C.T.Ravi: ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್​​​ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ: ಸಿ.ಟಿ.ರವಿ

ಕಾಂಗ್ರೆಸ್ ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ, ಆರ್.ಎಸ್.ಎಸ್. ಮೇಲೆ ಅಲ್ಲ. ಆರ್.ಎಸ್.ಎಸ್. ದೇಶಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಸಿಟಿ ರವಿ

ಸಿದ್ದರಾಮಯ್ಯ, ಸಿಟಿ ರವಿ

  • Share this:
ಚಿಕ್ಕಮಗಳೂರು : ಕಾಂಗ್ರೆಸ್ (Congress) ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ, RSS ಮೇಲೆ ಅಲ್ಲ. ಆರ್.ಎಸ್.ಎಸ್. ದೇಶಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಅವರು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ್ದಾರೆ.  ಇಲ್ಲಿ ಮಾತಾನಾಡಿದ ಅವರು ಅಲ್‍ಖೈದಾ ಬಿಡುಗಡೆ ಮಾಡಿರುವ ವಿಡಿಯೋ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದೆ. ಉತ್ತರ ಪ್ರದೇಶದಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ 387ರಲ್ಲಿ ಠೇವಣಿ ಸಿಗದಿದ್ದರೆ ಹೇಗಾಗಬೇಡ, ಈ ಮಧ್ಯೆ ಪಂಜಾಬ್‍ನಲ್ಲೂ ಸರ್ಕಾರ ಕಳೆದುಕೊಂಡು ಹತಾಶರಾಗಿ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಸಂಜೀವಿನಿ ಸರಸ್​ ಮೇಳ ಉದ್ಘಾಟನೆ ಬಳಿಕ ಹೆಂಡತಿಗೆ ಸೀರೆ ಖರೀದಿಸಿ ಗಮನಸೆಳೆದ CM Bommai

ಅಲ್‍ಖೈದಾ ಪರ ಕಾಂಗ್ರೆಸ್​​ ಬ್ಯಾಟಿಂಗ್​ 

ಆರ್.ಎಸ್.ಎಸ್. ದೇಶಭಕ್ತ ಹಾಗೂ ದೇಶಕಾಯುವ ಸಂಘಟನೆ. ಅಲ್‍ಖೈದಾ ಬಾಂಬಿ ನ ಮೇಲೆ ವಿಶ್ವಾಸವಿಟ್ಟಿರೋ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ. ಅಲ್‍ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಬೇಕು, ಆರ್.ಎಸ್.ಎಸ್. ಮಧ್ಯೆ ಅಲ್ಲ. ಆಗ ಸೂತ್ರದಾರಿ ಅಲ್‍ಖೈದಾನೋ, ಪಾತ್ರದಾರಿ ಕಾಂಗ್ರೆಸ್ಸೋ ಗೊತ್ತಿಲ್ಲ ಅದು ಗೊತ್ತಾಗಬೇಕು ಎಂದರು. ಇವೆರಡರ ನಡುವೆ ಹೋಲಿಕೆ ಬುದ್ಧಿ ಇಲ್ಲದವರು ಮಾತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರು ಅಲ್‍ಖೈದಾ ಮೇಲೆ ಸಿಂಪಥಿ ತೋರುತ್ತಿದ್ದಾರೆ. ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಅಲ್‍ಖೈದಾಗೆ ವಕಾಲತ್ತು ವಹಿಸಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರ ಹಾಕಿತ್ತು. ಹಿಜಬ್ ವಿವಾದ ಪಂಚರಾಜ್ಯ ಚುನಾವಣೆಯಲ್ಲಿ ಲಾಭ ತರಲಿದೆ ಎಂದು ಭಾವಿಸಿತ್ತು. ಆದರೆ, ಅದು ಆಗಲಿಲ್ಲ. ಈಗಲಾದರೂ ಕಾಂಗ್ರೆಸ್ ಸತ್ಯದ ಪರ ನಿಲ್ಲಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‍ಗೆ ಸತ್ಯದ ದಾರಿ ತೋರಿದ್ದಾರೆ.

ಕಾಂಗ್ರೆಸ್​​​ನಿಂದಲೇ ಹಿಜಬ್​​ ದೊಡ್ಡ ವಿವಾದವಾಗಿದ್ದು

ಹಿಜಬ್ ಒಂದು ಸ್ಕೂಲಿನ ಸಮಸ್ಯೆಯಾಗಿತ್ತು. ಮೊದಲು ಟ್ವಿಟ್ ಮಾಡಿದ್ದು ಸಿದ್ದರಾಮಯ್ಯ. ಆಮೇಲೆ ರಾಹುಲ್ ಗಾಂಧಿ-ಪ್ರಿಯಾಂಕ ಗಾಂಧಿ. ಆಗ ಅದು ನ್ಯಾಷನಲ್ ನ್ಯೂಸ್ ಆಯ್ತು, ಪಿ.ಎಫ್.ಐ. ಹೋರಾಟಕ್ಕೆ ಇಳಿಯಿತು. ವಕೀಲರ ಮೂಲಕ ಅವರಿಗೆ ಕಾನೂನಿನ ಅರಿವನನ್ನ ಕೊಡುವ ಕೆಲಸವನ್ನ ಕಾಂಗ್ರೆಸ್ ಮಾಡಿತ್ತು. ಯಾರ್ಯಾರು ವಕಾಲತ್ತು ವಹಿಸಿದ್ದರೋ ಅವರೆಲ್ಲಾ ಕಾಂಗ್ರೆಸ್ ಬೆಂಬಲಿಗರೇ ಆಗಿದ್ದರು. ಅವರು ವಕಾಲತ್ತು ವಹಿಸಿರುವುದು ಕಾಕತಾಳಿಯ ಎಂದು ಭಾವಿಸುವುದಿಲ್ಲ ಎಂದರು. ಇದರ ಹಿಂದೆ ಯಾರ್ಯಾರಿದ್ದಾರೆ ಎಂದು ಸ್ಪಷ್ಟವಾಗುತ್ತೆ.

ಇದನ್ನೂ ಓದಿ: ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ; ನಿಯಮ ಮೀರಿದ್ರೆ ಕ್ರಮ: BBMP

ನಾವು ಮೊದಲು ಪಿ.ಎಫ್.ಐ. ಹಾಗೂ ಕಾಂಗ್ರೆಸ್ ಮಾತ್ರ ಇದೆ ಎಂದು ಭಾವಿಸಿದ್ದೇವೆ. ಈಗ ಅಲ್‍ಖೈದಾ ಕೂಡ ಇದೆ. ಕಾಂಗ್ರೆಸ್ ಯೂನಿಫಾರಂ ಪರ ನಿಲ್ಲಲಿ. ಯೂನಿಫಾರಂ ಮಾಡಿದ್ದು ನಾವಲ್ಲ. 1983ರಲ್ಲಿ. ಆಗ ನಮ್ಮ ಸರ್ಕಾರ ಇರಲಿಲ್ಲ. ನಮ್ಮದು ಈಗೀಗ ಬಂದ ಸರ್ಕಾರ. ಅಂದು ಜನತಾ ಸರ್ಕಾರ ಯೂನಿಫಾರಂ ಮಾಡಿದ್ದು. ಈಗ ಯೂನಿಫಾರಂ ಇರಬೇಕಾ, ಹಿಜಬ್ ಇರಬೇಕಾ ಎಂಬ ಪ್ರಶ್ನೆ ಬಂದರೆ ಹೊರಗಡೆ ಹಿಜಬ್ ಹಾಕಬಹುದು. ಸ್ಕೂಲಿನಲ್ಲಿ ಯೂನಿಫಾರಂ. ಕಾಂಗ್ರೆಸ್ ನಿಲುವೇನು. ಯೂನಿಫಾರಂ ಪರವೋ-ಇಲ್ಲವೋ ಮೊದಲು ಅದನ್ನ ಸ್ಪಷ್ಟಪಡಿಸಲಿ. ಆಗ ಯಾರು ಅಲ್‍ಖೈದಾಕೆ ಮ್ಯಾಚ್ ಆಗುತ್ತಾರೆ ಗೊತ್ತಾಗುತ್ತೆ ಎಂದು ಸಿದ್ದು-ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

ಹಿಜಬ್​​​ ಚುನಾವಣೆಯಲ್ಲಿ ಲಾಭ ತರಲಿಲ್ಲ.. 

ನ್ಯಾಯಾಂಗದ ತೀರ್ಪು ಒಪ್ಪಿಗೆಯಾಗದಿದ್ದರೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಬಂದ್ ಕರೆ ನೀಡುತ್ತಿರಲಿಲ್ಲ, ಇದನ್ನು ವ್ಯಾಪಕಗೊಳಿಸುವ ಸಂಚು ಇತ್ತು. ಕಾಂಗ್ರೆಸ್ ರಾಜಕೀಯ ಲಾಭದ ಲೆಕ್ಕಚಾರ ಹಾಕಿತ್ತು. ಐದು ರಾಜ್ಯಗಳ ಚುನಾವಣೆಗಳಲ್ಲಿ ಅದು ಲಾಭ ತರಲಿಲ್ಲ. ಈಗಲಾದರೂ ಸತ್ಯದ ಪರ ನಿಲ್ಲಲಿ ಎಂದರು.ಕಾಂಗ್ರೆಸ್ ಸಮವಸ್ತ್ರದ ಪರ ಅಥವಾ ವಿರದ್ಧ ಎನ್ನುವುದನ್ನು ಮೊದಲು ಸ್ಪಷ್ಠಪಡಿಸಲಿ ಆಗ ಯಾರು ಅಲ್‍ಖೈದ ಮ್ಯಾಚ್ ಆಗುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಕ್ ಶಬ್ಧ ಎಷ್ಟಿರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಅದನ್ನು ಮಸೀದಿಗೆ ಎಂದು ವಿಷಯಾಂತರ ಮಾಡಲಾಗುತ್ತಿದೆ. ಕೋರ್ಟ್ ನಿಯಮಗಳನ್ನು ಹೇಳಿದೆ ಅದನ್ನು ಕಮ್ಯೂನಲ್ ಮಾಡುತ್ತಿರುವುದು ಯಾರು? ನ್ಯಾಯಾಲಯದ ತೀರ್ಪು ಅನುಷ್ಠಾನ ಗೊಳಿಸಬೇಕೋ ಬೇಡಾವೇ? ಅನುಷ್ಠಾನ ಗೊಳಿಸಬಾರದು ಎಂದು ಹೇಳುವವರು ಈ ನೆಲದ ಕಾನೂನಿನ ವಿರೋಧಿಗಳು ಎಂದರು.

ನ್ಯಾಯಾಲಯದ ತೀರ್ಪು ಅನುಷ್ಠಾನ ಗೊಳಿಸಬೇಕೋ ಬೇಡವೋ ಎನ್ನುವುದನ್ನು ಹೇಳಲಿ ಆಗ ಯಾರು ಕಮ್ಯೂನಲ್ ಎನ್ನುವುದು ಗೊತ್ತಾಗುತ್ತದೆ. ಓಟಿಗಾಗಿ ಜೊಲ್ಲು ಸುರಿಸುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ಭರಿತರಾದರೂ.ಬೆಲೆಏರಿಕೆ ಕೊವೀಡ್, ಉಕ್ರೇನ್ ರಷ್ಯನ್ ಯುದ್ಧದ ನಂತರ ಆರಂಭವಾಯಿತು. ಎಲ್ಲಾ ದೇಶಗಳಲ್ಲೂ ಬೆಲೆಜಾಸ್ತಿ ಆಯ್ತು. ಹಾಗೇ ಭಾರತದಲ್ಲೂ ಜಾಸ್ತಿ ಆಯ್ತು. ಇದಕ್ಕೆ ಮೋದಿ ಕಾರಣ ಎನ್ನುವುದು ನಾನು ಒಪ್ಪುವುದಿಲ್ಲ. ಕೋವಿಡ್ ಯುದ್ಧದಿಂದ ಬೆಲೆಏರಿಕೆಗೆ ಕಾರಣ. ಬೆಲೆಏರಿಕೆಗೆ ಮೋದಿ ಕಾರಣ ಎನ್ನುವವರಿಗೆ ಜಗತ್ತಿನ ವಿದ್ಯಮಾನಗಳ ಅರಿವಿಲ್ಲವೇ ಎಂದು ಪ್ರಶ್ನಿಸಿದರು.ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಮಂತ್ರಿಯಾಗೋರೆ ಇಷ್ಟೋಂದು ತಲೆಕೆಡಿಸಿಕೊಂಡಿಲ್ಲ, ಪತ್ರಕರ್ತರಿಗೆ ಅವಕಾಶ ಸಿಗೋದಿಲ್ಲ, ಮಂತ್ರಿಯಾಗೋರೇ ಚುನಾವಣೆ ಮೂಡಿಗೆ ಬಂದಿದ್ದಾರೆ. ನೀವ್ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೀರಾ. ಎನ್ನುವ ಮೂಲಕ ಅವಧಿ ಪೂರ್ವ ಚುನಾವಣೆ ಜಪ ಮಾಡಿದರು.
Published by:Kavya V
First published: