B S Yediyurappa: ಏಕಾಂಗಿಯಾದ್ರಾ ಯಡಿಯೂರಪ್ಪ? BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

ಬಿಡಿಎ ಹಗರಣದ ಕುರಿತು ಪ್ರಕರಣ ದಾಖಲಾದ ನಂತರ ಬಿ.ಎಸ್ ಯಡಿಯೂರಪ್ಪ ಅವರು  ಏಕಾಂಗಿಯಾದ್ರಾ ಅನ್ನೋ ಮಾತು ಶುರುವಾಗಿದೆ. ಅವರು ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಯಾವೊಬ್ಬ ಸ್ಥಳೀಯ ನಾಯಕರೂ ಇಲ್ಲದೇ ಇದ್ದದ್ದು ಚರ್ಚೆಗೆ ಗ್ರಾಸವಾಗಿದೆ.

ಬಿ. ಎಸ್​ ಯಡಿಯೂರಪ್ಪ

ಬಿ. ಎಸ್​ ಯಡಿಯೂರಪ್ಪ

  • Share this:
ಹುಬ್ಬಳ್ಳಿ (ಸೆ.18): ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಏಕಾಂಗಿ ಆದ್ರಾ? ಅನ್ನೋ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಯಡಿಯೂರಪ್ಪ ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಯಾವೊಬ್ಬ ಸ್ಥಳೀಯ ನಾಯಕರು ಅತ್ತ ಸುಳಿಯದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಸಂದರ್ಭದಲ್ಲಿ ಒಬ್ಬ ಸ್ಥಳೀಯ ಬಿಜೆಪಿ ನಾಯಕರೂ (BJP Leaders) ಸಹ ಸ್ವಾಗತಕ್ಕೆ ಬಂದಿರಲಿಲ್ಲ.

ಬಿಎಸ್​ವೈ ಸ್ವಾಗತಕ್ಕೆ ಬರಲಿಲ್ಲ ನಾಯಕರು

ಬಿಜೆಪಿ ನಗರ ಘಟಕ ಮತ್ತು ಘಟಕ ಅಧ್ಯಕ್ಷರು ಸೇರಿ ಯಾರೊಬ್ಬರೂ ಬಂದಿರಲಿಲ್ಲ. ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮುಖಂಡರು ಭಾಗಿಯಾಗಿದ್ದರು. ಪ್ರಹ್ಲಾದ ಜೋಶಿ, ಜಗದೀಶ್ ಶೆಟ್ಟರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನಾಯಕರು ಬಿಜಿಯಾಗಿದ್ದರು. ಬೆಳಗಾವಿ ಜಿಲ್ಲೆಯ ಕೆಲ ನಾಯಕರು ಆಗಮಿಸಿ ಯಡಿಯೂರಪ್ಪರನ್ನು  ಏರ್ ಪೋರ್ಟ್ ನಿಂದ ಕರೆದೊಯ್ದರು.ಏಕಾಂಗಿಯಾದ್ರಾ ರಾಜಾಹುಲಿ!

ಪ್ರತಿ ಬಾರಿ ಯಡಿಯೂರಪ್ಪ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದಾಗ ಜನಜಂಗುಳಿ ವಾತಾವರಣ ಇರ್ತಿತ್ತು. ಬಿಜೆಪಿ ನಾಯಕರು ಅಭೂತಪೂರ್ವ ಸ್ವಾಗತ ಕೋರುತ್ತಿದ್ದರು. ಆದರೆ ಈ ಬಾರಿ ಯಾರೊಬ್ಬರೂ ಬಾರದೇ ಇರೋದು ಅಚ್ಚರಿಗೆ ಕಾರಣವಾಗಿದೆ. ಬಿಡಿಎ ಹಗರಣದ ಕೇಸ್​ ಬಳಿಕ ನಾಯಕರು, ಯಡಿಯೂರಪ್ಪ ಅವರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ. ರಾಜಾಹುಲಿ ಏಕಾಂಗಿಯಾದ್ರಾ ಅನ್ನೋ ಚರ್ಚೆ ನಡೆದಿದೆ.

ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜನ ಬಿಜೆಪಿ, ಮೋದಿ ಪರ ಇದ್ದಾರೆ. ಕಾಂಗ್ರೆಸ್ ನವರು ಏನ್ ಮಾಡಿದ್ರು ಅಧಿಕಾರಕ್ಕೆ ಬರಲ್ಲ ಎಂದರು. ಭಾರತ ಜೊಡೋ, ರಥಯಾತ್ರೆ ಅಂತ ಏನ್ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.

ವಿಮ್ಸ್ ಪ್ರಕರಣದ ಬಗ್ಗೆ ತುಟಿ ಬಿಚ್ಚದ BSY

ನಾನು 22 ರಿಂದ ರಾಜ್ಯ ಪ್ರವಾಸ ಮಾಡ್ತೀನಿ. ಬೈಲಹೊಂಗಲದಲ್ಲಿ ಕಾರ್ಯಕ್ರಮ ಇದೆ. ಮುಗಿಸಿ ಬೆಂಗಳೂರಿಗೆ ಹೋಗ್ತೀನಿ ಎಂದು ಯಡಿಯೂರಪ್ಪ ತಿಳಿಸಿದರು. ವಿಮ್ಸ್ ನಲ್ಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೀತಿದೆ, ನೋಡೋಣ ಎಂದರು. ವಿಮ್ಸ್ ಸಾವು ಸರ್ಕಾರಕ್ಕೆ ನಷ್ಟ ಆಗಿಲ್ವಾ ಅನ್ನೋ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯಿಸದೆ ಹೊರಟು ಹೋದರು.

ಇದನ್ನೂ ಓದಿ:  Crime News: ರುಂಡವಿಲ್ಲದ ಶವ ಪತ್ತೆ ಪ್ರಕರಣದ ಆರೋಪಿ ಅರೆಸ್ಟ್; ಮುಂಬೈನಲ್ಲಿ ಕೊಲೆಯಾಗಿದ್ದು ಬೆಳಗಾವಿಯ ಮಹಿಳೆ

ಮೋದಿ ಹುಟ್ಟು ಹಬ್ಬದಲ್ಲಿ ಬ್ಯುಸಿಯಾದ ನಾಯಕರು

ಇತ್ತ ಯಡಿಯೂರಪ್ಪ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ಬಂದಿಳಿದರೆ, ಅತ್ತ ಬಿಜೆಪಿ ಘಟಾನುಘಟಿ ನಾಯಕರು ಮೋದಿ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಮೂರು ಸಾವಿರ ಮಠ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.

ಇದನ್ನೂ ಓದಿ: Karnataka Congress: ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ; ಡಿಕೆ ಶಿವಕುಮಾರ್​ಗೆ ಸಲಹೆ ಕೊಟ್ಟ ದಿನೇಶ್ ಗುಂಡೂರಾವ್

ಆರೋಗ್ಯ ತಪಾಸಣಾ ಶಿಬಿರ

ಕ್ಯಾನ್ಸರ್ ನಿಂದ ಹಿಡಿದು ವಿವಿಧ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ನೂರಾರು ಜನ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಿಕಿತ್ಸೆ ಪಡೆದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತಿತರರು ಭಾಗಿಯಾಗಿದ್ದರು. ಧಾರವಾಡ ಲೋಕಸಭಾ ಕ್ಷೇತ್ರದ ವಿವಿದೆಡೆ ಒಂದು ವಾರಗಳ ಕಾಲ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
Published by:ಪಾವನ ಎಚ್ ಎಸ್
First published: