ಹಾಸನ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಿಜೆಪಿ ನಾಯಕ (BJP Leader)ತಮ್ಮ ಕಾರಿನ ಚಾಲಕನ ಜೊತೆ ಸೇರಿ ಅಟ್ಟಾಡಿಸಿ ಹೊಡೆದಿದ್ದ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದ್ದು. ಅರಸೀಕೆರೆ ತಾಲೂಕು ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ವಿಜಯ್ ಕುಮಾರ್ ಹಾಗೂ ತಮ್ಮ ಕಾರಿನ ಚಾಲಕನ ಜೊತೆ ಸೇರಿ ಲಾಟಿಯಿಂದ ಹಿಗ್ಗಾಮುಗ್ಗ ಥಳಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ (Social Media) ಭಾರಿ ವೈರಲ್ ಆಗಿತ್ತು. ಇದೀಗ ಅರಸೀಕೆರೆ ಪೊಲೀಸರು ವಿಜಯ್ ಕುಮಾರ್ ಹಾಗೂ ಕಾರಿನ ಚಾಲಕನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಸನ್ 307 ಅಡಿ ಪ್ರಕರಣ ದಾಖಲಿಸಲಾಗಿದೆ.
ಬುಧವಾರ ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್ ಎಂಬಾತನ ಮೇಲೆ ವಿಜಯ್ ಕುಮಾರ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಥಳಿಕ್ಕೊಳಗಾಗಿದ್ದ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಕುರಿತು ಅರಸೀಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭೂತ್ ವಿಜಯ್ ಅಭಿಯಾನದಲ್ಲಿ ಅವಮಾನ
ಬಿಜೆಪಿಯ ಭೂತ್ ವಿಜಯ್ ಅಭಿಯಾನ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವು ಜನರಿಂದ ವಿಜಯ್ ಕುಮಾರ್ಗೆ ಅವಮಾನವಾಗಿತ್ತು. ಈ ವಿಡಿಯೋವನ್ನು ಕುಮಾರ್ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿದ್ದರು ಎನ್ನುವ ಕಾರಣಕ್ಕೆ ಅರಸೀಕೆರೆ ನಗರಸಭೆ ಎದುರು, ಪೊಲೀಸ್ ಠಾಣೆಯ ಅಣತಿ ದೂರದಲ್ಲಿ ಹಲ್ಲೆ ಮಾಡಲಾಗಿದೆ. ನೂರಾರು ಜನರ ಎದುರಲ್ಲಿ ಹಾಡು ಹಗಲೇ ಸವಿತಾ ಸಮಾಜದ ಪ್ರತಿನಿಧಿಯಾಗಿದ್ದ ಕುಮಾರ್ ಎಂಬುವನ ಮೇಲೆ ರಕ್ತ ಸೋರುತಿದ್ದರು ಬಿಡದೇ ಬಿಜೆಪಿ ನಾಯಕ ಅಣ್ಣನಾಯಕನಹಲ್ಳಿ ವಿಜಿ ಕುಮಾರ್ ಹಲ್ಲೆ ಮಾಡಿದ್ದಾರೆ.
ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ಕುಮಾರ್
ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಅರಸೀಕೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್.ಆರ್.ಸಂತೋಷ ಬಣ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿದೆ. ಗಾಯಗೊಂಡಿರುವ ಎನ್.ಆರ್ ಕುಮಾರ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಇತ್ತೀಚೆಗೆ ಬಿಜೆಪಿಯ ಬೂತ್ ವಿಜಯ್ ಅಭಿಯಾನ ನಿಮಿತ್ತ ಗ್ರಾಮಗಳಿಗೆ ತೆರಳಿದ್ದ ವೇಳೆ ಕೆಲವು ಜನರಿಂದ ವಿಜಯ್ ಕುಮಾರ್ಗೆ ಅವಮಾನವಾಗಿತ್ತು. ಆ ಘಟನೆ ವಿಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಕ್ಕಾಗಿ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ
ಸಾಮಾಜಿಕ ಜಾಲಾತಾಣದಲ್ಲಿ ತಮಗೆ ಅವಮಾನವಾಗಿರುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಕ್ಕೆ ಕುಪಿತಗೊಂಡಿದ್ದ ವಿಜಯ್ ಕುಮಾರ್ ಕುಪಿತಗೊಂಡು ಬುಧವಾರ ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರು ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದರು. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಕುಮಾರ್ ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
#BJPvsBJP ಕಚ್ಚಾಟವು ಅಕ್ಷರಶಃ ಬೀದಿ ಕಾಳಗವಾಗಿ ಪರಿಣಮಿಸಿದೆ.
ಹಾಸನದಲ್ಲಿ ಬಿಜೆಪಿ ಮುಖಂಡ ಬಿಜೆಪಿ ಕಾರ್ಯಕರ್ತನನ್ನೇ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಅದೇನೋ ಚಪ್ಪಲಿ, ಸಭೆ ಎನ್ನುತ್ತಿದ್ದ @nalinkateel ಅವರೇ,
ನಿಮ್ಮವರು ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದೋ ಅಥವಾ ಮುದ್ದಾಡಿಕೊಳ್ಳುತ್ತಿರುವುದೋ? pic.twitter.com/lsVyN1tYLk
— Karnataka Congress (@INCKarnataka) January 26, 2023
ಕಾಂಗ್ರೆಸ್ ಟೀಕೆ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ರಾಜ್ಯ ಕಾಂಗ್ರೆಸ್ ಕೂಟ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. BJPvsBJP ಕಚ್ಚಾಟವು ಅಕ್ಷರಶಃ ಬೀದಿ ಕಾಳಗವಾಗಿ ಪರಿಣಮಿಸಿದೆ. ಹಾಸನದಲ್ಲಿ ಬಿಜೆಪಿ ಮುಖಂಡ ಬಿಜೆಪಿ ಕಾರ್ಯಕರ್ತನನ್ನೇ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅದೇನೋ ಚಪ್ಪಲಿ, ಸಭೆ ಎನ್ನುತ್ತಿದ್ದ ನಳಿನ್ ಕುಮಾರ್ ಕಟೀಲ್ ಅವರೇ
ನಿಮ್ಮವರು ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದೋ ಅಥವಾ ಮುದ್ದಾಡಿಕೊಳ್ಳುತ್ತಿರುವುದೋ? ಎಂದು ಬರೆದುಕೊಂಡು ಬಿಜೆಪಿ ಕಾಲೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ