ಮೈತ್ರಿ ಉರುಳಲು ಸಿದ್ದರಾಮಯ್ಯ ನೇರ ಕಾರಣ, ಅವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ; ಬಿಜೆಪಿ ನಾಯಕ ಪುಟ್ಟಸ್ವಾಮಿ ಕಿಡಿ

ಹೆಚ್​. ಡಿ. ಕುಮಾರಸ್ವಾಮಿ ಘೋಷಿತ ಮುಖ್ಯಮಂತ್ರಿಯಾಗಿದ್ದರು. ಆದರೆ ರೇವಣ್ಣ ಅಘೋಷಿತ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲದಿರುವುದರಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ- ಪುಟ್ಟಸ್ವಾಮಿ

Vinay Bhat | news18-kannada
Updated:November 24, 2019, 4:58 PM IST
ಮೈತ್ರಿ ಉರುಳಲು ಸಿದ್ದರಾಮಯ್ಯ ನೇರ ಕಾರಣ, ಅವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ; ಬಿಜೆಪಿ ನಾಯಕ ಪುಟ್ಟಸ್ವಾಮಿ ಕಿಡಿ
ಬಿ.ಜೆ.ಪುಟ್ಟಸ್ವಾಮಿ
  • Share this:
ಬೆಂಗಳೂರು (ನ. 24): ಮೈತ್ರಿ ಸರ್ಕಾರ ಉರುಳಲು ಮಾಜಿ ಸಿಎಂ ಸಿದ್ದರಾಮಯ್ಯ ನೇರ ಕಾರಣ . ಸಿಎಂ ಆಗಲಿಲ್ಲ ಎಂಬ ಅತೃಪ್ತರು ಅವರು. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬಂದಿದ್ದಾರೆ ಎಂದು ಬಿಜೆಪಿ ನಾಯಕ ಬಿ.ಜೆ. ಪುಟ್ಟಸ್ವಾಮಿ ಟೀಕಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್​ ಪರ ಮತ ಪ್ರಚಾರದಲ್ಲಿ ಭಾಗಿಯಾಗಿರುವ ಪುಟ್ಟಸ್ವಾಮಿ, ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಹಿಂದಕ್ಕಾಗಿ ಸಿದ್ದರಾಮಯ್ಯ ಏನೂ ಮಾಡಲಿಲ್ಲ ಎಂದು ಪುಟ್ಟಸ್ವಾಮಿ ಕಿಡಿಕಾರಿದರು.

ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​

"ಯಶವಂತಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಗೆಲುವು ಸಾಧಿಸುವುದು ನೂರಕ್ಕೆ ನೂರು ಸತ್ಯ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ನಾವು 15ಕ್ಕೆ 15 ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ಮಾಜಿ ಸಿಎಂ ಎಚ್​ಡಿಕೆ ವಿರುದ್ಧವೂ ಬಿಜೆಪಿ ನಾಯಕ ಪುಟ್ಟಸ್ವಾಮಿ ಕಿಡಿಕಾರಿದರು. "ಹೆಚ್​. ಡಿ. ಕುಮಾರಸ್ವಾಮಿ ಘೋಷಿತ ಮುಖ್ಯಮಂತ್ರಿಯಾಗಿದ್ದರು. ಆದರೆ ರೇವಣ್ಣ ಅಘೋಷಿತ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲದಿರುವುದರಿಂದ ನಾವು  ಅಧಿಕಾರಕ್ಕೆ ಬಂದಿದ್ದೇವೆ," ಎಂದು ಪುಟ್ಟಸ್ವಾಮಿ ಹೇಳಿದರು.

ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭ?; ವಸ್ತು ಸ್ಥಿತಿ ಹೇಳುವುದು ನನ್ನ ಗುಣ; ಹೆಚ್.ವಿಶ್ವನಾಥ್​

ಮಾತು ಮುಂದುವರೆಸಿದ ಅವರು, "ಇಂದು ಹಿಂದುಳಿದ ವರ್ಗದವರ ಸಭೆ ಮಾಡಿದ್ದೇವೆ. 30ನೇ ತಾರೀಖು ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಮೂಲಕ ಹಿಂದುಳಿದ ವರ್ಗದವರನ್ನು ಸೆಳೆಯುತ್ತೇವೆ." ಎಂದರು. ಆ ಮೂಲಕ ಹಿಂದುಳಿದ ವರ್ಗದ ಮತ ಸೆಳೆಯುವ ತಂತ್ರ ರೂಪಿಸಿರುವುದಾಗಿ ಪರೋಕ್ಷವಾಗಿ ಹೇಳಿದರು.
First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ