ಜಮೀನು ಆಸೆ ತೋರಿಸಿ ಮುಗ್ಧರ ಮತಾಂತರ: ಕನಕಪುರ ಚಲೋ ವೇಳೆ ಬಿಜೆಪಿ ನಾಯಕರ ಆಕ್ರೋಶ

ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಹೇಳಿದ ಅವರು, ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಾಥಾ ಆರಂಭಿಸಿ, ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ಧೇವೆ ಎಂದಿದ್ದಾರೆ.

news18
Updated:January 13, 2020, 12:43 PM IST
ಜಮೀನು ಆಸೆ ತೋರಿಸಿ ಮುಗ್ಧರ ಮತಾಂತರ: ಕನಕಪುರ ಚಲೋ ವೇಳೆ ಬಿಜೆಪಿ ನಾಯಕರ ಆಕ್ರೋಶ
ಕನಕಪುರ ಚಲೋ
  • News18
  • Last Updated: January 13, 2020, 12:43 PM IST
  • Share this:
ಕನಕಪುರ(ಜ. 13): ಕಪಾಲಬೆಟ್ಟದಲ್ಲಿ ಬೃಹತ್ ಏಸು ಪ್ರತಿಮೆ ನಿರ್ಮಾಣವಾಗುತ್ತಿರುವುದನ್ನು ಆಕ್ಷೇಪಿಸಿ ಹಿಂದೂಪರ ಸಂಘಟನೆಗಳು ಇಂದು ಬೃಹತ್ ಜಾಥಾ ನಡೆಸುತ್ತಿವೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಎಂಎಲ್​ಸಿ ಅಶ್ವಥ್ ನಾರಾಯಣ್ ಅವರು ಕನಕಪುರದಲ್ಲಿ ಕ್ರೈಸ್ತ ಮತಾಂತರ ಸಮಸ್ಯೆಯನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನಕಪುರ ಸುತ್ತಮುತ್ತ ಮತಾಂತರ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಎರಡು ಎಕರೆ ಜಮೀನಿನ ಆಸೆ ತೋರಿಸಿ ಮುಗ್ಧ ಜನರನ್ನು ಮತಾಂತರ ಮಾಡುತ್ತಿದ್ದಾರೆ. ವ್ಯಾಟಿಕನ್ ರಾಣಿಯ ಓಲೈಕೆಗೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಹಿಂದೂ ಜನ ಬೆಟ್ಟವನ್ನೇ ಮತಾಂತರ ಮಾಡುತ್ತಿದ್ದಾರೆ. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಜಾಥಾ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ

ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಹೇಳಿದ ಅವರು, ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಾಥಾ ಆರಂಭಿಸಿ, ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ಧೇವೆ ಎಂದಿದ್ದಾರೆ.

ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ನಡೆಸಲಾಗುತ್ತಿರುವ ಕನಕಪುರ ಚಲೋ ಮೆರವಣಿಗೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್, ಸಿ.ಪಿ. ಯೋಗೇಶ್ವರ್ ಮೊದಲಾದವರು ಪಾಲ್ಗೊಂಡಿದ್ದಾರೆ. ‘ಕಪಾಲಬೆಟ್ಟ ಉಳಿಸಿ’ ಎಂಬಿತ್ಯಾದಿ ಬಿತ್ತಿಫಲಕಗಳು, ಹಿಂದೂಪರ ಜೈಕಾರ ಘೋಷಣೆಗಳು ವ್ಯಕ್ತವಾಗಿವೆ.

ಹಿಂದೂ ಜಾಗರಣ ವೇದಿಕೆಯ ಮೆರವಣಿಗೆಗೆ ಪೊಲೀಸರು ಬಿಗಿ ಪೊಲೀಸ್ ಭದ್ರತೆ ನೀಡಿದ್ಧಾರೆ. ಬೈಕ್ ಜಾಥಾ ಅಕ್ಕಪಕ್ಕ ಪೊಲೀಸರ ನಿಯೋಜನೆಯಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ