• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ವಿಧಾನಸಭಾ ಚುನಾವಣೆಗೆ ಸಿದ್ಧವಾದ ಬಿಜೆಪಿ; ವಿಜಯೇಂದ್ರಗೆ ಮಹತ್ವದ ಸ್ಥಾನ

Karnataka Election 2023: ವಿಧಾನಸಭಾ ಚುನಾವಣೆಗೆ ಸಿದ್ಧವಾದ ಬಿಜೆಪಿ; ವಿಜಯೇಂದ್ರಗೆ ಮಹತ್ವದ ಸ್ಥಾನ

ಬಿವೈ ವಿಜಯೇಂದ್ರ

ಬಿವೈ ವಿಜಯೇಂದ್ರ

ರಾಜ್ಯ ನಾಯಕರ ರಥಯಾತ್ರೆ (Ratha Yatre), ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ (Morcha Rally), ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ (Election Manifesto) ತಯಾರಿ ಸಲಹಾ ಅಭಿಯಾನಕ್ಕೆ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Assembly Election 2023) ರಾಜ್ಯ ಬಿಜೆಪಿ (Karnataka BJP) ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಯ ಪೂರ್ವಸಿದ್ಧತಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಬಿಜೆಪಿ ಹಂಚಿಕೆ ಮಾಡಲಾಗಿದೆ. ರಾಜ್ಯ ನಾಯಕರ ರಥಯಾತ್ರೆ (Ratha Yatre), ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ (Morcha Rally), ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ (Election Manifesto) ತಯಾರಿ ಸಲಹಾ ಅಭಿಯಾನಕ್ಕೆ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ನಾಲ್ಕು ತಂಡಗಳ ರಥಯಾತ್ರೆಗೂ ಮೂರು ಜನ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಮೋರ್ಚಾಗಳ ಸಮಾವೇಶ ಆಯೋಜನೆ ಜವಾಬ್ದಾರಿಯನ್ನು ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಂಡಕ್ಕೆ ನೀಡಲಾಗಿದೆ.


ಫಲಾನುಭವಿಗಳ ಸಮ್ಮೇಳನದ ಜವಾಬ್ದಾರಿಯನ್ನು ಸಚಿವ ಹಾಲಪ್ಪ ಆಚಾರ್ ಹಾಗೂ ಎಸ್.ಟಿ.ಸೋಮಶೇಖರ್ ತಂಡಕ್ಕೆ ನೀಡಲಾಗಿದೆ. ವಿಡಿಯೋ ವ್ಯಾನ್ ಪ್ರಚಾರದ ಜವಬ್ದಾರಿ ಎಸ್.ವಿ.ರಾಘವೇಂದ್ರ ತಂಡಕ್ಕೆ ನೀಡಲಾಗಿದೆ. ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಉಸ್ತುವಾರಿ ಸಚಿವ ಕೆ ಸುಧಾಕರ್ ಹಾಗೂ ಬಿಸಿ ನಾಗೇಶ್ ತಂಡಕ್ಕೆ ನೀಡಲಾಗಿದೆ. ನಾಲ್ಕು ಭಾಗಗಳಲ್ಲಿ ನಾಲ್ಕು ತಂಡಗಳಾಗಿ ರಥಯಾತ್ರೆ ಸಂಚಾಲಕರನ್ನು ನೇಮಿಸಲಾಗಿದೆ.


ಯಾತ್ರೆ -1


ಎಂ ರಾಜೇಂದ್ರ - ರಾಜ್ಯ ಉಪಾಧ್ಯಕ್ಷರು


ಎಸ್ ದತ್ತಾತ್ರಿ - ಮಾಜಿ ಜಿಲ್ಲಾ ಅಧ್ಯಕ್ಷರು,ಶಿವಮೊಗ್ಗ


ಕಿಶೋರ್ - ಜಿಲ್ಲಾ ಉಪಾಧ್ಯಕ್ಷರು ಉಡುಪಿ


ಯಾತ್ರೆ - 2


ಪರಿಷತ್ ಸದಸ್ಯ ಚಲವಾದಿ ನಾರಯಣಸ್ವಾಮಿ


ಜಿಲ್ಲಾ ಪ್ರಭಾರಿ ಸಚ್ಚಿದಾನಂದ


ವಿಧಾನಪರಿಷತ್ ಸದಸ್ಯ - ಅ ದೇವೇಗೌಡ


ಸಾಂದರ್ಭಿಕ ಚಿತ್ರ


ಯಾತ್ರೆ - 3


ಮಾಜಿ ಪರಿಷತ್ ಸದಸ್ಯ ಅರುಣ್ ಶಹಾಪುರ


ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ


ಮಲ್ಲಿಕಾರ್ಜುನ ಬಾಳೀಕಾಯಿ - ಯುವ ಮೋರ್ಚಾ


ಯಾತ್ರೆ - 4


ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ಅಮರನಾಥ್ ಪಾಟೀಲ್, ಸಿದ್ದೇಶ್ ಪಾಟೀಲ್


ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ತಂಡಕ್ಕೆ 7 ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಹೊಣೆಗಾರಿಕೆ ನೀಡಲಾಗಿದೆ. ಮೋರ್ಚಾಗಳ ಜಿಲ್ಲಾ ಸಮಾವೇಶಗಳಿಗೆ ರಾಜ್ಯ ಸಂಚಾಲಕರಾಗಿ ವಿಜಯೇಂದ್ರ ಅವರನ್ನ ನೇಮಕ ಮಾಡಲಾಗಿದೆ. ಹತ್ತು ಜನರ ತಂಡಕ್ಕೆ ವಿಜಯೇಂದ್ರ ಸಂಚಾಲಕರಾಗಲಿದ್ದಾರೆ.


ದಯಾನಂದ ಪೈ ಪುತ್ರ ರವೀಂದ್ರ ಪೈಗೂ ಸ್ಥಾನ


ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಸಹ ಸಂಚಾಲಕರಾಗಿ ರವೀಂದ್ರ ಪೈ ಅವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಬಿಜೆಪಿಯ ವೃತ್ತಿಪರ ಪ್ರಕೋಷ್ಠದಲ್ಲಿ ಸಹ ಸಂಚಾಲಕರಾಗಿ ರವೀಂದ್ರ ಪೈ ತೊಡಗಿಸಿಕೊಂಡಿದ್ದಾರೆ.


ನಿನ್ನೆಯಷ್ಟೇ ಬಿಎಂಎಸ್ ಟ್ರಸ್ಟ್ ಅಕ್ರಮ ಮಾರಾಟ ಆರೋಪ ಸಂಬಂಧ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಫೋಟೋ ಬಿಡುಗಡೆ ಮಾಡಿದ್ದರು. ಅಶ್ವಥ್ ನಾರಾಯಣ ಅವರು ಬಿಎಮ್ಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಸದಸ್ಯ ದಯಾನಂದ ಪೈ ಜತೆ ಊಟ ಮಾಡ್ತಿರೋ ಫೋಟೋವನ್ನು ರಿಲೀಸ್ ಮಾಡಿದ್ದಾರೆ.




ಕರ್ನಾಟಕ ಚುನಾವಣಾ ಬಿಜೆಪಿ ಉಸ್ತುವಾರಿಗೆ ಧರ್ಮೇಂದ್ರ ಪ್ರಧಾನ, ಅಣ್ಣಾಮಲೈ ನೇಮಕ


ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ಸಹಪ್ರಭಾರಿಯಾಗಿ ಅಣ್ಣಾಮಲೈ (Annamalai) ಅವರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಸಲಹೆ ಮೇರೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ:  Bengaluru: ರೀಲ್ಸ್​ ಜೊತೆಗಾರನ ಜೊತೆ ರಿಯಲ್ ಲೈಫ್​​ನಲ್ಲಿ ಪತ್ನಿ ಜೂಟ್; ಪತಿಯಿಂದ ದೂರು ದಾಖಲು


ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸದ್ಯ ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಮಂತ್ರಿಯಾಗಿದ್ದಾರೆ. ಇನ್ನು ಅಣ್ಣಾಮಲೈ ಪ್ರಸ್ತುತ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷರಾಗಿದ್ದಾರೆ. ಅಣ್ಣಾಮಲೈ ಕರ್ನಾಟಕ ಕೇಡರ್ ಐಪಿಎಸ್​ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಬಿಜೆಪಿ ಸೇರಿದ್ದಾರೆ.

Published by:Mahmadrafik K
First published: