ಬೆಳಗಾವಿ (Belagavi): ಒಂದಿಬ್ಬರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಹಿರಿಯ ನಾಯಕರು, ಯೋಚನೆ ಮಾಡಬೇಕಿತ್ತು. ಆದರೆ ಬಿಜೆಪಿಯಲ್ಲಿ (BJP) ಕಾರ್ಯಕರ್ತರೇ ನಾಯಕರು, ಕಾರ್ಯಕರ್ತರೇ ನಾಯಕರಾಗುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಪಕ್ಷ ತೊರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಒಂದಿಬ್ಬರು ಪಕ್ಷ ಬಿಟ್ಟು ಹೋದರು, ಅವರು ಹಿರಿಯ ನಾಯಕರು ಯೋಚನೆ ಮಾಡಬೇಕಿತ್ತು. ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರಾಗುತ್ತಾರೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಟಿಕೆಟ್ ಸಿಗದ ಸಾಮಾನ್ಯ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತಾರೆ. ಹೀಗಾಗಿ ದೇಶಾದ್ಯಂತ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂದರು.
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ಉತ್ತರಾಖಂಡ್, ಗೋವಾ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಆದ್ರೆ ಕಾಂಗ್ರೆಸ್ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿದೆ ಎಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಸ್ಲಿಂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ನಿರಂತರ ಕೆಲಸ ಮಾಡುತ್ತಿದೆ. ಅವರ ಕಾಲದಲ್ಲಿ ಪಿಎಫ್ಐ ಜಾಲ ವಿಸ್ತಾರವಾಗಿತ್ತು. ಭಾರತ, ಭಾರತದ ಪ್ರಜಾಪ್ರಭುತ್ವಕ್ಕೆ ಬೈಯ್ಯುವ ರಾಹುಲ್ ಗಾಂಧಿಯವರ ಪಕ್ಷಕ್ಕೆ ಹೋಗೋದು ಅಂದ್ರೆ ಏನರ್ಥ? ನಿರಂತರವಾಗಿ ಮುಳುಗುತ್ತಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ಇದನ್ನೂ ಓದಿ: Jagadish Shettar: ಕಳೆದ 6 ಬಾರಿಗಿಂತ ಕಾಂಗ್ರೆಸ್ ಸೇರಿದ ನಂತರ ಹೆಚ್ಚಿನ ಜನಬೆಂಬಲ ಸಿಗುತ್ತಿದೆ: ಜಗದೀಶ್ ಶೆಟ್ಟರ್
ಬಿಜೆಪಿ ಕಾರ್ಯಕರ್ತರು ಒಂದು ವಿಚಾರಧಾರೆಗಾಗಿ ಕೆಲಸ ಮಾಡ್ತಾರೆ.
ಇನ್ನು ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಇದು ಸಹಜ, ಆದ್ರೆ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡ್ತಾರೆ. ಆದ್ರೆ ಎಲ್ಲರಿಗೂ ಟಿಕೆಟ್ ಹಂಚಿಕೆ ಮಾಡಲು ಆಗಲ್ಲ. ಯಾರಿಗೆ ಟಿಕೆಟ್ ಸಿಗಲ್ಲ ಅವರಿಗೆ ನೋವೂ ಆಗುತ್ತೆ, ಕಷ್ಟವೂ ಆಗುತ್ತೆ. ಬಿಜೆಪಿ ಕಾರ್ಯಕರ್ತರು ಒಂದು ವಿಚಾರಧಾರೆಗಾಗಿ ಕೆಲಸ ಮಾಡ್ತಾರೆ. ಸಮಾಜಸೇವೆ, ರಾಷ್ಟ್ರಸೇವೆ, ಪ್ರದೇಶ ಸೇವೆ ಅವರಿಗೆ ಸರ್ವಪ್ರಿಯ ಎಂದರು.
ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೆಲಸ ಮಾಡೋದು ಗರ್ವದ ಸಂಗತಿ ಎಂದ ಅರುಣ್ ಸಿಂಗ್, ದೇಶಾದ್ಯಂತ ಜನರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಕೆಲವು ಕಾರ್ಯಕರ್ತರ ಮನಸಿಗೆ ನೋವಾಗಿದ್ದು ಅವರಿಗೆ ತಿಳಿ ಹೇಳುತ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ