HOME » NEWS » State » BJP IS READY FOR COMING BBMP ELECTION AND BY ELECTION IN KARNATAKA LG

ಬಿಬಿಎಂಪಿ ಚುನಾವಣೆ ಮತ್ತು ಉಪಚುನಾವಣೆಗೆ ಬಿಜೆಪಿ ಸಿದ್ಧತೆ; ಮತ್ತಷ್ಟು ಪಕ್ಷ ಸಂಘಟನೆಗೆ ಮುಂದಾದ ನಾಯಕರು

ಪರಿಷತ್​ನಲ್ಲೂ ಕೂಡ ಗಲಭೆ ಗದ್ದಲ ಮಾಡಿಸಿದ್ದೇ ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸಬೇಕು. ಕಾಂಗ್ರೆಸ್​ ಪಕ್ಷ ಗಲಭೆ, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಹುನ್ನಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

news18-kannada
Updated:December 20, 2020, 12:21 PM IST
ಬಿಬಿಎಂಪಿ ಚುನಾವಣೆ ಮತ್ತು ಉಪಚುನಾವಣೆಗೆ ಬಿಜೆಪಿ ಸಿದ್ಧತೆ; ಮತ್ತಷ್ಟು ಪಕ್ಷ ಸಂಘಟನೆಗೆ ಮುಂದಾದ ನಾಯಕರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಡಿ.20): ಬಿಬಿಎಂಪಿ ಚುನಾವಣೆ ಹಾಗೂ ಉಪಚುನಾವಣೆ ಹಿನ್ನೆಲೆ, ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳು ಸಭೆ ನಡೆಯುತ್ತಿದ್ದು, ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದೊಮ್ಮಲೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ಪಿ.ಸಿ. ಮೋಹನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕರಾದ ಮುನಿರತ್ನ, ರಘು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ಉಪಚುನಾವಣೆಗೆ ಪಕ್ಷ ಸಜ್ಜುಗೊಳಿಸುವುದು ಹಾಗೂ ರಾಜ್ಯದಲ್ಲಿ ಮತ್ತಷ್ಟು ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ವಿವಿಧ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುವ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊರೋನಾ ವಾರಿಯರ್ಸ್​​ಗಳಾದ ನರ್ಸ್, ಆಶಾ ಕಾರ್ಯಕರ್ತರು, ಪೊಲೀಸ್, ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀಕ್ ಕುಮಾರ್ ಕಟೀಲ್,  ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಸಭೆ ಸೇರಿದ್ದೇವೆ. ಬಿಜೆಪಿ ಕಾರ್ಯಕರ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೇ.80 ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಗೆಲ್ಲಲಿದ್ದಾರೆ. 1,16,000 ಕಾರ್ಯಕರ್ತರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ವಿರೋಧ ಪಕ್ಷಗಳೂ ಕೂಡ ನಮ್ಮ ಸಂಘಟನೆಯ ಕೆಲಸ ಮೆಚ್ಚಿಕೊಂಡಿವೆ ಎಂದು ಹೇಳಿದರು.

ಮುಂದುವರೆ ಅವರು, ವಾತಾವರಣ ಬಹಳ ಬದಲಾವಣೆ ಆಗ್ತಿದೆ. ಕಾಂಗ್ರೆಸ್ ನ ಆಂತರಿಕ ಒಳ ಜಗಳಗಳು ಬಹಿರಂಗವಾಗುತ್ತಿವೆ. ರಾಜ್ಯದಲ್ಲಂತೂ ಪೂರ್ಣವಾದ ವ್ಯತ್ಯಾಸ ಕಾಣುತ್ತಿದೆ.  ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್​ನವರೇ ಸೋಲಿಸಿದ್ರು ಅಂತ ಹೇಳುವ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಆಂತರಿಕ ಜಗಳದಲ್ಲಿ ತೊಡಗಿದೆ.  ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಬೇರೆ ಬೇರೆ ತಂತ್ರ ಮಾಡುತ್ತಿದೆ.  ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಗಲಭೆ ಮಾಡಿಸುತ್ತದೆ ಎಂದು ಕಟೀಲ್ ವ್ಯಂಗ್ಯ ಮಾಡಿದರು.

ಮಾಲೆಗಾಂವ್‌‌ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್​ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್‌

ಕಾಂಗ್ರೆಸ್ ಬೆಂಕಿ ಹಾಕುವ ಕೆಲಸ ಮಾಡಿತ್ತು. ತಬ್ಲಿಘಿಗಳ ಬೆನ್ನಿಗೆ ನಿಂತು ಗಲಭೆ ಮಾಡಿಸಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೂಡ ಮಾಡಿಸಿದ್ದು ಕಾಂಗ್ರೆಸ್.  ಗಲಭೆ ಸೃಷ್ಟಿ ಮಾಡ್ತಾ ಮಾಡ್ತಾ ಸಂವಿಧಾನದ ಮೇಲೆ ಮತ್ತು ಪ್ರಜಾಪ್ರಭುತ್ವದ ಮೇಲೂ ನಂಬಿಕೆ ಇಲ್ಲ. ಪರಿಷತ್​ನಲ್ಲೂ ಕೂಡ ಗಲಭೆ ಗದ್ದಲ ಮಾಡಿಸಿದ್ದೇ ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸಬೇಕು. ಕಾಂಗ್ರೆಸ್​ ಪಕ್ಷ ಗಲಭೆ, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಹುನ್ನಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದಕ್ಕೆ ಕಟೀಲ್​ರವರು ಸಿಎಂ ಬಿಎಸ್​ವೈಗೆ ಅಭಿನಂದನೆ ಸಲ್ಲಿಸಿದರು. ಸಿದ್ದರಾಮಯ್ಯ ಇದನ್ನೇ ನೆಪವಾಗಿಟ್ಟುಕೊಂಡು ಹಿಂದುಳಿದ ವರ್ಗ, ಕೊಡವ ಸಮುದಾಯಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ.  ಹಿಂದುಳಿದ ವರ್ಗ, ಕೊಡವ ಸಮುದಾಯದ‌ ಮುಂದೆ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು. ಮತ ಬ್ಯಾಂಕ್​​ಗೋಸ್ಕರ ಸಿದ್ದರಾಮಯ್ಯ ಕೊಡವ ಸಮಾಜಕ್ಕೆ ಅವಮಾನ ಮಾಡಿದ್ದಾರೆ.  ಸಿದ್ದರಾಮಯ್ಯ ಕೊಡವ ಸಮಾಜದ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.ಸಿಎಎಯಲ್ಲಿ ಬೆಂಕಿ ಹಾಕುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಹೀಗಾಗಿ ಬೇರೆ ಬೇರೆ ರೀತಿಯಲ್ಲಿ ಗಲಭೆ ಸೃಷ್ಟಿಸ್ತಿದೆ. ರೈತರ ವಿಚಾರದಲ್ಲೂ ಬೆಂಕಿ ಹಚ್ತಿದೆ. ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದೆ. ಕಾಂಗ್ರೆಸ್​ ರೈತರ ಹೆಸರಲ್ಲಿ ಗಲಭೆ ರಾಜಕಾರಣ ಮಾಡ್ತಿದೆ.  ರೈತರನ್ನು ರಕ್ಷಣೆ ಮಾಡಬೇಕಾದ ಕಾಂಗ್ರೆಸ್ ಅವರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದರು.

ಹೀಗಾಗಿ ರೈತರಿಗೆ ಪರವಾಗಿರುವ ಯೋಜನೆಗಳೇನು ಎನ್ನುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು ವಾಜಪೇಯಿ ಜನ್ಮದಿನದ ಮುಂಚಿತವಾಗಿ ಎಲ್ಲ ಮನೆ ಮನೆಗೆ ಕರಪತ್ರ ಹಂಚಬೇಕು.  ವಾಜಪೇಯಿ ಜನ್ಮ ದಿನದಂದು ಪ್ರಧಾನಿ ಮೋದಿ ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ರೈತರ ಅಕೌಂಟ್ ಗೆ 2000 ರೂ ಈ ವರ್ಷದ ಹಣ ನೇರವಾಗಿ ಜಮೆ ಆಗಲಿದೆ ಎಂದು ಹೇಳಿದರು.

ನಮ್ಮ ಗ್ರಾಮ ಸ್ವರಾಜ್ ಯಾತ್ರೆ ಯಶಸ್ವಿಯಾಗಿದೆ. ಇನ್ನು ಮೂರು ತಿಂಗಳಿಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​ಗೆ ಚುನಾವಣೆ ಬರಲಿದೆ. ಪ್ರತಿ ಜಿಲ್ಲೆಗಳಲ್ಲಿ ಒಂದೊಂದು ಸಮಾವೇಶ ಮಾಡಲಿದ್ದೇವೆ. ಇಂದಿನಿಂದಲೇ ಜಿಲ್ಲಾ ಪಂಚಾಯತ್​ ಚುನಾವಣೆಗೂ ನಮ್ಮ ತಯಾರಿ ನಡೆಯಲಿದೆ. ಮುಂದಿನ 15 ದಿನಗಳು ನಮ್ಮ ಪಾಲಿಗೆ ಸವಾಲು. ಮನೆ ಮನೆಗೆ ನಮ್ಮ ಯೋಜನೆಗಳನ್ನು ತಲುಪಿಸೋಣ ಈ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಯಲ್ಲಿ ಪಕ್ಷ ಗೆಲ್ಲಿಸಲು ಶ್ರಮಿಸೋಣ ಎಂದರು.
Published by: Latha CG
First published: December 20, 2020, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories