ಮೈತ್ರಿ ಸರ್ಕಾರ ಬೀಳಿಸುವ ಹಿಂದೆ ಕಮಲದ ಪಾತ್ರವಿಲ್ಲ, ಆದರೆ ‘ಕೈ’ ಕೈವಾಡ ಇರುವುದು ಮಾತ್ರ ನಿಶ್ಚಿತ; ಸಿ.ಟಿ. ರವಿ!

ಆಧಿವೇಶನದಲ್ಲಿ ನಾವು ಐಎಂಎಯಂತಹ ಸಾರ್ವಜನಿಕರ ಹಣ ನುಂಗಿರೋ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡ್ತೇವೆ. ಬರ, ಕುಡಿಯೋ ನೀರು ಇಂತಹ ಜನರ ವಿಚಾರವನ್ನ ಪ್ರಸ್ತಾಪಿಸುತ್ತೇವೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅಧಿವೇಶನದಲ್ಲಿ ಇಂತಹ ವಿಚಾರಗಳು ಪ್ರಸ್ತಾಪ ಆಗಬಾರದು ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅನವಶ್ಯಕ ಆಟ ಆಡುತ್ತಿದ್ದಾರೆ ಎಂದು ಸಿ.ಟಿ. ರವಿ ಕಿಡಿಕಾರಿದ್ದಾರೆ.

MAshok Kumar | news18
Updated:July 4, 2019, 2:04 PM IST
ಮೈತ್ರಿ ಸರ್ಕಾರ ಬೀಳಿಸುವ ಹಿಂದೆ ಕಮಲದ ಪಾತ್ರವಿಲ್ಲ, ಆದರೆ ‘ಕೈ’ ಕೈವಾಡ ಇರುವುದು ಮಾತ್ರ ನಿಶ್ಚಿತ; ಸಿ.ಟಿ. ರವಿ!
ಮಾಜಿ ಸಚಿವ ಸಿ.ಟಿ. ರವಿ ಮತ್ತು ಸಿದ್ದರಾಮಯ್ಯ
  • News18
  • Last Updated: July 4, 2019, 2:04 PM IST
  • Share this:
ಬೆಂಗಳೂರು (ಜುಲೈ.04); ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ ಪ್ರಧಾನಿ ಮೋದಿ ಕೈವಾಡ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆ ಸುಳ್ಳು ಇದರ ಹಿಂದೆ ಕಮಲದ ಪಾತ್ರವಿಲ್ಲ ಆದರೆ, ಮೈತ್ರಿ ಸರ್ಕಾರವನ್ನು ಬೀಳಿಸುವುದರ ಹಿಂದೆ ಕೈ ಪಕ್ಷದ ಕೈವಾಡ ಇರುವುದು ಮಾತ್ರ ನಿಶ್ಚಿತ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಚಿಕ್ಕಮಗಳೂರು ಶಾಸಕ ಸಿಟಿ ರವಿ, “ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹೆಸರನ್ನು ನೆನೆಯದಿದ್ದರೆ ತಿಂದ ಅನ್ನ ಕರಗಲ್ಲ ಎಂಬ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂದಿದೆ. ಸರ್ಕಾರ ಬೀಳಿಸೋ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲೇ ಸರ್ಕಾರ ಬೀಳಿಸುವುದಕ್ಕಾಗಿ ಜನ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಮಾಜಿ ಸಿಎಂ ಆರೋಪ ಸುಳ್ಳಿನಿಂದ ಕೂಡಿದ್ದು ಕೂಡಲೇ ಅವರು ಕ್ಷಮೆ ಕೇಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ ಮುಂದಿನ ಚುನಾವಣೆಯಲ್ಲೂ ಮೋದಿ ಅಂದ್ರೆ ಬಾಯಲ್ಲಿ ಬೂಟು ಹಾಕ್ತೀವಿ; ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ!

“ದೇವೇಗೌಡರಿಗೆ ಗೊತ್ತಿದೆ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿರುವವರು ಯಾರು ಎಂದು ಕಾಂಗ್ರೆಸ್ ಹೈಕಮಾಂಡ್​ಗೆ ದೊಡ್ಡ ಗೌಡರು ದೂರು ಕೊಟ್ಟಿದ್ದು ಅಮಿತ್ ಶಾ ಮೇಲಾ? ಅಥವಾ ಮೋದಿ ವಿರುದ್ಧವಾ?” ಎಂದು ಪ್ರಶ್ನೆ ಮಾಡಿರುವ ಸಿ.ಟಿ. ರವಿ “ತಮ್ಮ ಹುಳುಕನ್ನು ಮುಚ್ಚಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಸುಮ್ಮನೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುತ್ತಾರೆ.

ಆಧಿವೇಶನದಲ್ಲಿ ನಾವು ಐಎಂಎಯಂತಹ ಸಾರ್ವಜನಿಕರ ಹಣ ನುಂಗಿರೋ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡ್ತೇವೆ. ಬರ, ಕುಡಿಯೋ ನೀರು ಇಂತಹ ಜನರ ವಿಚಾರವನ್ನ ಪ್ರಸ್ತಾಪಿಸುತ್ತೇವೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅಧಿವೇಶನದಲ್ಲಿ ಇಂತಹ ವಿಚಾರಗಳು ಪ್ರಸ್ತಾಪ ಆಗಬಾರದು ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅನವಶ್ಯಕ ಆಟ ಆಡುತ್ತಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ : 6 ತಿಂಗಳೂ ಅಧಿಕಾರ ನಿಭಾಯಿಸಲಾಗದ ವಿಶ್ವನಾಥ್​ ಬಗ್ಗೆ ನನಗೆ ಅನುಕಂಪವಿದೆ; ಟ್ವಿಟ್ಟರ್​ನಲ್ಲಿ ಕಾಲೆಳೆದ ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ ಬಿಜೆಪಿಯವರ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಹಣ ತಂದಿದ್ದರು ಎಂಬ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಆರೋಪಕ್ಕೆ ಚಾಟಿ ಬೀಸಿದ ಸಿ.ಟಿ. ರವಿ, “ಸುಮ್ಮನೆ ಬಿಜೆಪಿಯವರು ಹಣ ತಂದಿದ್ದರು ಅನ್ನೋದಲ್ಲ. ಬಿಜೆಪಿಗೆ 11 ಕೋಟಿ ಸದಸ್ಯರಿದ್ದಾರೆ. ಹೀಗಾಗಿ ಹಣದ ಆಮಿಷ ಒಡ್ಡಿದ್ದು ಯಾರು? ಎಲ್ಲಿ? ಎಂಬುದನ್ನು ಅವರು ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ