ಉದ್ದೇಶಪೂರ್ವಕವಾಗಿಯೇ ವಿಶ್ವಾಸಮತಯಾಚನೆ ಮುಂದೂಡುತ್ತಿದ್ದಾರೆ; ಶಾಸಕ ಸಿ.ಟಿ.ರವಿ ಆರೋಪ

Latha CG | news18
Updated:July 22, 2019, 11:39 AM IST
ಉದ್ದೇಶಪೂರ್ವಕವಾಗಿಯೇ ವಿಶ್ವಾಸಮತಯಾಚನೆ ಮುಂದೂಡುತ್ತಿದ್ದಾರೆ; ಶಾಸಕ ಸಿ.ಟಿ.ರವಿ ಆರೋಪ
ಸಚಿವ ಸಿ.ಟಿ. ರವಿ
  • News18
  • Last Updated: July 22, 2019, 11:39 AM IST
  • Share this:
ಬೆಂಗಳೂರು,(ಜು.22): ಇಂದು ವಿಶ್ವಾಸಮತಯಾಚನೆ ಮಾಡುವುದಾಗಿ ಸ್ಪೀಕರ್​​ ರಮೇಶ್​ ಕುಮಾರ್​  ಹಾಗೂ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಿನ್ನೆ ನಡೆದ ಸಿಎಲ್​ಪಿ ಸಭೆಯಲ್ಲಿ ಸೋಮವಾರ ವಿಶ್ವಾಸಮತಯಾಚನೆ ಮಾಡುವುದಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ವಿಶ್ವಾಸ ಮತಯಾಚನೆ ವಿಳಂಬ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕೂಡ ಪರೋಕ್ಷವಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ನೋಡುತ್ತಿದೆ.  ಸಿಎಂ ಕುಮಾರಸ್ವಾಮಿ ಇಂದು ಸದನದಲ್ಲಿ ಮತಯಾಚನೆ ಮಾಡುತ್ತಾರೆ. ಮತಯಾಚನೆಗೆ ಸ್ಪೀಕರ್​ ಅವಕಾಶ ಮಾಡಿಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

2006ರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವರು ಆಗ ಮಾತನಾಡಿರುವುದು ಸಾಮಾಜಿಕ ನ್ಯಾಯ, ಈಗ ಮಾತನಾಡಿದರೆ ಅರಾಜಕತೆಯೇ ಎಂದು ಕಿಡಿಕಾರಿದರು.

ಇಂದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ಖಚಿತ; ವಿಶ್ವಾಸ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್

ಇದನ್ನು ರಾಜಕೀಯ ನೀತಿ ಅಂತ ಭಾವಿಸಬೇಕೇ ಹೊರತು, ನೈತಿಕತೆ, ಅನೈತಿಕತೆ ಎಂದು ಹೇಳಬಾರದು. ಸದನದಲ್ಲಿರುವ ಶಾಸಕರ ಬಗ್ಗೆ ಆರೋಪಿಸಬೇಕಾದರೆ, ನೋಟೀಸ್ ಕೊಟ್ಟು ಮಾತನಾಡಬೇಕು. ಏಕಾಏಕಿ ಆರೋಪ ಮಾಡುವುದು ಸರಿಯಲ್ಲ. ಸದನ‌ ಹೇಗೆ ನಡೆಸುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರೂ ನೋಡುತ್ತಿದ್ದಾರೆ ಎಂದು ಗುಡುಗಿದರು.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading