• Home
  • »
  • News
  • »
  • state
  • »
  • Anekal: ರೋಲ್​ಕಾಲ್​ ನೀಡುವಂತೆ ಬಿಜೆಪಿ ಮುಖಂಡನ ಗೂಂಡಾಗಿರಿ; ಪಟಾಕಿ ಅಂಗಡಿ ಮಾಲೀಕರ ಮೇಲೆ ಹಲ್ಲೆ!

Anekal: ರೋಲ್​ಕಾಲ್​ ನೀಡುವಂತೆ ಬಿಜೆಪಿ ಮುಖಂಡನ ಗೂಂಡಾಗಿರಿ; ಪಟಾಕಿ ಅಂಗಡಿ ಮಾಲೀಕರ ಮೇಲೆ ಹಲ್ಲೆ!

ಪಟಾಕಿ ಮಾಲೀಕರ ಮೇಲೆ ಹಲ್ಲೆ

ಪಟಾಕಿ ಮಾಲೀಕರ ಮೇಲೆ ಹಲ್ಲೆ

ಪಟಾಕಿ ಮಳಿಗೆ ಬಳಿ ಗುಂಪೊಂದು ಏಕಾಏಕಿ ಯುವಕರಿಬ್ಬರ ಮೇಲೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಪಟಾಕಿ ಮಳಿಗೆ ಮಾಲೀಕ ರಾಮಸ್ವಾಮಿರವರ ಮಕ್ಕಳಾದ ಕಿರಣ್ ಮತ್ತು ಹರೀಶ್ ಹಲ್ಲೆಗೊಳಗಾದವರು.

  • News18 Kannada
  • Last Updated :
  • Karnataka, India
  • Share this:

ಆನೇಕಲ್ (ಅ.25) : ಎಲ್ಲರೂ ಪಟಾಕಿ ಸಿಡಿಸಿ ಬೆಳಕಿನ ಹಬ್ಬ ದೀಪಾವಳಿ (Deepavali) ಆಚರಣೆ ಮುಳುಗಿದ್ದರು. ಆದ್ರೆ ಇಲ್ಲೊಂದು ಪಟಾಕಿ ಅಂಗಡಿಯವರು ರೋಲ್ ಕಾಲ್ ಮತ್ತು ಬಿಟ್ಟಿ ಪಟಾಕಿ (Firecracker) ನೀಡಲಿಲ್ಲ ಎಂದು ಬಿಜೆಪಿ ಮುಖಂಡ (BJP Leader) ಮತ್ತು ಹಾಲಿ ಪುರಸಭೆ ಸದಸ್ಯೆ (Member of Municipal Council ಪತಿಯೊಬ್ಬ ಪುಂಡರನ್ನು ಕರೆದೊಯ್ದು ಅಂಗಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪರಾರಿಯಾಗಿದ್ದಾರೆ. 


ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೊಸೂರು ಮುಖ್ಯರಸ್ತೆ ನೆರಳೂರು ಬಳಿ ಸ್ಥಳೀಯ ನಿವಾಸಿ ರಾಮಸ್ವಾಮಿ ಎಂಬುವವರ ಪಟಾಕಿ ಮಳಿಗೆ ಬಳಿ ಗುಂಪೊಂದು ಏಕಾಏಕಿ ಯುವಕರಿಬ್ಬರ ಮೇಲೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಪಟಾಕಿ ಮಳಿಗೆ ಮಾಲೀಕ ರಾಮಸ್ವಾಮಿರವರ ಮಕ್ಕಳಾದ ಕಿರಣ್ ಮತ್ತು ಹರೀಶ್ ಹಲ್ಲೆಗೊಳಗಾದವರು. ಕಳೆದೊಂದು ವಾರದಿಂದ ಪಟಾಕಿ ಮಾರಾಟ ಮಾಡಿದ್ದ ರಾಮಸ್ವಾಮಿ ನಿನ್ನೆ ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆ ಅಂಗಡಿ ಕ್ಲೋಸ್ ಮಾಡಿದ್ದಾರೆ.




ಕಿರಣ್ ಮತ್ತು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ


ಆದ್ರೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಗಮಿಸಿದ, ತೇಜಸ್, ಹರೀಶ್ ಗುರುರಾಜ್ ಸೇರಿದಂತೆ ಹತ್ತಕ್ಕೂ ಅಧಿಕ‌ ಮಂದಿ ನಾವು ಲೋಕಲ್ ನಮಗೆ ರೋಲ್ ಕಾಲ್ ಕೊಡಬೇಕು. ಜೊತೆಗೆ ಬಿಟ್ಟಿ ಪಟಾಕಿ ನೀಡಬೇಕು ಎಂದು ಅವಾಜ್ ಹಾಕಿದ್ದಾರೆ. ಅಂಗಡಿ ಕ್ಲೋಸ್ ಮಾಡಿದ್ದು, ಬೆಳಗ್ಗೆ ಬನ್ನಿ ಎಂದಿದ್ದಾರೆ ‌ ಅಷ್ಟಕ್ಕೆ ಅಂಗಡಿ ಬಳಿಯಿದ್ದ ರಾಮಸ್ವಾಮಿ ರವರ ಮಕ್ಕಳಾದ ಕಿರಣ್ ಮತ್ತು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.


ಇದನ್ನೂ ಓದಿ: Surya Grahana: ಗ್ರಹಣದ ಬಳಿಕ ಮನೆ, ದೇಗುಲಗಳ ಶುದ್ಧೀಕಾರ್ಯ; ದೇವರಿಗೆ ವಿಶೇಷ ಪೂಜೆ


ಕಿರಣ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು


ಬಳಿಕ ಸ್ಥಳಕ್ಕೆ ಬಂದ ಪುರಸಭೆ ಸದಸ್ಯೆ ಪತಿ ಚರಣ್ ಮತ್ತೆ ನಮ್ಮ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಘಟನೆಯಲ್ಲಿ ಕಿರಣ್ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ಹಲ್ಲೆಗೊಳಗಾದ ಕಿರಣ್ ತಾಯಿ ನಾಗರತ್ನಮ್ಮ ಆರೋಪಿಸಿದ್ದಾರೆ.


ಹೆದರಿಸಿ ಧಮ್ಕಿ ಹಾಕಿ ರೋಲ್ ಕಾಲ್


ಇನ್ನೂ ಲಾಂಗ್ ಮಚ್ಚುಗಳನ್ನು ಹಿಡಿದು ಹೊಸೂರು ಮುಖ್ಯ ರಸ್ತೆಯಲ್ಲಿರುವ ಪಟಾಕಿ ಅಂಗಡಿಗಳವರ ಬಳಿ ಹೆದರಿಸಿ ಧಮ್ಕಿ ಹಾಕಿ ರೋಲ್ ಕಾಲ್ ಮಾಡುವಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಸಹ ರೋಲ್ ಕಾಲ್ ನೀಡಿಲ್ಲ ಎಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರು, ಹಲವು ಬಾರಿ ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಪಟಾಕಿ ಅಂಗಡಿಗಳವರ ಮೇಲೆ ಲೋಕಲ್ ಗೂಂಡಾಗಳ ದಬ್ಬಾಳಿಕೆ ಹೆಚ್ಚಾಗಿದೆ. ಯಾರೂ ಕೇಳುವವರೆ ಇಲ್ಲದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಎಂದು ಹಲ್ಲೆಗೊಳಗಾದ ಹರೀಶ್ ಚಿಕ್ಕಪ್ಪ ಕೃಷ್ಣಪ್ಪ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Omicron Variants: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ BQ.1 ತಳಿ ಪತ್ತೆ; ಕರ್ನಾಟಕದಲ್ಲಿ ಎಚ್ಚರಿಕೆಯ ಮಾರ್ಗಸೂಚಿ ಪ್ರಕಟ


ಅಡ್ಡಗಟ್ಟಿ ಲಾಂಗ್​ನಿಂದ  ಹಲ್ಲೆ


ಒಟ್ನಲ್ಲಿ ಕಳೆದ ಎರಡು ದಿನಗಳ ಹಿಂದೆ ಪಟಾಕಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಚಂದ್ರಶೇಖರ್ ರೆಡ್ಡಿ ಎಂಬುವವರನ್ನು ಅಡ್ಡಗಟ್ಟಿ ಲಾಂಗ್ ನಿಂದ ಹಲ್ಲೆ ನಡೆಸಿ ಇಪ್ಪತ್ತು ಲಕ್ಷ ದೋಚಿದ್ದ ಪ್ರಕರಣ ಮಾಸುವ ಮುನ್ನವೇ, ನಿನ್ನೆ ರಾತ್ರಿ ಸಹ ರೋಲ್ ಕಾಲ್ ಗಾಗಿ ಪಟಾಕಿ ಅಂಗಡಿಯವರ ಮೇಲೆ ಹಲ್ಲೆ ನಡೆಸಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೋಲ್ ಕಾಲ್ ಸಂಸ್ಕೃತಿಗೆ ಆನೇಕಲ್ ಉಪವಿಭಾಗದ ಪೊಲೀಸರು ಬ್ರೇಕ್‌ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Published by:ಪಾವನ ಎಚ್ ಎಸ್
First published: