• Home
  • »
  • News
  • »
  • state
  • »
  • Hubballi Riots: ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು: CT Ravi

Hubballi Riots: ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು: CT Ravi

ಸಿಟಿ ರವಿ

ಸಿಟಿ ರವಿ

ಈ ಮಾನಸೀಕತೆಗೆ, ಕಿಲಾಫತ್ ಚಳುವಳಿಗೆ ಗೊಬ್ಬರ-ನೀರು ಹಾಕಿ ದೇಶ ವಿಭಜನೆ ಆಯ್ತು.  ಈ ಹಿಜಾಬ್ ಗೆ ಗೊಬ್ಬರ-ನೀರು ಹಾಕಿ ಮತ್ತೊಂದು ವಿಭಜನೆಗೆ ಅವಕಾಶ ಮಾಡಬಾರದು ಎಂದರು

  • Share this:

ಶೇ.99ರಷ್ಟು ಜನ ಕೋರ್ಟ್ (Karnataka High court) ಆದೇಶ ಪಾಲಿಸಿದ್ದಾರೆ. ಸಮವಸ್ತ್ರ (Uniform) ಒಪ್ಪಿಕೊಂಡು, ಪರೀಕ್ಷೆ ಬರೆದಿದ್ದಾರೆ. ಆದ್ರೆ ಶೇ.1ರಷ್ಟು ಜನರ ಈ ವಿಷಯವನ್ನು ಜೀವಂತವಾಗಿರಿಸಲು ಬಯಸುತ್ತಾರೆ. ಕ್ಯಾಮೆರಾ ತಮ್ಮ ಕಡೆ ತಿರುಗಲಿ ಎಂದು ನಾಟಕ ಮಾಡುತ್ತಿದ್ದಾರೆ. ಪರೀಕ್ಷೆ ದೊಡ್ಡದು ಎಂದು ತಿಳಿದವರು ಎಕ್ಸಾಂ ಬರೆಯುತ್ತಿದ್ದಾರೆ.  ನ್ಯಾಯಾಲಯ ತೀರ್ಪು ಒಪ್ಪಿ ಪರೀಕ್ಷೆ (Exams) ಬರೆಯುತ್ತಿರವರಿಗೆ ಸ್ವಾಗತ.  ಈ ವಿಷಯವನ್ನು ಜೀವಂತವಾಗಿಡಲು ಷಡ್ಯಂತ ನಡೆಸಿದ್ದುಮ ಅದರ ಮಾನಸಿಕತೆ ಇದಾಗಿದೆ. 1983 ರಿಂದ ಇಲ್ಲದ ಚಳುವಳಿ ಈಗ ಏಕೆ ಶುರುವಾಗುತ್ತದೆ. ಇವತ್ತು ಹಿಜಾಬ್ (Hijab) ದೊಡ್ದು ಅಂತಾರೆ, ನಾಳೆ ಸಂವಿಧಾನವೇ ಬೇಡ ಅಂತಾರೆ. ಸಂವಿಧಾನ (Constitution) ಬೇಡ ನಮಗೆ ಷರಿಯಾನೇ ಬೇಕು ಅಂತಾರೆ. ಆ ಮಾನಸಿಕತೆಗೆ ಗೊಬ್ಬರ-ನೀರು ಹಾಕುವುದನ್ನ ಕಾಂಗ್ರೆಸ್ ಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದ್ದಾರೆ.


ಈ ಮಾನಸೀಕತೆಗೆ, ಕಿಲಾಫತ್ ಚಳುವಳಿಗೆ ಗೊಬ್ಬರ-ನೀರು ಹಾಕಿ ದೇಶ ವಿಭಜನೆ ಆಯ್ತು.  ಈ ಹಿಜಾಬ್ ಗೆ ಗೊಬ್ಬರ-ನೀರು ಹಾಕಿ ಮತ್ತೊಂದು ವಿಭಜನೆಗೆ ಅವಕಾಶ ಮಾಡಬಾರದು ಎಂದರು


ಹುಬ್ಬಳ್ಳಿ ಗಲಾಟೆ ಅಚಾನಕ್ಕಾಗಿ ಆಗಿರುವ ಸಂಗತಿಗಳಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೂ  ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ. ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟ.


ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು


ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಆಗಲ್ಲ. ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯ ಬೆಲೆ ತೆರಬೇಕಾಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು. ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ ಎಂದರು.


ಇದನ್ನೂ ಓದಿ:  2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು


ಗಲಭೆ ಹುಟ್ಟು ಹಾಕುವುದೇ ಅವರ ದುರುದ್ದೇಶವಾದ್ರೆ ಗಲಭೆ ನಿಯಂತ್ರಿಸುವ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಕರ್ನಾಟಕ ರಾಜ್ಯವನ್ನು ಮತ್ತೊಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾಡೋದಕ್ಕೆ ಬಿಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.


PSI ಅಕ್ರಮ, ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ


PSI ಅಕ್ರಮದಲ್ಲಿ ಯಾರೇ ಪಾಲುದಾರರಿದ್ದರೂ ಅವರು ಕಳ್ಳರು. ಕಾಂಗ್ರೆಸ್ ಅಥವಅ ಬಿಜೆಪಿಯವರು ಇರಲಿ ಅವರು ಕಳ್ಳರು. ಅಕ್ರಮ ನಡೆಸುವವರು ಕಾಂಗ್ರೆಸ್ ಮುಖವಾಡನೂ ಹಾಕ್ತಾರೆ, ಬಿಜೆಪಿ ಮುಖವಾಡನೂ ಹಾಕ್ತಾರೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ, ತಪ್ಪಿತಸ್ಥರ ಮೇಲೆ ಕ್ರಮ‌ ಆಗುತ್ತದೆ. ತನಿಖೆಯನ್ನ ಸಿಓಡಿಗೆ ವಹಿಸಿದೆ, ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.


ಹಿಜಾಬ್ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆ


ಇನ್ನು ಉಡುಪಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಜಾಬ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ಪಷ್ಟ ನಿರ್ಧಾರ ತಿಳಿಸಿದೆ. ಸಮವಸ್ತ್ರ ಧರಿಸಿ ಬರಬೇಕೆಂದು ಅಂತ ಹೇಳಿದೆ. ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಕೂಡ ಇದನ್ನೇ ಹೇಳಿದೆ. ಹೈಕೋರ್ಟ್ ಆದೇಶ ಮೀರಿ ಕೆಲವರು ಹಿಜಾಬ್‌ ಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.


ಈ ದೇಶದ ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ. ಮನಬಂದಂತೆ ನಡೆದುಕೊಳ್ಳುತ್ತೇವೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಪೊಲೀಸರಿಗೆ ಗೌರವ ಕೊಡಲಿಲ್ಲ ಸರಕಾರಕ್ಕೆ ಗೌರವ ಕೊಡುವುದಿಲ್ಲ. ಪೊಲೀಸ್ ವ್ಯವಸ್ಥೆ ಮೇಲೆ ದೌಜನ್ಯ ಮಾಡ್ತಾರೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡ್ತಾರೆ. ಇದು ಅವರ ಮಾನಸಿಕತೆ,  ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋದು ನಮ್ಮ ಸಂಕಲ್ಪ.


ಇದನ್ನೂ ಓದಿ:  Naziha Salim: ವರ್ಣಚಿತ್ರಗಾರ್ತಿ, ಪ್ರಾಧ್ಯಾಪಕಿ, ವಿದ್ಯಾರ್ಥಿ ವೇತನ ಪಡೆದ ಮೊದಲ ಮಹಿಳೆ ನಾಜಿಹಾ ಸಲೀಂಗೆ ಗೂಗಲ್ ಡೂಡಲ್ ವಿಶೇಷ ಗೌರವ


ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದದ್ದು ಶಿಕ್ಷಣ, ಶಿಕ್ಷಣ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯದೇ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ, ಭಾರತದಲ್ಲಿ ಏನೋ ನಡೆಯುತ್ತೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ ಇದು ಸರಿಯಲ್ಲ, ಎಲ್ಲರೂ ಪರೀಕ್ಷೆ ಬರೆಯಬೇಕು ಪದವಿ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು ಎಂದು ಹೇಳಿದರು.

Published by:Mahmadrafik K
First published: