ಚಿಕ್ಕಮಗಳೂರು: ವಿಮಾನ ಪ್ರಯಾಣದ ವೇಳೆ ಎಮರ್ಜೆನ್ಸಿ ಡೋರ್ ಓಪನ್ (Emergency Door) ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಎಲ್ಲೆಡೆ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ತೇಜಸ್ವಿ ಸೂರ್ಯ ಮಾಡಿದ ಯಡವಟ್ಟು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ನಡೆಯನ್ನು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ (Annamalai) ಸಮರ್ಥಿಸಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ
ಕಾಫಿ ನಾಡು ಚಿಕ್ಕಮಗಳೂರಿಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ, ಸಂಸದ ತೇಜಸ್ವಿ ಸೂರ್ಯ ಅವರು ಡೋರ್ ಓಪನ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡರಲ್ಲದೇ, ಅದನ್ನ ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಸಂಸದ, ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್ ಮಾಡಿಲ್ಲ. ಅವರು ಕೂತಿದ್ದು ಎಮರ್ಜೆನ್ನಿ ಎಕ್ಸಿಟ್ ಸೀಟಿನಲ್ಲಿ, ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ ಎಂದು ಹೇಳಿದರು.
ಇದನ್ನೂ ಓದಿ: Tejasvi Surya: ಇಂಡಿಗೋ ವಿಮಾನದಲ್ಲಿ ತೇಜಸ್ವಿ ಸೂರ್ಯ ಫಜೀತಿ, ತುರ್ತು ನಿರ್ಗಮನ ದ್ವಾರ ಓಪನ್ ಮಾಡಿದ ಸಂಸದ!
ಮುಂದುವರಿದು ಮಾತನಾಡಿದ ಅವರು, ಅಲ್ಲಿ ಎಕ್ಸಿಟ್ ಡೋರ್ನಲ್ಲಿ ಬ್ಲಿಡಿಂಗ್ ಸ್ವಲ್ಪ ಓಪನ್ ಇತ್ತು, ಅದನ್ನ ಏರ್ ಹೋಸ್ಟೇಸ್ ಗಮನಕ್ಕೆ ತಂದ್ರು. ಪೈಲೆಟ್ ಬಂದು ಡಿ ಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು, ಅಲ್ಲಿ ತೇಜಸ್ವಿ ಸೂರ್ಯ ಅವರು ಇನ್ಸ್ಟೆಂಟ್ ರಿಪೋರ್ಟ್ ಕೊಟ್ರು. ತೇಜಸ್ವಿ ಸೂರ್ಯ ಅವರು ಡೋರ್ ಅನ್ನು ಪುಲ್ ಮಾಡಿಲ್ಲ, ಆದರೆ ತೇಜಸ್ವಿ ಸೂರ್ಯ ಅವರು ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಕ್ಷಮೆ ಕೋರಿದ್ದಾರೆ. ಇಂಡಿಗೋ ವಿಮಾನ ಸಂಸ್ಥೆಯವರು ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸ್ಟೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರಲ್ಲದೇ, ಕರ್ನಾಟಕ ಕಾಂಗ್ರೆಸ್ಗೆ ಮಾತನಾಡಲು ಬೇರೆ ವಿಷಯ ಇಲ್ಲ, ಹಾಗಾಗಿ ಇಂತಹಾ ವಿಷಯವನ್ನ ಮಾತನಾಡ್ತಿದ್ದಾರೆ ಎಂದು ಅಣ್ಣಾಮಲೈ ಟೀಕಿಸಿದರು.
ವಿಮಾನಯಾನ ಸಚಿವ ಹೇಳಿದ್ದೇನು?
ಇನ್ನು ತುರ್ತು ನಿರ್ಗಮನದ ಬಾಗಿಲನ್ನು ಆಕಸ್ಮಿಕವಾಗಿ ತೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಕ್ರಿಯೆ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ಆಗುವ ಮುನ್ನ ಈ ಘಟನೆ ನಡೆದಿದೆ. ಘಟನೆ ನಡೆದ ನಂತರ ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರೇ ವರದಿ ಮಾಡಿದ್ದಾರೆ. ಅದರ ಆಧಾರದ ಮೇಲೆ ಸಂಪೂರ್ಣ ಪ್ರೋಟೋಕಾಲ್ ಅನುಸರಿಸಲಾಗಿದೆ. ಡಿಜಿಸಿಎ ಸ್ವತಃ ಪರಿಶೀಲನೆ ನಡೆಸಿದ ಬಳಿಕವೇ ವಿಮಾನ ಟೇಕಾಫ್ ಆಗಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಕೂಡ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದ್ದಾರೆ.
ಏನಿದು ಘಟನೆ?
ಕಳೆದ 2022ರ ಡಿಸೆಂಬರ್ 10 ರಂದು ಚೆನ್ನೈ- ತಿರಿಚಿ ನಡುವಿನ ವಿಮಾನಯಾನದ ಬೋರ್ಡಿಂಗ್ ಪ್ರಕ್ರಿಯೆ ವೇಳೆ ಪ್ರಯಾಣಿಕರೊಬ್ಬರು 6E 7339 ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ಆಕಸ್ಮಿಕವಾಗಿ ತೆರೆದಿದ್ದರು. ಆ ಬಳಿಕ ವಿಮಾನದಲ್ಲೇ ಸಿಬ್ಬಂದಿ ಜೊತೆ ಕ್ಷಮೆಯಾಚಿಸಿ ಕ್ಷಮಾಪನಾ ಪತ್ರ ಬರೆದ ನಂತರ ವಿಮಾನ ಟೇಕಾಫ್ ಆಗಿತ್ತು ಅಂತ ಇಂಡಿಗೋ ವಿಮಾನಯಾನದ ಸಿಬ್ಬಂದಿ ತಿಳಿಸಿದ್ದರು. ಸುಮಾರು ಒಂದು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು, ಈ ವೇಳೆ ವಿಮಾನದ ತುರ್ತು ಬಾಗಿಲನ್ನು ಓಪನ್ ಮಾಡಿದ್ದು ಸಂಸದ ತೇಜಸ್ವಿ ಸೂರ್ಯ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ತೇಜಸ್ವಿ ಸೂರ್ಯರನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ