ಶಿರಾ ವಿಧಾನಸಭಾ ಉಪಚುನಾವಣೆ: ಗೊಲ್ಲ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ

ಲತಾ ರವಿಕುಮಾರ್ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದ ಸದಸ್ಯರೂ ಮುಂದೇ ಬಂದು ಸಹಿ ಹಾಕಿದ್ದಾರೆ. ನಾವೂ ಕೂಡಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಲು ಸಿದ್ದರಿದ್ದೇವೆ. ಇದರಲ್ಲಿ ಸುರೇಶ್ ಗೌಡರ ಪಾತ್ರವಾಗಲಿ, ಬಿಜೆಪಿ ಪಕ್ಷದ ಪಾತ್ರವಾಗಲಿ ಇಲ್ಲಾ ಅಂತ ನರಸಿಂಹ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

news18-kannada
Updated:September 13, 2020, 7:08 AM IST
ಶಿರಾ ವಿಧಾನಸಭಾ ಉಪಚುನಾವಣೆ: ಗೊಲ್ಲ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ
ಬಿಜೆಪಿ
  • Share this:
ತುಮಕೂರು(ಸೆ. 13): ಗೊಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿಯೇ ಜಿಲ್ಲಾ ಪಂಚಾಯಿತಿ ಹಾಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಕೈಗೊಂಡಿದ್ದೇವೆ. ಜೆಡಿಎಸ್ ಮುಖಂಡರು ಕೂಡ ಮುಂದೆ ಬಂದು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ರೆ, ನಾವು ಕೂಡ ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಸಿದ್ದ ಎಂದು ತುಮಕೂರು ಜಿಲ್ಲಾ ಪಂಚಾಯತ್​​ನ ಹಾಲಿ ಉಪಾಧ್ಯಕ್ಷೆಯ ಪತಿ ನರಸಿಂಹಮೂರ್ತಿ ಹೇಳಿದ್ದಾರೆ. ಗೊಲ್ಲ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೊಡಲೇಬೇಕು ಎಂದು ಸದಸ್ಯರೆಲ್ಲರೂ ಸೇರಿ ಒಟ್ಟಿಗೆ ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿದ್ದೇವೆ. ಲತಾ ರವಿಕುಮಾರ್ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದ ಸದಸ್ಯರೂ ಮುಂದೇ ಬಂದು ಸಹಿ ಹಾಕಿದ್ದಾರೆ. ನಾವೂ ಕೂಡಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಲು ಸಿದ್ದರಿದ್ದೇವೆ. ಇದರಲ್ಲಿ ಸುರೇಶ್ ಗೌಡರ ಪಾತ್ರವಾಗಲಿ, ಬಿಜೆಪಿ ಪಕ್ಷದ ಪಾತ್ರವಾಗಲಿ ಇಲ್ಲಾ ಅಂತ ನರಸಿಂಹ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದ ನರಸಿಂಹ ಮೂರ್ತಿ ಅಧ್ಯಕ್ಷೆ ಲತಾರವರ ಪತಿ ಹಾಗೂ ಜೆಡಿಎಸ್ ಮುಖಂಡ ಕಲ್ಕೆರೆ ರವಿಕುಮಾರ್ ಅವರು ಹತಾಷರಾಗಿ ನಮ್ಮ ಪಕ್ಷದ ನಾಯಕರಾಗಿರುವ ಸುರೇಶ್ ಗೌಡರ ವಿರುದ್ದ ವಚನ ಭ್ರಷ್ಟ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, 2016ರಲ್ಲಿ ಜಿ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂಧರ್ಭದಲ್ಲಿ ಒಪ್ಪಂದದಂತೆ 30:30 ತಿಂಗಳು ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ ಎರಡೂವರೆ ವರ್ಷಕ್ಕೆ ಅಧಿಕಾರ ಬಿಟ್ಟುಕೊಡಲು ಕೇಳಿದಾಗ ಅವರು ಒಪ್ಪಲಿಲ್ಲ ಎಂದರು.


ಇದನ್ನೂ ಓದಿ: ಕಾವೇರಿದ ಶಿರಾ ಉಪಚುನಾವಣೆ: ಬಿಜೆಪಿ ಎಲೆಕ್ಷನ್​​ ಗಿಮಿಕ್​​, ಹಲವು ಕಾಮಗಾರಿಗಳಿಗೆ ಚಾಲನೆ

ಹೀಗಾಗಿ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಎಲ್ಲರೂ ಅವರನ್ನ ಅಧ್ಯಕ್ಷ ಸ್ಥಾನದಿಂದ ಇಳಿಸಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷದ ಗೊಲ್ಲ ಸಮುದಾಯದ ಸದಸ್ಯೆಯಾಗಿರುವ ಯಶೋಧಮ್ಮರನ್ನ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಕ್ಷದ ಸದಸ್ಯರು ತೀರ್ಮಾನಿಸಿ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ಸುರೇಶ್ ಗೌಡರು ವಚನ ಭ್ರಷ್ಟರಲ್ಲ. ಅವರ ವಿರುದ್ದ ಹೇಳಿಕೆ ನೀಡುವುದು ಸೂಕ್ತ ಅಲ್ಲ. ಅವರ ಹೇಳಿಕೆಯನ್ನ ವಾಪಸ್ ಪಡೆಯಬೇಕು ಎಂಬುದು ಉಪಾಧ್ಯಕ್ಷೆ ಶಾರಸ ನರಸಿಂಹಮೂರ್ತಿಯವರ ಒತ್ತಾಯವಾಗಿದೆ.
Published by: Ganesh Nachikethu
First published: September 13, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading