Congressನವರು ಹುಟ್ಟು ಕುಡುಕರು: BJP ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ

ಕಾಂಗ್ರೆಸ್ ನಲ್ಲಿ ಯಾರು ಮದ್ಯ ಸೇವನೆ ಮಾಡಲ್ಲ ಅಂತ ನನಗೆ ತೋರಿಸಿ. ಕಾಂಗ್ರೆಸ್ ನವರು ಹುಟ್ಟು  ಕುಡುಕರಾಗಿದ್ದು, ಮದ್ಯ ಸೇವಿಸದಿದ್ರೆ ಅವರಿಗೆ ನಿದ್ದೆ ಬರಲ್ಲ ಎಂದರು.

ಛಲವಾದಿ ನಾರಾಯಣಸ್ವಾಮಿ

ಛಲವಾದಿ ನಾರಾಯಣಸ್ವಾಮಿ

  • Share this:
ಬೆಂಗಳೂರು: ಕಾಂಗ್ರೆಸ್ (Congress) ನವರು ಹುಟ್ಟು ಕುಡುಕರು. ಅವರಿಗೆ ಕುಡಿಯಲಿಲ್ಲ ಅಂದ್ರೆ ರಾತ್ರಿ ನಿದ್ದೆ ಬರಲ್ಲ. ಇದನ್ನು‌ ನಾನು ನೋಡಿ ಬಂದಿದ್ದೇನೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ (Chalavadai Narayanaswamy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಕುಡುಕರಿಗೆ ಟಿಕೆಟ್ ಇಲ್ಲಾ ಅಂತಾ ಆದರೆ ಕಾಂಗ್ರೆಸ್ ನಲ್ಲಿ ೨೨೪ ಕ್ಷೇತ್ರಗಳಿಗೂ ಅಭ್ಯರ್ಥಿಗಳೇ ಸಿಗುವುದಿಲ್ಲ. ಕುಡಿಯಬಾರದು ಅಂತಾ ಹೇಳಿ ಬೆಳಗ್ಗಿನಿಂದ‌ ರಾತ್ರಿಯವರೆಗೂ ಕುಡಿಯೋದು. ಕಾಂಗ್ರೆಸ್ ಗಾಗಿಯೇ‌ ಮುಸ್ಲಿಮರು (muslim) ಹುಟ್ಟಿದ್ದಾರೆ ಅಂತಾ ಅಂದುಕೊಂಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಅತ್ಯಂತ ಸಂತೃಷ್ಟರಾಗಿರುವವರು ಮುಸ್ಲಿಮರು ಎಂದು ಹೇಳಿದರು.

ಕಾಂಗ್ರೆಸ್ ಭಯಕ್ಕೆ ಮುಸ್ಲಿಮರು ಬಿಜೆಪಿಗೆ ಬರುತ್ತಿಲ್ಲ

ಕಾಂಗ್ರೆಸ್ ಭಯಕ್ಕೆ ಮುಸ್ಲಿಮರು ಬಿಜೆಪಿಗೆ ಬರುತ್ತಿಲ್ಲ. ಕಾಂಗ್ರೆಸ್ ಬಂಡವಾಳ ಈಗ ಮುಸ್ಲಿಮರಿಗೂ ಗೊತ್ತಾಗಿದೆ. ಅಂತ್ಯ ಸಂಸ್ಕಾರಕ್ಕೆ ಕೆಲವರು ಬೇಕು ಎಂಬ ಕಾರಣಕ್ಕೆ ಕೆಲವರು ಕಾಂಗ್ರೆಸ್ ನಲ್ಲಿ ಉಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾವು ಯವ ಮೋರ್ಚಾಗೆ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಎಲ್ಲರನ್ನು ಸಮಾನತೆಯಿಂದ ಕಾಣುವ ಉದ್ದೇಶದಿಂದ ಈ ಆಯ್ಕೆಯೇ ಹೊರತು ತೋರಿಕೆಗೆ ಅಲ್ಲ.

ಇದನ್ನೂ ಓದಿ:  Rahul Gandhi ಬಗ್ಗೆ ಗೌರವ ಇದೆ, ಹಾಗೆ ಮಾತಾಡಬಾರದು: ಕಟೀಲ್ ಹೇಳಿಕೆಗೆ ಯಡಿಯೂರಪ್ಪ ಅಸಮಾಧಾನ

ಕಾಂಗ್ರೆಸ್ ಸಾಮಾಜಿಕ ನ್ಯಾಯ ಅಂತ ಹೇಳಿ ಕೆಲಸ ಮಾಡಲ್ಲ. ನಾವು ಹೇಳಲ್ಲ ಆದ್ರೆ ನಾವು ಸಾಮಾಜಿಕ ನ್ಯಾಯ ಪರ ಕೆಲಸ ಮಾಡುತ್ತೇವೆ. ಜಾತಿ ರಾಜಕಾರಣ ಮಾಡುತ್ತಿರೋದು ಮಾಜಿ ಸಿಎಂ ಸಿದ್ದರಾಮಯ್ಯ. ಬೇಕಾದ್ರೆ ಜಾತಿ ರಾಜಕಾರಣ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಸವಾಲು ಹಾಕಿದರು.

ಮುಸ್ಲಿಮರಿಗಾಗಿ ಕಾಂಗ್ರೆಸ್ ಮಾಡಿದ್ದೇನು?

ಧರ್ಮ ಮತ್ತು ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುತ್ತಿದ್ದಾರೆ. ತಮ್ಮ ಸಮುದಾಯದ ನಾಯಕರನ್ನೇ ಸಿದ್ದರಾಮಯ್ತಯ ಸಂಹಾರ ಮಾಡಿದ್ದಾರೆ ಎಂದು ಆರೋಪಿಸಿದರು. ಮುಸ್ಲಿಮರು ಕಾಂಗ್ರೆಸ್ ಗಾಗಿ ಹುಟ್ಟಿದ್ದಾರೆ ಅಂತ ತಿಳಿದವರು ನೀವು ಆ ಸಮುದಾಯಕ್ಕೆ ಮಾಡಿದ ಕೆಲಸವಾದರೂ ಏನು ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಒಮ್ಮೆಯೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ಮಾಡಲಿಲ್ಲ ಎಂದರು. ಬಿಜೆಪಿ  ಅಧಿಕಾರವಧಿಯಲ್ಲಿ ಮುಸ್ಲಿಮರು ಸಂತೃಷ್ಟರಾಗಿದ್ದು, ನಾವ್ಯಾರು ಮುಸ್ಲಿಮರ ವಿರೋಧಿಗಳಲ್ಲ ಎಂದು ಒತ್ತಿ ಒತ್ತಿ ಹೇಳಿದರು.

ರಾಹುಲ್ ಗಾಂಧಿ ಖಾದಿ ಬಟ್ಟೆ ಹಾಕ್ತಾರಾ?

2007ರಲ್ಲಿ ಕಾಂಗ್ರೆಸ್ ಪಕ್ಷ ಆಂತರಿಕ ನಿಯಮಗಳನ್ನು ತಂದಿತ್ತು ಎಂದು ಪುಸ್ತಕ ತೋರಿಸಿದರು. ಮೊದಲನೇಯದ್ದು ಖಾದಿ ಬಟ್ಟೆ ಧರಿಸಬೇಕು. ಆದ್ರೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರೇ ಈ ನಿಯಮ ಪಾಲಿಸಲ್ಲ. ಯಾವಾಗ ನೋಡಿದರು ರಾಹುಲ್ ಗಾಂಧಿ ಅವರು ಜೀನ್ಸ್- ಟೀ ಶರ್ಟ್ ಧರಿಸುತ್ತಾರೆ  ಅಲ್ವಾ ಎಂದರು. ಅದೇ ರೀತಿ ಮುಂದುವರಿದು ಎರಡನೇ ನಿಯಮ ಮದ್ಯಪಾನ ಮಾಡಬಾರದು. ಕಾಂಗ್ರೆಸ್ ನಲ್ಲಿ ಯಾರು ಮದ್ಯ ಸೇವನೆ ಮಾಡಲ್ಲ ಅಂತ ನನಗೆ ತೋರಿಸಿ. ಕಾಂಗ್ರೆಸ್ ನವರು ಹುಟ್ಟು  ಕುಡುಕರಾಗಿದ್ದು, ಮದ್ಯ ಸೇವಿಸದಿದ್ರೆ ಅವರಿಗೆ ನಿದ್ದೆ ಬರಲ್ಲ ಎಂದರು.

ಇದನ್ನೂ ಓದಿ:  Rahul Gandhi ಡ್ರಗ್​ ಪೆಡ್ಲರ್​ ಎಂಬ ಹೇಳಿಕೆ: ಬಿಜೆಪಿ ಅಧ್ಯಕ್ಷ ಕಟೀಲ್​ ಒಬ್ಬ ಅವಿವೇಕಿ ಎಂದ ಗುಂಡೂರಾವ್​

ರಾಹುಲ್ ಗಾಂಧಿ ಕುರಿತು ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್(Drug Addict), ಡ್ರಗ್  ಪೆಡ್ಲರ್(Drug Peddler) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP State President Nalin Kumar Kateel) ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದರು. ಹುಬ್ಬಳ್ಳಿ(Hubli)ಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಸಭೆ(Pre-Poll Election preparation meeting)ಯಲ್ಲಿ ಮಾತನಾಡಿದ್ದ ಕಟೀಲ್, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(National Congress President)ರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..?ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸ್ತಾರೆ ಎಂದು ಕಿಡಿಕಾರಿದ್ದರು.
Published by:Mahmadrafik K
First published: