• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಕೇಸರಿ ಪಡೆಗೆ ಶಾಕ್ ಕೊಡ್ತಾರಾ ಮತ್ತೊಬ್ಬ ನಾಯಕ? ಹಿರಿಯ ಮುಖಂಡನನ್ನ ಸೆಳೆಯಲು ‘ಕೈ’ ಪ್ಲಾನ್!

Karnataka Politics: ಕೇಸರಿ ಪಡೆಗೆ ಶಾಕ್ ಕೊಡ್ತಾರಾ ಮತ್ತೊಬ್ಬ ನಾಯಕ? ಹಿರಿಯ ಮುಖಂಡನನ್ನ ಸೆಳೆಯಲು ‘ಕೈ’ ಪ್ಲಾನ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೀಗ ಯಾದಗಿರಿಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದ ಚಿಂಚನಸೂರ್ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿತ್ತು. ಚಿಂಚನಸೂರ್​ ಬೆನ್ನಲ್ಲೇ ಮತ್ತೋರ್ವ ನಾಯಕನನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.

  • Share this:

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಬುರಾವ್ ಚಿಂಚನಸೂರ್ (Baburao Chinchanasuru) ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದಾರೆ. ಯುಗಾದಿ ಹಬ್ಬದಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನಿವಾಸದಲ್ಲಿ ಕಾಂಗ್ರೆಸ್ ಬಾವುಟ ಹಿಡಿದರು. ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವ ಹಿರಿಯ ನಾಯಕನನ್ನು (BJP Senior Leaders) ಸಳೆಯಲು ಕಾಂಗ್ರೆಸ್ ಮುಂದಾಗಿದೆ. ಯಾದಗಿರಿ ಭಾಗದಲ್ಲಿ ಪ್ರಧಾನಿ ಮೋದಿ (PM Modi) ಅವರನ್ನು ಕರೆಸುವ ಮೂಲಕ ಬಿಜೆಪಿ ಸ್ಥಳೀಯವಾಗಿ ಪಕ್ಷ ಸಂಘಟನೆ ಮುಂದಾಗಿತ್ತು. ಯಾದಗಿರಿ (Yadagiri) ಭಾಗದಲ್ಲಿಯೂ ಮೋದಿ ಅಲೆ ಮೂಲಕ ಗೆಲ್ಲುವ ಪ್ಲಾನ್ ಮಾಡಿಕೊಂಡಿದೆ. ಇದೀಗ ಯಾದಗಿರಿಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದ ಚಿಂಚನಸೂರ್ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿತ್ತು. ಚಿಂಚನಸೂರ್​ ಬೆನ್ನಲ್ಲೇ ಮತ್ತೋರ್ವ ನಾಯಕನನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.


ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಡಾ.ಎ.ಬಿ.ಮಾಲಕರೆಡ್ಡಿ (Dr. A.B.Malakareddy) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆ ರಾಜ್ಯ ರಾಜಕೀಯ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಬಾರಿ ಘರ್ ವಾಪ್ಸಿ ಆಗ್ತಾರಾ ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿವೆ.


ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿರುವ ಪುತ್ರಿ


ಮಾಲಕರೆಡ್ಡಿ ಪುತ್ರಿ ಡಾ.ಅನುರಾಗ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್​ ಟಿಕೆಟ್​​ಗಾಗಿ ಆರ್ಜಿ ಸಲ್ಲಿಕೆ ಮಾಡಿದ್ದಾರೆ. ತಂದೆ ಬಿಜೆಪಿಯಲ್ಲಿದ್ರೂ ಪುತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮಾಲಕರೆಡ್ಡಿ ಬಿಜೆಪಿ ತೊರೆದ್ರೆ ಕಾಂಗ್ರೆಸ್​​ಗೆ ಯಾದಗಿರಿ ಭಾಗದಲ್ಲಿ ಲಾಭವಾಗಲಿದೆ ಅನ್ನೋದು ಕೈ ನಾಯಕರ ಲೆಕ್ಕಾಚಾರ ಆಗಿದೆ.




ಖರ್ಗೆ ಒಪ್ಪಿಗೆಗೆ ವೇಟಿಂಗ್ !


ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಡಾ.ಅನುರಾಗ ಅವರಿಗೆ ಟಿಕೆಟ್ ನೀಡಿದ್ರೆ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇತ್ತ ಮಾಲಕರೆಡ್ಡಿ ಸಹ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದು, ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆಗೆ ಕಾಯುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


ಎ.ಬಿ.ಮಾಲಕರೆಡ್ಡಿ, ಮಾಜಿ ಸಚಿವ


ಇದನ್ನೂ ಓದಿ:  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ


ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ


ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಮೂಲ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ  ಮತ್ತೆ ಬರಮಾಡಿಕೊಳ್ಳುವ ಮೂಲಕ ಪಕ್ಷ ಸಂಘಟನೆ ಮಾಡುತ್ತಿದೆ. ಹೀಗಾಗಿ ಪ್ರಭಾವಿ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ.

First published: