• Home
  • »
  • News
  • »
  • state
  • »
  • Siddaramaiah: ನಾವು ನಿಯತ್ತಿನ ನಾಯಿಗಳು, ದೇಶ, ಜನರ ಪರ ನಮ್ಮ ನಿಯತ್ತು; ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

Siddaramaiah: ನಾವು ನಿಯತ್ತಿನ ನಾಯಿಗಳು, ದೇಶ, ಜನರ ಪರ ನಮ್ಮ ನಿಯತ್ತು; ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಲ್ಲುವವರು ಅಧಿಕಾರಕ್ಕಾಗಿ ದೇಶವನ್ನೇ ಬಲಿ ಕೊಡದಿರುತ್ತಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

  • Share this:

ಬೆಂಗಳೂರು: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ (Hagaribommanahalli, Vijayanagara) ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮುಂದೆ ನಾಯಿ ಮರಿ ತರಾ ಇರುತ್ತೀರಿ. ಗಢಗಢ ಅಂತ ನಡುಗುತ್ತೀರಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಬಿಜೆಪಿ (BJP) ಖಂಡಿಸಿ ತಿರುಗೇಟು ನೀಡಿದೆ. ಸಾಲು ಸಾಲು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಆಂತರಿಕ ವಿಚಾರವನ್ನು ಮುನ್ನಲೆಗೆ ತಂದು ನಾವು ನಿಯತ್ತಿನ ನಾಯಿಗಳು ಎಂದು ವಾಗ್ದಾಳಿ ನಡೆಸಿದೆ.


ನಾವು ನಿಯತ್ತಿನ ನಾಯಿಗಳು ನಮ್ಮ ನಿಯತ್ತು ದೇಶದ ಪರ, ಜನತೆಯ ಪರ. ಆದರೆ, ಕಾಂಗ್ರೆಸ್ಸಿಗರ ನಿಯತ್ತು ಇಟಾಲಿಯನ್ ಗಾಂಧಿಗಳು, ಪಿಎಫ್ಐ ಹಾಗೂ ಜಿಹಾದಿಗಳ ಪರ. ಜೈಲಿಗೆ ಹೋಗಿ ಬೇಲ್‌ ಮೇಲೆ ಹೊರ ಬಂದವರಿಗೆ ಕಾಂಗ್ರೆಸ್‌ನಲ್ಲಿ ರಾಜಾತಿಥ್ಯವಿದೆ. ಭ್ರಷ್ಟಾಚಾರದ ಆರೋಪಿ ಡಿಕೆ ಶಿವಕುಮಾರ್​ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕರೆ, ಕೊಲೆ ಆರೋಪಿ ವಿನಯ್ ಕುಲಕರ್ಣಿ  ಕೆಪಿಸಿಸಿಯ ಉಪಾಧ್ಯಕ್ಷ ಪಟ್ಟ ನೀಡಲಾಗಿದೆ. ಕೊಲೆಗಾರರು, ಭ್ರಷ್ಟರು ತುಂಬಿರೋ ಕಾಂಗ್ರೆಸ್ ಒಂದು ಕಳ್ಳರ ಸಂತೆ ಎಂದು ಬಿಜೆಪಿ ತಿರುಗೇಟು ನೀಡಿದೆ.


ಜನತೆಗೆ, ನಾಡಿಗೆ ನಮ್ಮ ನಿಯತ್ತು


ಹಣ ಕೊಟ್ಟರೆ, ಕಾಂಗ್ರೆಸ್‌ ಟಿಕೆಟ್‌ ಕಳ್ಳೆಕಾಯಂತೆ ಸಿಗುತ್ತಿದೆ. ಆಸಕ್ತರು ಸಂಪರ್ಕಿಸಬಹುದು. ಕಳ್ಳರು, ಖದೀಮರು, ಭ್ರಷ್ಟರು, ಮನೆ ಮುರುಕರಿಗೆ ಮೊದಲ ಆದ್ಯತೆ. ನಿಯತ್ತಿನ ಪ್ರಾಣಿ ನಾಯಿಯನ್ನು ನಮಗೆ ಹೋಲಿಸಿದ್ದೀರಿ ಸಿದ್ದರಾಮಯ್ಯನವರೇ, ನಿಜ, ಈ ದೇಶದ ಪರ, ನಮ್ಮ ಜನತೆಯ ಪರ ಹಾಗೂ ಈ ನಾಡಿನ ಅಸ್ಮಿತೆಯ ಪರ ನಮ್ಮ ನಿಯತ್ತು ಸದಾ ಇದ್ದದ್ದೇ. ಆದರೆ ಕಾಂಗ್ರೆಸ್ಸಿಗರ ನಿಯತ್ತು ಸದಾ ಕಾಲ ಇಟಾಲಿಯನ್‌ ಗಾಂಧಿಗಳು, ಪಿಎಫ್‌ಐನಂಥ ಸಂಘಟನೆಗಳು ಮತ್ತು ಜಿಹಾದಿಗಳ ಪರ ಇರುವುದು ದುರಂತ ಎಂದು ವಾಗ್ದಾಳಿ ನಡೆಸಿದೆ.


ನೀಚ ಮಟ್ಟದ ಹೇಳಿಕೆ ನೀಡುವಲ್ಲಿ ನೀವು ನಿಸ್ಸೀಮರು


ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಹಿರಿಯ ಕಾಂಗ್ರೆಸ್‌ ನಾಯಕರನ್ನೂ ಹೆಸರು ಹಿಡಿದೇ ಕರೆಯುವುದು. ಅವರು ಹೇಗೇ ಕರೆದರೂ ‘ಪಿಡಿ’ನಿಷ್ಠೆ ತೋರುವ ಕಾಂಗ್ರೆಸ್‌ ನಾಯಕರಿಗೆ ಯಾವುದೇ ರೀತಿಯ ಮುಜುಗರ ಆಗುವುದಿಲ್ಲ. ರಾಜಕೀಯಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಲ್ಲುವವರು ಅಧಿಕಾರಕ್ಕಾಗಿ ದೇಶವನ್ನೇ ಬಲಿ ಕೊಡದಿರುತ್ತಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.


ರಾಜ್ಯದ ಮುಖ್ಯಮಂತ್ರಿಗಳನ್ನು ನಾಯಿ ಎಂಬ ಮೂಲಕ ಒಂದು ಕಾಲದಲ್ಲಿ ತಾವೇ ಕೂತಿದ್ದ ಸ್ಥಾನಕ್ಕೆ ಅವಮಾನ ಮಾಡುವ ನೀಚ ಮಟ್ಟಕ್ಕೆ ಇಳಿದಿದ್ದೀರಿ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೇ ಹೊರತು ಬಿಜೆಪಿಗಷ್ಟೇ ಅಲ್ಲ. ಚುನಾವಣಾ ಹೊತ್ತಲ್ಲಿ ನೀಚ ಮಟ್ಟದ ಹೇಳಿಕೆ ನೀಡುವಲ್ಲಿ ನೀವು ನಿಸ್ಸೀಮರು ಎಂದು ಟ್ವೀಟ್ ಮಾಡಿದೆ.


ಇತರರು ನಿಮಗೆ ಸೇವಕ & ನಾಯಿಯಂತೆಲ್ಲ ಕಾಣುವುದು ಸಹಜ


ಈ ಹಿಂದೆ ನೀವು ಇಷ್ಟೇ ಪ್ರಮಾಣದಲ್ಲಿ ಧೃತಿಗೆಟ್ಟದ್ದು ದೇವೇಗೌಡರನ್ನು ಬಿಟ್ಟು ಪಕ್ಷ ತೊರೆದು ಬಂದಿದ್ದಾಗ. ಈಗ ತಮಗಿನ್ನೂ ಒಂದೂ ಕ್ಷೇತ್ರ ಸಿಗದ ಕಾರಣ ಮತ್ತೆ ಅಷ್ಟೇ ಪ್ರಮಾಣದಲ್ಲಿ ಗಲಿಬಿಲಿಗೊಂಡಿದ್ದೀರಿ ಎಂಬುದನ್ನು ನಿಮ್ಮ ಹೇಳಿಕೆಗಳೇ ಸಾಬೀತುಪಡಿಸುತ್ತಿವೆ ಸಿದ್ದರಾಮಯ್ಯನವರೇ,


ಇದನ್ನೂ ಓದಿ:  Siddaramaiah: 'ಮೋದಿ ಎದುರು ಬೊಮ್ಮಾಯಿ ನಾಯಿ ಮರಿ ತರ, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳ್ದೆ' -ಅಂತ ಸಿದ್ದರಾಮಯ್ಯ ಸಮಜಾಯಿಷಿ


ದೇಶದ ಪ್ರಧಾನಿಗಳನ್ನೂ ತಮ್ಮ ನಿರ್ದೇಶನದ ಅನುಸಾರ ಕುಣಿಸುತ್ತಿದ್ದ ಅಧ್ಯಕ್ಷರ ಪರಂಪರೆ ಇರುವ ಪಕ್ಷದಲ್ಲಿ ತಾವಿದ್ದೀರಿ. ಹಾಗಾಗಿ ಇತರರು ನಿಮಗೆ ಸೇವಕ & ನಾಯಿಯಂತೆಲ್ಲ ಕಾಣುವುದು ಸಹಜ. ವಂಶ ಪಾರಂಪರ್ಯ ಆಡಳಿತವಿಲ್ಲದ ಕಾರ್ಯಕರ್ತರ ಪಕ್ಷವಾದ ನಮಗೆ ನಿಮ್ಮ ಮಾತಿನ ಧಾಟಿ ಅಷ್ಟು ಬೇಗ ಅರ್ಥವಾಗುವುದಿಲ್ಲ, ಇರಲಿ ಎಂದು ವ್ಯಂಗ್ಯವಾಡಿದೆ.

Published by:Mahmadrafik K
First published: