, ಪರೋಕ್ಷವಾಗಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಹರಿಹಾಯ್ದಿದ್ದಾರೆ. ಉಚ್ಛಾಟನೆ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗುವೆ.ನಾನು ಆರ್ ಎಸ್ ಎಸ್ ಮೂಲದಿಂದ ಬಂದವನು,ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವೆ. ಸೌಹಾರ್ದ ಭೇಟಿಗೆಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮನೆಗೆ ಬಂದಿದ್ದರು.ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೇ.ವಿನಾಕಾರಣ ಪಕ್ಷದಿಂದ ಉಚ್ಛಾಟನೆ ಆದೇಶ ಹೊರಡಿಸಿದ್ದಾರೆ. ಬಿಡಿಸಿ ಸಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಅಡ್ಡಮತದಾನ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ನನ್ನ ಮೇಲೆ ಕ್ರಮ ಏಕೆಂದು ಸಂತೋಷ ಹೊಕ್ರಾಣಿ ಪ್ರಶ್ನಿಸಿದ್ದಾರೆ.
Published by:Latha CG
First published: